ಬೇಡಿಕೆ ಕುಸಿತ: ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ

ಬೆಂಗಳೂರು, ಫೆಬ್ರವರಿ 22: ಸ್ಥಳೀಯ ಆಭರಣಕಾರರು ಮತ್ತು ವ್ಯಾಪಾರಿಗಳಿಂದ ಬೇಡಿಕೆ ಕಡಿಮೆಯಾಗಿರುವುದು, ಜಾಗತಿಕವಾಗಿ ಹೆಚ್ಚಿನ ಏರಿಕೆ ಕಾಣದಿರುವುದು ಇವೇ ಮುಂತಾದ ಕಾರಣಕ್ಕೆ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ.

ಬಂಗಾರದ ಬೆಲೆಯಲ್ಲಿ 100 ರೂಪಾಯಿ ಇಳಿಕೆಯಾಗಿದ್ದು, ಗುರುವಾರದಂದು ಚಿನಿವಾರ ಪೇಟೆಯಲ್ಲಿ ಸದ್ಯ 10 ಗ್ರಾಂ ಚಿನ್ನದ ಬೆಲೆ 31,350 ರೂಪಾಯಿ ಇದೆ.

Gold prices plunge by Rs100 on lacklustre demand

ಆದರೆ, ಬೆಳ್ಳಿ ಬೆಲೆಯಲ್ಲಿ 85 ರೂಪಾಯಿ ಏರಿಕೆಯಾಗಿದ್ದು, ಕೆಜಿ ಬೆಳ್ಳಿ ದರ 39,385 ರೂಪಾಯಿಗೆ ಬಂದು ತಲುಪಿದೆ. ಮದುವೆ ಮತ್ತು ಶುಭ ಸಮಾರಂಭಗಳ ಸೀಸನ್ ಮುಗಿಯುತ್ತ ಬಂದಿರುವುದರಿಂದ ಚಿನ್ನದ ಬೇಡಿಕೆ ಇಳಿಮುಖವಾಗಿದೆ.

ಆಭರಣ ವ್ಯಾಪಾರಿಗಳು ಬಂಗಾರ ಖರೀದಿಗೆ ಮುಗಿಬೀಳುತ್ತಿಲ್ಲ. ಕಳೆದ 2 ದಿನಗಳಲ್ಲಿ ಚಿನ್ನದ ಬೆಲೆ 350 ರೂಪಾಯಿ ಇಳಿಕೆ ಕಂಡಿದೆ. ಸವರನ್ ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 8 ಗ್ರಾಂಗೆ 24,800 ರೂಪಾಯಿ ಇದೆ. ಜಾಗತಿಕವಾಗಿ ಕೂಡಾ ಚಿನ್ನ ಶೇ 0.23ರಷ್ಟು ಇಳಿಕೆಯಾಗಿದ್ದು, ಪ್ರತಿ ಔನ್ಸ್ ಗೆ 1,321 ಡಾಲರ್ ನಷ್ಟಿತ್ತು. ಬೆಳ್ಳಿ ಶೇ 0.58ರಷ್ಟು ಕುಸಿದು ಪ್ರತಿ ಔನ್ಸಿಗೆ 16.41 ಡಾಲರ್ ನಷ್ಟಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+