Gold Price on July 27: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬಂಗಾರ ದರ ಭರ್ಜರಿ ಇಳಿಕೆ
Gold Price: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲಿರುತ್ತದೆ. ಅದರಲ್ಲೂ ಶ್ರಾವಣ ಮಾಸದ ಆರಂಭದಿಂದ ಬೆಲೆ ಭರ್ಜರಿ ಇಳಿಕೆಯಾಗುತ್ತಲೇ ಬಂದಿದೆ. ಹಾಗಾದ್ರೆ ಇಂದು (ಜುಲೈ 27) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಗರವಾರು ಬಂಗಾರ ದರಗಳ ವಿವರ: ನಿನ್ನೆ (ಜುಲೈ 26) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 91,600 ರೂಪಾಯಿ ಇದ್ದರೆ, ಇಂದು (ಜುಲೈ 27) ಕೂಡ 91,600 ರೂಪಾಯಿ ಇದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 99,930 ರೂಪಾಯಿ ಇತ್ತು. ಇನ್ನು ಇಂದು ಕೂಡ ಅಷ್ಟೇ ಇದ್ದು, ಯಾವುದೇ ಏರಿಳಿತ ಆಗಿಲ್ಲ.

ಮುಂದಿನ ದಿನಗಳಲ್ಲಿ ಇಳಿಕೆಯಾಗಲೂಬಹುದು ಅಥವಾ ಏರಿಕೆಯಾಗಲೂಬಹುದು ಆದ್ದರಿಂದ ಈಗಲೇ ಬಂಗಾರ ಕೊಳ್ಳಲು ಉತ್ತಮ ಸಮಯವಾಗಿದೆ. ಹಾಗಾದ್ರೆ ಇದೀಗ ಶ್ರಾವಣ ಮಾಸದ ಮೊದಲ ಸೋಮವಾರಕ್ಕೂ ಮುನ್ನ ದಿನ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಕೆಳಗೆ ನೀಡಲಾಗಿದೆ.
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 73,280 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 79,944 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 91,600 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 99,930 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 91,600 ರೂಪಾಯಿ
* ಚೆನ್ನೈ - 91,600 ರೂಪಾಯಿ
* ಮುಂಬೈ - 91,600 ರೂಪಾಯಿ
* ಕೋಲ್ಕತ್ತಾ - 91,600 ರೂಪಾಯಿ
* ನವದೆಹಲಿ - 91,750 ರೂಪಾಯಿ
* ಹೈದರಾಬಾದ್ - 91,600 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 99,930 ರೂಪಾಯಿ
* ಚೆನ್ನೈ - 99,930 ರೂಪಾಯಿ
* ಮುಂಬೈ - 99,930 ರೂಪಾಯಿ
* ಕೋಲ್ಕತ್ತಾ - 99,930 ರೂಪಾಯಿ
* ನವದೆಹಲಿ - 1,00,080 ರೂಪಾಯಿ
* ಹೈದರಾಬಾದ್ - 99,930 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,16,000 ರೂಪಾಯಿ
* ಚೆನ್ನೈ - 1,26,000 ರೂಪಾಯಿ
* ಮುಂಬೈ - 1,16,000 ರೂಪಾಯಿ
* ಕೋಲ್ಕತ್ತಾ - 1,16,000 ರೂಪಾಯಿ
* ನವದೆಹಲಿ - 1,16,000 ರೂಪಾಯಿ
* ಹೈದರಾಬಾದ್ - 1,26,000 ರೂಪಾಯಿ
ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಸಾಮಾನ್ಯ ದಿನಗಳಲ್ಲೂ ಸಹ ಬಂಗಾರ ಕೊಳ್ಳುವವರ ಸಂಖ್ಯೆಯೇನು ಕಡಿಮೆ ಇರುವುದಿಲ್ಲ. ದರ ಕಡಿಮೆಯಿರಲಿ, ಬಿಡಲಿ ಆಭರಣಗಳನ್ನು ಕಷ್ಟದ ಕಾಲಕ್ಕೆ ಆಗುತ್ತವೆ ಎಂದು ಕೊಂಡುಕೊಳ್ಳುತ್ತಲೇ ಇರುತ್ತಾರೆ. ಹಬ್ಬ, ಹರಿ ದಿನಗಳಲ್ಲಂತೂ ತುಸು ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಕೊಳ್ಳುತ್ತಾರೆ. ಇನ್ನೂ ಇದೀಗ ಅದರಲ್ಲೂ ಇದೀಗ ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ದರ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಆದರೂ ಆಭರಣ ಕೊಂಡುಕೊಳ್ಳೋರಿಗೆ ಇದೊಂದು ಉತ್ತಮ ಸಮಯ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ಮುಂದಿನ ದಿನಗಳಲ್ಲಿ ಏರಿಕೆಯಾದ್ರೂ ಆಶ್ಚರ್ಯಪಡಬೇಕಿಲ್ಲ.












Click it and Unblock the Notifications