Gold Price: ಚಿನ್ನ ಬೆಲೆ ಭರ್ಜರಿ 40,000 ಸಾವಿರ ರೂಪಾಯಿ ಕುಸಿತ! ಹೇಗೆ ಗೊತ್ತಾ?
ಚಿನ್ನದ ಬೆಲೆ ಭಾರಿ ದೊಡ್ಡ ಮಟ್ಟದಲ್ಲಿ ಕುಸಿತ ಕಾಣುತ್ತಿದೆ. ಕಳೆದ 1 ವಾರದಿಂದ ಚಿನ್ನದ ಬೆಲೆಯಲ್ಲಿ ಭಾರಿ ಭರ್ಜರಿ ಕುಸಿತ ಇದೀಗ ಕಂಡು ಬರುತ್ತಿದೆ. ಅದರಲ್ಲೂ ಬಂಗಾರದ ಬೆಲೆ ಇಷ್ಟೊಂದು ಕಡಿಮೆ ಆಗುತ್ತೆ ಅನ್ನೋದನ್ನ ಆಭರಣ ಪ್ರಿಯರು ಅಂದುಕೊಂಡೇ ಇರಲಿಲ್ಲ ಬಿಡಿ. ಅದ್ರಲ್ಲೂ ಇನ್ನೇನು ಬಂಗಾರದ ಬೆಲೆ ಕೈಗೆ ಸಿಗದಷ್ಟು ಮೇಲೆ ಹೋಗಿ ಬಿಡುತ್ತೆ ಅಂತಾ ಜನ ಅಂದುಕೊಳ್ಳುವ ಸಮಯದಲ್ಲೇ ಮತ್ತೆ, ಚಿನ್ನ ಬೆಲೆ ಭರ್ಜರಿ 40,000 ಸಾವಿರ ರೂಪಾಯಿ ಕುಸಿತ ಕಂಡಿದೆ. ಹೇಗೆ ಗೊತ್ತಾ?
ಆಭರಣ ಪ್ರಿಯರು ಕಳೆದ ಒಂದು ವಾರದಿಂದ ಫುಲ್ ಖುಷಿಯಾಗಿದ್ದಾರೆ. ಇದಕ್ಕೆ ಕಾರಣವೇ ಚಿನ್ನದ ಬೆಲೆಯ ಕುಸಿತ. ಚಿನ್ನದ ಬೆಲೆ ನಿರಂತರವಾಗಿ ಭಾರಿ ಇಳಿಕೆ ಕಾಣುತ್ತಿದ್ದು, ಖರೀದಿ ಮಾಡುವವರಿಗೆ ಕೂಡ ಇದರಿಂದ ಭಾರಿ ಖುಷಿ ಆಗುತ್ತಿದೆ. ಯಾಕಂದ್ರೆ ಒಂದು ಕಡೆ ಚಿನ್ನದ ಬೆಲೆ ಇನ್ನೇನು ಪ್ರತಿ 10 ಗ್ರಾಂಗೆ 1 ಲಕ್ಷ ರೂಪಾಯಿ ಗಡಿ ದಾಟಲಿದೆ ಎಂಬ ಭಯ ಜೋರಾಗಿ ಆವರಿಸಿತ್ತು. ಮತ್ತೊಂದು ಕಡೆ ಚಿನ್ನದ ಬೆಲೆ ಏರಿಕೆ ನೋಡಿದರೆ ತಲೆ ತಿರುಗುವಂತೆ ಆಗಿತ್ತು. ಆದರೆ ಇದೀಗ ಚಿನ್ನದ ಬೆಲೆ ಒಂದೇ ದಿನ 40,000 ಸಾವಿರ ರೂಪಾಯಿ ಕುಸಿತ....

ಚಿನ್ನದ ಬೆಲೆ 40,000 ರೂಪಾಯಿ...
ಬಂಗಾರ ಅಥವಾ ಚಿನ್ನ ಅಂತಾ ಕರೆಯುವ ಹಳದಿ ಲೋಹ ಭಾರತೀಯರಿಗೆ ಅಚ್ಚುಮೆಚ್ಚು. ಅದರಲ್ಲೂ, ಭಾರತದಲ್ಲಿ ಮದುವೆಗಳಿಗೆ ಬಂಗಾರ ಬೇಕೆ ಬೇಕು, ಚಿನ್ನ ಇಲ್ಲದೆ ಭಾರತದಲ್ಲಿ ಮದುವೆಗಳು ನಡೆಯುವುದೇ ಇಲ್ಲ. ಹೀಗಿದ್ದಾಗ ಚಿನ್ನದ ಬೆಲೆ ಏರಿಕೆ ಕಾಣುತ್ತಿರುವುದು ಭಾರಿ ಟೆನ್ಷನ್ ಕೊಟ್ಟಿತ್ತು. ಮದುವೆ ಸೀಸನ್ ಆರಂಭಕ್ಕೆ ಮೊದಲೇ ಬೆಲೆ ಇಷ್ಟು ಹೆಚ್ಚಾದರೆ ಕಥೆ ಏನು? ಅಂತಾ ಆಭರಣ ಪ್ರಿಯರು ಚಿಂತೆ ಮಾಡುವಾಗಲೇ ಚಿನ್ನದ ಬೆಲೆ ಭಾರಿ ಕುಸಿತವನ್ನ ಕಾಣುತ್ತಿದೆ!
10 ಗ್ರಾಂಗೆ 70,450 ರೂಪಾಯಿ
ಬಂಗಾರದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಕುಸಿತ ದಾಖಲಾಗುತ್ತಿದೆ. ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಭಾರಿ ಕುಸಿತ ಕಂಡು ಪ್ರತಿ 1 ಕೆ.ಜಿ. ಆಭರಣ ಚಿನ್ನದ ಬೆಲೆ 40,000 ರೂಪಾಯಿ ಇಳಿಕೆ ಕಂಡಿದೆ. ಹೀಗಾಗಿ ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಈಗ 4000 ರೂಪಾಯಿ ಕಡಿತವಾಗಿದೆ.
ಈ ಮೂಲಕ ಈಗ ಆಭರಣ ಚಿನ್ನ ಬೆಲೆ ಕುಸಿತದ ನಂತರ, ಪ್ರತಿ 10 ಗ್ರಾಂಗೆ 70,450 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು ಕೂಡ ಕುಸಿದು ಬಿದ್ದಿದ್ದು, ಇದೀಗ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 4,400 ರೂಪಾಯಿ ಇಳಿಕೆ ಕಂಡಿದೆ! ಇದು ಆಭರಣ ಪ್ರಿಯರಿಗೆ ಭಾರಿ ಭರ್ಜರಿ ಖುಷಿಯನ್ನ ಕೂಡ ಕೊಡುತ್ತಿದೆ. ಹಾಗಾದ್ರೆ ಬೆಳ್ಳಿ ಬೆಲೆ ಈಗ ಎಷ್ಟಿದೆ?
ಬೆಳ್ಳಿ ಬೆಲೆ ಇದೀಗ ಎಷ್ಟಿದೆ ನೋಡಿ!
24 ಕ್ಯಾರೆಟ್ ಚಿನ್ನದ ಬೆಲೆ ಕುಸಿತದ ನಂತರ ಇದೀಗ ಪ್ರತಿ 10 ಗ್ರಾಂಗೆ 76,850 ರೂಪಾಯಿಗೆ ಬಂದು ತಲುಪಿದೆ. ಹಾಗೇ, ಮತ್ತೊಂದು ಕಡೆ ಬೆಳ್ಳಿ ಬೆಲೆ ಕೂಡ ಕಳೆದ ಒಂದು ವಾರದಲ್ಲಿ ಭರ್ಜರಿ ಇಳಿಕೆ ಕಂಡಿದ್ದು, ಸದ್ಯದ ಮಟ್ಟಿಗೆ 91,000 ರೂಪಾಯಿ ಪ್ರತಿ ಕೆಜಿಗೆ ಬೆಳ್ಳಿ ಇದೀಗ ಮಾರಾಟ ಆಗುತ್ತಿದೆ. ಹೀಗಾಗಿ ಬೆಳ್ಳಿ ಖರೀದಿ ಮಾಡುವವರಿಗೂ ಇದು ಖುಷಿ ನೀಡುತ್ತಿದೆ.












Click it and Unblock the Notifications