ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷಕ್ಕೆ ಚಿನ್ನದ ಬೆಲೆ 10 ಗ್ರಾಂ 63,000 ರೂ. ತಲುಪುವ ಸಾಧ್ಯತೆ!

|
Google Oneindia Kannada News

ನವದೆಹಲಿ, ಡಿಸೆಂಬರ್ 28: ಯಾವುದೇ ಅನಿಶ್ಚಿತ ಕಾಲದಲ್ಲಿ ಚಿನ್ನದ ಮೇಲಿನ ಹೂಡಿಕೆಯು ಯಾವಾಗಲು ಸುರಕ್ಷಿತ ವಿಧಾನವೆಂದು ಭಾವಿಸುವವರೇ ಹೆಚ್ಚು. ಅದರಲ್ಲೂ ಭಾರತದಲ್ಲಿ ಚಿನ್ನದ ಮೇಲಿನ ವ್ಯಾಮೋಹ ಇನ್ನೂ ಜಾಸ್ತಿ. ಆದರೆ ಆಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಮುಂದಿನ ವರ್ಷ ಚಿನ್ನದ ಬೆಲೆ 10 ಗ್ರಾಂ.ಗೆ 63,000 ರೂಪಾಯಿಗೆ ತಲುಪುವ ಸಾಧ್ಯತೆ ಇದೆ.

ಕೊರೊನಾವೈರಸ್ ಸಾಂಕ್ರಾಮಿಕದಿಂದಾಗಿ ಉಂಟಾದ ಆರ್ಥಿಕ ಮತ್ತು ಸಾಮಾಜಿಕ ಅನಿಶ್ಚಿತತೆಯಿಂದ ಚಿನ್ನದ ಮೇಲಿನ ಹೂಡಿಕೆಯು ಸುರಕ್ಷಿತ ಎಂದು ಭಾವಿಸಿ ಹೂಡಿಕೆದಾರರ ಒಲವು ಮುಂದುವರಿದಿದೆ.

2020ರಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಹಳದಿ ಲೋಹ

2020ರಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಹಳದಿ ಲೋಹ

ಹೌದು, ಈ ವರ್ಷ ಹಳದಿ ಲೋಹದ ಬೆಲೆ ಎಂಸಿಎಕ್ಸ್‌ನಲ್ಲಿ 10 ಗ್ರಾಂಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು 56,191 ದಾಖಲಾಗಿತ್ತು ಮತ್ತು ಆಗಸ್ಟ್‌ನಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್‌ಗೆ 2,075 ಡಾಲರ್‌ಗಳನ್ನು ತಲುಪಿತ್ತು.

ಡಿಸೆಂಬರ್ 25ರಂದು 22, 24 ಕ್ಯಾರೆಟ್‌ ಚಿನ್ನದ ಬೆಲೆ ಎಷ್ಟು?ಡಿಸೆಂಬರ್ 25ರಂದು 22, 24 ಕ್ಯಾರೆಟ್‌ ಚಿನ್ನದ ಬೆಲೆ ಎಷ್ಟು?

ಹೂಡಿಕೆದಾರರ ಪ್ರಮುಖ ಆಕರ್ಷಣೆಯಾಗಿದೆ

ಹೂಡಿಕೆದಾರರ ಪ್ರಮುಖ ಆಕರ್ಷಣೆಯಾಗಿದೆ

ಹಳದಿ ಲೋಹವು ವರ್ಷಾಂತ್ಯದಲ್ಲೂ ಹೂಡಿಕೆದಾರರ ಪ್ರಮುಖ ಆಕರ್ಷಣೆಯಾಗಿಯೇ ಮುಂದುವರಿದಿದೆ. 2019ರ ಮಧ್ಯಭಾಗದಲ್ಲಿ ಪ್ರಾರಂಭವಾದ ಕಡಿಮೆ ಬಡ್ಡಿದರದ ಸನ್ನಿವೇಶ ಮತ್ತು ಅಭೂತಪೂರ್ವ ದ್ರವ್ಯತೆಗೆ ಕಾರಣವಾಗಿ ಜಾಗತಿಕವಾಗಿ ಎಲ್ಲಾ ಪ್ರಮುಖ ಕರೆನ್ಸಿಗಳಲ್ಲಿ ಚಿನ್ನದ ಬೆಲೆಗೆ ಉತ್ತೇಜನ ನೀಡಿತು ಮತ್ತು ಹಳದಿ ಲೋಹವು ಹೂಡಿಕೆದಾರರಿಗೆ ಆಕರ್ಷಣೆಯಾಯಿತು.

2019ರ ಆರಂಭದಲ್ಲಿ 10 ಗ್ರಾಂ 39,100 ರೂಪಾಯಿಗಳಿತ್ತು!

2019ರ ಆರಂಭದಲ್ಲಿ 10 ಗ್ರಾಂ 39,100 ರೂಪಾಯಿಗಳಿತ್ತು!

'' ವರ್ಷದ ಆರಂಭದಲ್ಲಿ 10 ಗ್ರಾಂಗೆ, 39,100 ರೂಪಾಯಿಗಳಷ್ಟಿತ್ತು (USD 1,517). ಸಾಂಕ್ರಾಮಿಕ ರೋಗದ ಆರಂಭಕ್ಕೂ ಮೊದಲು ಬೇಡಿಕೆಯು ಅಲ್ಪಕಾಲಿಕವಾಗಿ್ತು, ಏಕೆಂದರೆ ದೇಶೀಯ ಬೆಲೆ 38,400 ರೂಪಾಯಿಗೆ ಇಳಿದಿದ್ದು. ಆದರೆ ಕೊರೊನಾವೈರಸ್ ಸಾಂಕ್ರಾಮಿಕ ರೋಗವು ಸುರಕ್ಷಿತ ಹೂಡಿಕೆ ಪ್ರಚೋದಿಸಿದಾಗ 56,191 ಕ್ಕೆ ತಲುಪಿದೆ. ದೇಶೀಯ ಮಾರುಕಟ್ಟೆಯಲ್ಲಿ ಹೂಡಿಕೆ ಖರೀದಿಯಲ್ಲಿ ತೀವ್ರ ಏರಿಕೆಗೆ ಕಾರಣವಾಯಿತು " ಎಂದು ಕಾಮೆಟ್ರೆಂಡ್ಜ್ ರಿಸ್ಕ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ಸಿಇಒ ಜ್ಞಾನಶೇಕರ್ ತ್ಯಾಗರಾಜನ್ ಪಿಟಿಐಗೆ ತಿಳಿಸಿದ್ದಾರೆ.

ಅತಿದೊಡ್ಡ ಚಿನ್ನದ ನಿಕ್ಷೇಪವನ್ನು ಪತ್ತೆ ಹಚ್ಚಿದ ಟರ್ಕಿ: ಇದರ ಮೌಲ್ಯ ಕೆಲವು ದೇಶಗಳ ಜಿಡಿಪಿಗಿಂತ ಹೆಚ್ಚಿದೆ!ಅತಿದೊಡ್ಡ ಚಿನ್ನದ ನಿಕ್ಷೇಪವನ್ನು ಪತ್ತೆ ಹಚ್ಚಿದ ಟರ್ಕಿ: ಇದರ ಮೌಲ್ಯ ಕೆಲವು ದೇಶಗಳ ಜಿಡಿಪಿಗಿಂತ ಹೆಚ್ಚಿದೆ!

ಡಾಲರ್ ದುರ್ಬಲತೆ, ಚಿನ್ನದ ಬೆಲೆ ಏರಿಕೆಗೆ ಕಾರಣವಾಗಬಹುದು

ಡಾಲರ್ ದುರ್ಬಲತೆ, ಚಿನ್ನದ ಬೆಲೆ ಏರಿಕೆಗೆ ಕಾರಣವಾಗಬಹುದು

ಕೊರೊನಾವೈರಸ್ ಲಸಿಕೆ ನಿರೀಕ್ಷೆಯ ನಡುವೆಯು ಆರ್ಥಿಕತೆಯ ಚೇತರಿಕೆಯ ಮಧ್ಯೆ ಚಿನ್ನದ ಮೇಲಿನ ಹೂಡಿಕೆದಾರರ ದೃಷ್ಟಿಕೋನವು ಪ್ರಬಲವಾಗಿದೆ ಎಂದು ಜ್ಞಾನಶೇಕರ್ ತ್ಯಾಗರಾಜನ್ ಹೇಳಿದರು.

''ಚಿನ್ನದ ಮೇಲೆ ಹೆಚ್ಚು ಪ್ರಚೋದನೆಯ ಹಿನ್ನಲೆಯಲ್ಲಿ ಡಾಲರ್ ದುರ್ಬಲಗೊಳ್ಳಬಹುದು ಮತ್ತು ಅದು ಚಿನ್ನದ ಬೆಲೆಗಳು ಮತ್ತೊಮ್ಮೆ ಏರಲು ಸಹಾಯ ಮಾಡುತ್ತದೆ. ಅಲ್ಲದೆ, ಬೃಹತ್ ಪ್ರಚೋದನೆಯಿಂದಾಗಿ ಹಣದುಬ್ಬರ ನಿರೀಕ್ಷೆಗಳಿಂದ 2021 ರಲ್ಲಿ ಹೂಡಿಕೆದಾರರನ್ನು ಹಳದಿ ಲೋಹವು ಮತ್ತೆ ಆಕರ್ಷಿಸುವ ಅಂಶವಾಗಿ ಕಾಣಬಹುದು" ಎಂದು ಅವರು ಹೇಳಿದರು.

ಇನ್ನು ಅಮೆರಿಕಾ ಸೆನೆಟ್‌ನಲ್ಲಿ ಜೋ ಬಿಡೆನ್ ನೇತೃತ್ವದ ಪಕ್ಷವು ದುರ್ಬಲ ಬಹುಮತದಿಂದಾಗಿ ಸುಧಾರಣೆಗಳನ್ನು ತರುವುದು ಕಷ್ಟವಾಗಬಹುದು ಮತ್ತು ಅದು ಅಮೂಲ್ಯ ಲೋಹಗಳ ಬೆಲೆ ಏರಿಕೆಗೆ ಕಾರಣವಾಗಬಹುದು ಎನ್ನಲಾಗಿದೆ.

English summary
Gold is likely to glitter more and even soar to Rs63,000 per 10 grams next year amid expectations of fresh stimulus measures and weaker American dollar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X