₹ 2,50,000 ರೂಪಾಯಿ ಆಗಲಿದೆ ಚಿನ್ನದ ಬೆಲೆ, ಚಿನ್ನದ ಹೂಡಿಕೆಗೆ ಇದು ಬೆಸ್ಟ್ ಟೈಮ್ ? Gold Prices
Gold Prices May Soar to ₹2.5 Lakh: ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲ್ಲೇ ಇದೆ. ಕೇವಲ ಮೂರು ವರ್ಷಗಳ ಹಿಂದಷ್ಟೇ ಚಿನ್ನದ ಬೆಲೆಯು ಕೇವಲ 50,000 ಸಾವಿರದಿಂದ 60,000 ಸಾವಿರ ರೂಪಾಯಿಯ ಆಸುಪಾಸಿನಲ್ಲಿತ್ತು. ಆದರೆ ಇದೀಗ ಚಿನ್ನದ ಬೆಲೆಯು ಭರ್ಜರಿ ಹೆಚ್ಚಳವಾಗಿದ್ದು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಬರೋಬ್ಬರಿ 2 ಲಕ್ಷ ರೂಪಾಯಿ ಮುಟ್ಟದಲಿದೆ ಎನ್ನುತ್ತಿದ್ದಾರೆ ತಜ್ಞರು. ಇಷ್ಟಕ್ಕೂ ಈಗ ಚಿನ್ನದ ಬೆಲೆ ಎಷ್ಟಿದೆ ಹಾಗೂ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುವುದಕ್ಕೆ ಕಾರಣವೇನು ಎನ್ನುವ ವಿವರ ನೋಡೋಣ.
ವಿಶ್ವದಲ್ಲಿ ಆರ್ಥಿಕ ಅಸ್ಥಿರತೆ ಮೂಡಿದಾಗೆಲ್ಲವೂ ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುತ್ತದೆ. ಜನ ಚಿನ್ನ ಖರೀದಿ ಮಾಡುವುದು ಹಾಗೂ ಹೂಡಿಕೆ ಮಾಡುವುದು ಹೆಚ್ಚಾಗುತ್ತದೆ. ಕೋವಿಡ್ ನಂತರದಲ್ಲಿ ವಿಶ್ವದಲ್ಲಿ ಆರ್ಥಿಕ ಚೇತರಿಕೆ ಮೂಡುತ್ತಿದೆಯಾದರೂ ವಿಶ್ವದ ವಿವಿಧ ಪ್ರಮುಖ ರಾಷ್ಟ್ರಗಳ ನಡುವೇ ಏರ್ಪಟ್ಟ ಯುದ್ಧ ಹಾಗೂ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ತೆರಿಗೆ ನೀತಿ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ. ಅಲ್ಲದೇ ವಿಶ್ವದಾದ್ಯಂತ ಚಿನ್ನದ ಬೇಡಿಕೆ ಹೆಚ್ಚಾಗಿರುವುದು ಸಹ ಚಿನ್ನದ ಬೆಲೆಯಲ್ಲಿ ನಿರಂತರ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ.

ಕೆಲವೇ ದಿನಗಳಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ 2 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಜಾಗತಿಕ ಆರ್ಥಿಕ ಅಸ್ಥಿರತೆ, ರಾಜಕೀಯ ಉದ್ವಿಗ್ನತೆ ಹಾಗೂ ಬದಲಾವಣೆಗಳು ಚಿನ್ನದ ಬೆಕೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಕರೆನ್ಸಿ ಅಪಮೌಲ್ಯೀಕರಣ (ಉದಾ: ಡಾಲರ್ ಮುಂದೆ ರೂಪಾಯಿ ಮೌಲ್ಯದ ಕುಸಿತ) ಸೇರಿದಂತೆ ಹಲವು ಬೆಳವಣಿಗೆ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಅಲ್ಲದೇ ಇದೀಗ ಸಾಲು ಸಾಲು ಹಬ್ಬದ ಸೀಸನ್ ಆಗಿರುವ ಕಾರಣಕ್ಕೂ ಚಿನ್ನದ ಬೆಲೆ ಹೆಚ್ಚಳವಾಗಿದೆ.
ದೀರ್ಘಾವಧಿಯ ಹೂಡಿಕೆಗೆ ಚಿನ್ನ ಬೆಸ್ಟ್ ಆಗಿರುವ ಕಾರಣಕ್ಕೂ ಜನ ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಚಿನ್ನವು 10 ಗ್ರಾಂಗೆ ಸುಮಾರು 2,25,000 ರೂಪಾಯಿಗಳನ್ನು ತಲುಪಬಹುದು ಎಂದು ಸ್ವಸ್ತಿಕ ಇನ್ವೆಸ್ಟ್‌ಮಾರ್ಟ್‌ನ ಸಂತೋಷ್ ಮೀನಾ ಹೇಳಿದ್ದಾರೆ.
ಆದರೆ ಈಗ ಚಿನ್ನದ ಬೆಲೆ ಏರಿಕೆಯನ್ನು ಗಮನಿಸಿದರೆ ಇನ್ನು ಕೆಲವೇ ದಿನಗಳಲ್ಲಿ ಚಿನ್ನದ ಬೆಲೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುವುದಕ್ಕೆ ಇದು ಬೆಸ್ಟ್ ಟೈಮ್ ಎಂದೂ ತಜ್ಞರು ಹೇಳುತ್ತಿದ್ದಾರೆ.












Click it and Unblock the Notifications