ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ20 ಶೃಂಗಸಭೆ ಮೇಲೆ ಕಣ್ಣು, ಚಿನ್ನ, ಬೆಳ್ಳಿ ದರದಲ್ಲಿ ವ್ಯತ್ಯಯ

|
Google Oneindia Kannada News

ಬೆಂಗಳೂರು, ನವೆಂಬರ್ 23: ಹಬ್ಬದ ಸೀಸನ್ ನಂತರ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಮತ್ತೊಮ್ಮೆ ಇಳಿಕೆಯಾಗಿದೆ. ಗುರುವಾರದಂದು 65ರು ಏರಿಕೆ ಕಂಡಿತ್ತು. ಆದರೆ, ಶುಕ್ರವಾರದಂದು 90ರು ಕುಸಿತ ಕಂಡು 31,950 ರು ಪ್ರತಿ 10ಗ್ರಾಂನಂತೆ ವಹಿವಾಟು ನಡೆಸಿದೆ. ಬೆಳ್ಳಿ ಬೆಲೆ 200 ರು ಕುಸಿತ ಕಂಡು ಪ್ರತಿ ಕೆಜಿಗೆ 37,800ರು ನಷ್ಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆ ಹಾಗೂ ಸ್ಥಳೀಯ ಆಭರಣ ತಯಾರಕರಲ್ಲಿ ಹೆಚ್ಚಾದ ಬೇಡಿಕೆ ಬೆಲೆ ಏರಿಕೆಗೆ ಕಾರಣವಾಗಿತ್ತು. ಬೆಳ್ಳಿ ಕೂಡ ಗುರುವಾರದಂದು ಹೆಚ್ಚಳವಾಗಿದೆ. ಬೆಳ್ಳಿ 250 ರೂಪಾಯಿ ಏರಿಕೆ ಕಂಡಿದ್ದು, ಕೆ.ಜಿ. ಬೆಳ್ಳಿ ಬೆಲೆ 39,100 ರೂಪಾಯಿನಷ್ಟಿತ್ತು.

ಜಾಗತಿಕವಾಗಿ ಚಿನ್ನದ ಇಳಿಕೆಗೆ ಜಿ20 ಶೃಂಗಸಭೆ ಕಾರಣ ಎನ್ನಬಹುದಾಗಿದ್ದು, ಯುಎಸ್ಎ ಹಾಗೂ ಚೀನಾ ದೇಶದವರು ಯಾವ ರೀತಿ ಮಾತುಕತೆ ನಡೆಸಬಹುದು, ಏನೆಲ್ಲ ಒಪ್ಪಂದ ಮಾಡಿಕೊಳ್ಳಬಹುದು ಎಂಬುದರ ಮೇಲೆ ಅವಲಂಬಿತವಾಗಿದೆ.

ಚೀನಾ ನಂತರ ಭಾರತವು ಅತಿಹೆಚ್ಚು ಚಿನ್ನ ಆಮದು ಮಾಡಿಕೊಳ್ಳುತ್ತದೆ. ವರ್ಷಾಂತ್ಯ ಸಮೀಪಿಸುತ್ತಿದ್ದಂತೆ ಹಳದಿ ಲೋಹದ ಬೆಲೆಯಲ್ಲಿ ವ್ಯತ್ಯಾಸ ನಿರೀಕ್ಷಿತ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ಮಾರುಕಟ್ಟೆಯಲ್ಲಿ ಚಿನ್ನದ ದರ

ದೆಹಲಿ ಮಾರುಕಟ್ಟೆಯಲ್ಲಿ ಚಿನ್ನದ ದರ

ದೆಹಲಿ ಮಾರುಕಟ್ಟೆಯಲ್ಲಿ ಶೇಕಡಾ 99.9 ರಷ್ಟು ಹಾಗೂ ಶೇಕಡಾ 99.5 ರಷ್ಟು ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 31,950 ರೂಪಾಯಿ ಹಾಗೂ 31,800 ರೂಪಾಯಿಯಾಗಿದೆ. ಸವರನ್ ಚಿನ್ನದ ಬೆಲೆ ಸ್ಥಿರವಾಗಿದ್ದು, 8ಗ್ರಾಮ್ ಗೆ 24,800ರು ನಷ್ಟಿದೆ. ಕಳೆದ ಎರಡು ದಿನಗಳಲ್ಲಿ 90 ರು ಏರಿಕೆ ಹಾಗೂ ಇಳಿಕೆಯನ್ನು ಕಂಡಿದೆ.

ಬೆಂಗಳೂರಿನಲ್ಲಿ ಚಿನ್ನದ ದರ

ಬೆಂಗಳೂರಿನಲ್ಲಿ ಚಿನ್ನದ ದರ

ಶುಕ್ರವಾರದಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 29,000ರು(160 ರು ಇಳಿಕೆ) ನಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 30,950 ರು(170ರು ಇಳಿಕೆ) ನಷ್ಟಿದೆ. ಬೆಳ್ಳಿ 1 ಕೆಜಿಗೆ 41,100 ರು ನಷ್ಟಿದೆ.

ಜಾಗತಿಕವಾಗಿ ಚಿನ್ನದ ದರ

ಜಾಗತಿಕವಾಗಿ ಚಿನ್ನದ ದರ

ಜಾಗತಿಕವಾಗಿ ಚಿನ್ನದ ದರವು ಇಂಟ್ರಾಡೇನಲ್ಲಿ ಶೇ 0.1ರಷ್ಟು ಇಳಿಕೆ ಕಂಡು ಪ್ರತಿ ಔನ್ಸಿಗೆ 1,224.34 ಡಾಲರ್ ನಷ್ಟಿತ್ತು.

ಬೆಳ್ಳಿ ದರ ಸ್ಥಿರವಾಗಿದೆ

ಬೆಳ್ಳಿ ದರ ಸ್ಥಿರವಾಗಿದೆ

200ರು ಇಳಿಕೆ ಕಂಡು ಪ್ರತಿ 1 ಕೆಜಿಗೆ 37,800 ರು ಹಾಗೂ ವಾರದ ಲೆಕ್ಕದಲ್ಲಿ 302 ಇಳಿಕೆ ಕಂಡು 36,586 ಪ್ರತಿ ಕೆಜಿನಂತೆ ವಹಿವಾಟು ನಡೆಸಿದೆ. ಬೆಳ್ಳಿ ನಾಣ್ಯಗಳ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ. ಪ್ರತಿ 100 ತುಂಡುಗಳ ಖರೀದಿಗೆ 73,00ರು ಹಾಗೂ ಮಾರಾಟಕ್ಕೆ 74,000 ರು ನಷ್ಟಿದೆ.

English summary
A weak global trend and fading demand from local jewellers dragged down gold prices by Rs. 90 to Rs. 31,950 per 10 grams at the bullion market on Friday, reported news agency Press Trust of India (PTI).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X