• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನದ ಬೆಲೆ ಸತತ 5ನೇ ದಿನ ಇಳಿಕೆ: ಬೆಳ್ಳಿ ಬೆಲೆಯು ಕುಸಿತ

|

ನವದೆಹಲಿ, ಜನವರಿ 28: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ತೀವ್ರವಾಗಿ ಕುಸಿಯತೊಡಗಿದ್ದು, ಸತತ ಐದನೇ ದಿನ ಇಳಿಕೆಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಸತತ ಐದನೇ ದಿನದ ಇಳಿಕೆಗೊಂಡು 10 ಗ್ರಾಂಗೆ ಶೇಕಡಾ 0.33ರಷ್ಟು ಕುಸಿದು, 48,702 ರೂಪಾಯಿಗೆ ತಲುಪಿದೆ.

ಇದೇ ರೀತಿಯಲ್ಲಿ ಬೆಳ್ಳಿ ದರಗಳು ಪ್ರತಿ ಕೆಜಿಗೆ, 65,866 ರೂಪಾಯಿಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.11ರಷ್ಟು ಮತ್ತು ಬೆಳ್ಳಿ ಶೇಕಡಾ 0.64ರಷ್ಟು ಕುಸಿದಿದೆ. ಚಿನ್ನದ ದರಗಳು ಆಗಸ್ಟ್‌ನ ಗರಿಷ್ಠ 56,300 ರೂಪಾಯಿಗಳಿಂದ 7,500 ರೂಪಾಯಿನಷ್ಟು ಕಡಿಮೆಯಾಗಿದೆ.

ಚಿನ್ನದ ಬೆಲೆ ಕುಸಿತ: ಜನವರಿ 27ರಂದು ಯಾವ ನಗರಗಳಲ್ಲಿ ಎಷ್ಟು ಬೆಲೆ ವ್ಯತ್ಯಾಸ?ಚಿನ್ನದ ಬೆಲೆ ಕುಸಿತ: ಜನವರಿ 27ರಂದು ಯಾವ ನಗರಗಳಲ್ಲಿ ಎಷ್ಟು ಬೆಲೆ ವ್ಯತ್ಯಾಸ?

ಜಾಗತಿಕ ಮಾರುಕಟ್ಟೆಗಳಲ್ಲಿ ಅಮೆರಿಕಾ ಡಾಲರ್ ಒತ್ತಡದ ನಡುವೆ ಚಿನ್ನದ ದರಗಳು ಕುಸಿತಗೊಂಡಿವೆ. ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.3ರಷ್ಟು ಇಳಿದು1,839.21 ಡಾಲರ್‌ಗೆ ಇಳಿದಿದೆ. ಬಲವಾದ ಡಾಲರ್ ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಚಿನ್ನವನ್ನು ಹೆಚ್ಚು ದುಬಾರಿಯನ್ನಾಗಿ ಮಾಡುತ್ತದೆ. ಡಾಲರ್ ಸೂಚ್ಯಂಕ ಶೇಕಡಾ 0.12ರಷ್ಟು ಏರಿಕೆ ಕಂಡು 90.745 ಕ್ಕೆ ತಲುಪಿದೆ.

ಇತರ ಅಮೂಲ್ಯ ಲೋಹಗಳು ಸಹ ಇಳಿಕೆಗೊಂಡಿದ್ದು, ಬೆಳ್ಳಿ ಔನ್ಸ್‌ಗೆ ಶೇಕಡಾ 0.2ರಷ್ಟು ಇಳಿಕೆಗೊಂಡು 25.18 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇಕಡಾ 0.2ರಷ್ಟು ಕುಸಿದು 1,063.76 ಡಾಲರ್‌ಗೆ ತಲುಪಿದೆ.

ಅಮೆರಿಕಾ ನೂತನ ಅಧ್ಯಕ್ಷ ಜೋ ಬಿಡೆನ್‌ರ 1.9 ಟ್ರಿಲಿಯನ್ ಡಾಲರ್ ಆರ್ಥಿಕ ಪರಿಹಾರ ಪ್ಯಾಕೇಜ್ ಅನ್ನು ಹೂಡಿಕೆದಾರರು ಗಮನದಲ್ಲಿಟ್ಟುಕೊಂಡಿದ್ದಾರೆ. ಕೋವಿಡ್ -19 ಪರಿಹಾರ ಯೋಜನೆಯ ಸಮಯದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಬಯಸುತ್ತಿದ್ದಾರೆ.

English summary
Gold and silver prices today fell sharply in Indian markets amid weak global rates. On MCX, gold futures were down 0.33% to near one-month low
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X