Gold Price: ಇಂದು ಚಿನ್ನದ ಬೆಲೆ ₹1,01,680ಗೆ ಏರಿಕೆ! ನಿಮ್ಮೂರಿನಲ್ಲಿ ಎಷ್ಟಿದೆ ಬಂಗಾರ? ದರಪಟ್ಟಿ

ಬೆಂಗಳೂರು, ಜೂನ್ 14: ಇನ್ನೊಂದು ತಿಂಗಳಲ್ಲಿ ಮತ್ತೆ ಹಬ್ಬಗಳು ಎದುರಾಗುತ್ತವೆ. ಮದುವೆ ಸೀಸನ್‌ಗಳು ಕೊನೆಯಾಗಲಿವೆ. ಇಂತಹ ಕಾರ್ಯಕ್ರಮಗಳ ಕಾರಣಕ್ಕೆ ಚಿನ್ನ ಖರೀದಿಸುವವರಿಗೆ ಬಂಗಾರದ ಬೆಲೆ ಕೈ ಸುಡುವಂತೆ ಮಾಡಿದೆ. ಬೆಲೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಜೂನ್ 14ರಂದು ಬೆಂಗಳೂರು ಸೇರಿದಂತೆ ನಿಮ್ಮೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ. ನಗರವಾರು ಬೆಲೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಭಾರತದ ಸೇರಿದಂತೆ ವಿವಿಧ ದೇಶಗಳಲ್ಲಿ ಚಿನ್ನದ ಬೆಲೆ ಗಣನೀಯ ಏರಿಕೆ ಕಂಡಿದೆ. ಒಂದು ವಾರದಲ್ಲಿ ಎರಡು ಬಾರಿ ಇಳಿಕೆಯಗಿದ್ದ ಚಿನ್ನ ಬುಧವಾರದಿಂದ ನಿರಂತರವಾಗಿ ಏರಿಕೆ ಆಗಿದೆ. ಇಂದು ಜೂನ್ 14ರಂದು 1,02,000 ರೂಪಾಯಿ ಸಮಿಪಿಸಿದೆ. ವೇಸ್ಟೇಜ್, ಇತರ ಚಾರ್ಜ್ ಸೇರಿದಂತೆ ಒಂದು ಲಕ್ಷ ಐದು ಸಾವಿರ ರೂಪಾಯಿವರೆಗೂ ಆಗಬಹುದು.

Gold Price on June 14th Gold Rate Remarkably Increased Today See City Wise list

ಬೆಂಗಳೂರಿನಲ್ಲಿ 10 ಗ್ರಾಮ ಚಿನ್ನಕ್ಕೆ 250 ರೂಪಾಯಿ ಏರಿಕೆ ಆಗಿದೆ. ನೆನ್ನೆ 10 ಗ್ರಾಂ ಚಿನ್ನ (22 ಕ್ಯಾರಟ್) 92,950 ರೂಪಾಯಿ ಇದ್ದ ದರ ಇಂದು (ಜೂನ್14) 93,200 ರೂಪಾಯಿಗೆ ಹೆಚ್ಚಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು ₹1,01,680ಗೆ ಹೆಚ್ಚಾಗಿದೆ. ಇದರ ಬೆಲೆ ನೆನ್ನೆ ₹1,01,400 ರೂಪಾಯಿ ಇದ್ದು, ಒಂದೇ ದಿನದಲ್ಲಿ 280 ರೂಪಾಯಿ ಹೆಚ್ಚಿಸಿಕೊಂಡಿದೆ. ಈ ಬೆಳವಣಿಗೆ ಚಿನ್ನಪ್ರಿಯರಿಗೆ ಆಘಾತ ನೀಡಿದೆ.

10 ಗ್ರಾಂ ಬಂಗಾರದ (18 ಕ್ಯಾರಟ್) ಬೆಲೆ ನೆನ್ನೆ 76,050 ರೂಪಾಯಿ ಇತ್ತು, ಇಂದು ಅದು 76,260 ರೂಪಾಯಿಗೆ ಏರಿಕೆ ಆಗಿದ್ದು, ಒಟ್ಟು 210 ರೂಪಾಯಿ ಹೆಚ್ಚಾಗಿದೆ. ಇನ್ನೂ ಬೆಳ್ಳಿಯ ದರ ಸಾಮಾನ್ಯವಾಗಿದೆ. ಯಾವುದೇ ಬದಲಾವಣೆ ಆಗಿಲ್ಲ. ಜೂನ್ 12ರಂದು ಬೆಳ್ಳಿ ದರ 100 ಗ್ರಾಂಗೆ 11000 ರೂಪಾಯಿ, 01 ಕೆಜಿಗೆ 1,10,000 ರೂಪಾಯಿ ಇದೆ.

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: ನಗರವಾರು ಪಟ್ಟಿ

ಬೆಂಗಳೂರು: 93,200 ರೂಪಾಯಿ

ಹೈದರಾಬಾದ್: 93,096 ರೂಪಾಯಿ

ಚೆನ್ನೈ : 93,550 ರೂಪಾಯಿ

ದೆಹಲಿ: 93,133 ರೂಪಾಯಿ

ಮುಂಬೈ: 92,088 ರೂಪಾಯಿ

ಲಕ್ನೋ: 91,281 ರೂಪಾಯಿ

ಅಹಮದಾಬಾದ್: 92,733 ರೂಪಾಯಿ

ಜೂನ್ 05 ರಿಂದ ಜೂನ್ 14ರವರೆಗೆ ಮೂರು ಭಾರಿ ಮಾತ್ರವೇ ಚಿನ್ನದ ಬೆಲೆ ಇಳಿಕೆ ಆಗಿದೆ. ಉಳಿದ ಹತ್ತು ದಿನಗಳಲ್ಲಿ ಬರೋಬ್ಬರಿ ಏಳು ಬಾರಿ ಚಿನ್ನದ ಬೆಲೆ ಹೆಚ್ಚಾಗಿದೆ. ಕಳೆದ ಮೂರು ದಿನಗಳಲ್ಲಿ ಚಿನ್ನದ ದರದಲ್ಲಿ ಗಮನಾರ್ಹ ಏರಿಕೆ ಆಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಬೇಡಿಕೆ ಕಡಿಮೆ ಆಗುತ್ತಾ? ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+