Gold Price: ಚಿನ್ನದ ಬೆಲೆ 1 ಲಕ್ಷ ರೂಪಾಯಿ? ಬೆಳ್ಳಿ ಬೆಲೆ ಎಷ್ಟಾಗಬಹುದು?
ಚಿನ್ನ & ಬೆಳ್ಳಿ ಬೆಲೆ ಮುಗಿಲು ಮುಟ್ಟುತ್ತಿದೆ, ಅದರಲ್ಲೂ ಆಭರಣ ಪ್ರಿಯರಿಗೆ ಹೀಗೆ ಚಿನ್ನದ ಬೆಲೆ ಹಾಗೂ ಬೆಳ್ಳಿ ರೇಟ್ ಏರಿಕೆ ಕಾಣುತ್ತಿರುವುದು ಟೆನ್ಷನ್ ತರುತ್ತಿದೆ. ಯಾಕಂದ್ರೆ ಇದೇ ರೀತಿ ಹಳದಿ ಲೋಹ ಚಿನ್ನದ ಬೆಲೆ ಏರಿಕೆ ಕಾಣುತ್ತಿದ್ದರೆ ಮುಂದಿನ ದಿನಗಳಲ್ಲಿ ಬೆಲೆಯು ಇನ್ನಷ್ಟು ಎತ್ತರಕ್ಕೆ ಹೋಗಬಹುದು ಎಂಬ ಭಯ ಆವರಿಸಿದೆ. ಹೀಗಿದ್ದಾಗಲೇ ಚಿನ್ನದ ಬೆಲೆಯ ಕುರಿತು ಇದೀಗ ಮತ್ತೊಂದು ಸ್ಫೋಟಕ ವಿಚಾರ ಬಯಲಾಗುತ್ತಿದ್ದು, ಚಿನ್ನದ ಬೆಲೆ 1 ಲಕ್ಷ ರೂಪಾಯಿ ಆಗುತ್ತಾ? ಬೆಳ್ಳಿ ಬೆಲೆ ಎಷ್ಟು ಎತ್ತರಕ್ಕೆ ತಲುಪಬಹುದು? ಬನ್ನಿ ತಿಳಿಯೋಣ.
ಚಿನ್ನದ ಬೆಲೆ ಈಗ ಭಾರಿ ಏರಿಕೆ ಆಗುತ್ತಿದ್ದು, ಚಿನ್ನ ಖರೀದಿ ಮಾಡಲು ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಲು ಸಾಕಷ್ಟು ಜನರು ಮುಂದೆ ಬರುತ್ತಿದ್ದಾರೆ. ಹೀಗೆ ಚಿನ್ನ ಬೆಲೆಯು ದಿನದಿಂದ ದಿನಕ್ಕೆ ಭಾರಿ ಏರಿಕೆ ಕಾಣುತ್ತಿದೆ. ಕಳೆದ 15 ವರ್ಷಗಳಲ್ಲಿ ಚಿನ್ನದ ಬೆಲೆ 08 ರಿಂದ 10 ಪಟ್ಟು ಹೆಚ್ಚಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಚಿನ್ನ ಜಗತ್ತಿನಲ್ಲಿ ಸಿಗುತ್ತಿರುವುದೇ ಕಡಿಮೆ, ಹೀಗಾಗಿ ಚಿನ್ನಕ್ಕೆ ಜಗತ್ತಿನಾದ್ಯಂತ ಭರ್ಜರಿ ಬೇಡಿಕೆ ಬಂದಿದೆ. ಹಾಗಾದ್ರೆ ಈಗಿನ ಸ್ಥಿತಿ ನೋಡಿದರೆ ಚಿನ್ನದ ಬೆಲೆ 1 ಲಕ್ಷ ರೂಪಾಯಿ ತಲುಪಿಬಿಡುತ್ತಾ? 10 ಗ್ರಾಂ ಚಿನ್ನ ಕೊಳ್ಳಲು ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಾ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

1 ಲಕ್ಷ ರೂಪಾಯಿಗೆ ಚಿನ್ನದ ಬೆಲೆ?
ಭಾರತದ ಚಿನ್ನ ಮಾರುಕಟ್ಟೆಯಲ್ಲಿ ಇದೀಗ 24 ಕ್ಯಾರೆಟ್ ಅಂದ್ರೆ ಶುದ್ಧ ಚಿನ್ನದ ಬೆಲೆ 77,400 ರೂಪಾಯಿ ಆಗಿದ್ದು, 22 ಕ್ಯಾರೆಟ್ ಅಂದ್ರೆ ಆಭರಣ ಚಿನ್ನದ ಬೆಲೆಯು 70,950 ರೂಪಾಯಿ ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 58,050 ರೂಪಾಯಿ ಆಗಿದೆ. ಹೀಗಿದ್ದಾಗ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುವ ಸಾಧ್ಯತೆ ಇದ್ದು, ಈ ಮೂಲಕ ಚಿನ್ನದ ಬೆಲೆಯು 1 ಲಕ್ಷ ರೂಪಾಯಿ ತಲುಪುವ ನಿರೀಕ್ಷೆ ದಟ್ಟವಾಗಿದೆ. ಇದೇ ಕಾರಣಕ್ಕೆ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹಾಗಾದ್ರೆ ಬೆಳ್ಳಿ ಬೆಲೆ ಎಷ್ಟು ರೂಪಾಯಿ ಆಗಬಹುದು? ಮುಂದೆ ಓದಿ.
ಬೆಳ್ಳಿ ಬೆಲೆ ಎಷ್ಟು ರೂಪಾಯಿ?
ಚಿನ್ನದ ರೀತಿಯಲ್ಲೇ ಬೆಳ್ಳಿ ಬೆಲೆ ಕೂಡ ಭಾರಿ ಪ್ರಮಾಣದ ಏರಿಕೆ ಕಾಣುತ್ತಿದ್ದು, ಈಗಾಗಲೇ ಒಂದು ಬಾರಿ ಬೆಳ್ಳಿ ಪ್ರತಿ 1 ಕೆಜಿಗೆ 1 ಲಕ್ಷ ರೂಪಾಯಿ ತಲುಪಿತ್ತು. ಇದೀಗ ಬೆಳ್ಳಿ ಬೆಲೆ ಪ್ರತಿ 1 ಕೆಜಿಗೆ 88,000 ಸಾವಿರ ರೂಪಾಯಿಗೆ ತಲುಪಿದೆ. ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆ ಮತ್ತೆ 1 ಲಕ್ಷ ರೂಪಾಯಿ ದಾಟಿ ಮತ್ತೊಂದು ಹೊಸ ಹಂತಕ್ಕೆ ತಲುಪುವ ನಿರೀಕ್ಷೆ ಇದೆ. ಹೀಗಾಗಿ ಚಿನ್ನ & ಬೆಳ್ಳಿ ಬೆಲೆಯಲ್ಲಿ ಇದೀಗ ಭಾರಿ ಏರಿಳಿತ ಕಾಣುತ್ತಿದೆ. ಹಾಗೇ ಜಾಗತಿಕವಾಗಿ ಯುದ್ಧ ಭೀತಿ ಕೂಡ ಆವರಿಸಿದ್ದು, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗ್ತಾ ಇದೆ. ಇದರ ಜೊತೆ ಬೆಳ್ಳಿ ಕೂಡ ಇದೀಗ ಹೂಡಿಕೆ ಮಾಡುವವರ ಪಾಲಿಗೆ ಫೇವರಿಟ್ ಆಗಿದೆ.












Click it and Unblock the Notifications