Gold Price: ಚಿನ್ನ-ಬೆಳ್ಳಿ ಬೆಲೆ ಭಾರೀ ಕುಸಿತ, ಹೂಡಿಕೆದಾರರಿಗೆ ಒಟ್ಟು 27,55,07,13,98,99,999 ರೂಪಾಯಿ ನಷ್ಟ
ಚಿನ್ನದ ಬೆಲೆ ಆಕಾಶ ಮುಟ್ಟುತ್ತಿದೆ, ಬೆಳ್ಳಿ ಖರೀದಿ ಮಾಡುವುದು ಕೂಡ ಬಡವರಿಗೆ ಕಷ್ಟ ಆಗುತ್ತಿದೆ. ಹೀಗಿದ್ದಾಗ ಚಿನ್ನದ ಬೆಲೆ ಇನ್ನೇನು 2,00,000 ರೂಪಾಯಿ ತಲುಪಲಿದೆ ಎಂಬ ಭಯ ಆವರಿಸಿದೆ. ಈ ನಡುವೆ ನಿನ್ನೆ ಒಂದೇ ದಿನ ಚಿನ್ನದ ಬೆಲೆ ಬರೋಬ್ಬರಿ 10,000 ರೂಪಾಯಿ ಹೆಚ್ಚಾಗಿ ಆಘಾತ ನೀಡಿದೆ. ಬಡವರು ಹಾಗೂ ಮಧ್ಯಮ ವರ್ಗದ ಜನರು ಇನ್ನುಮುಂದೆ ಚಿನ್ನ ಖರೀದಿ ಮಾಡಲು ಆಗಲ್ಲ ಎಂಬ ಚರ್ಚೆ ಕೂಡ ಶುರುವಾಗಿದೆ. ಹೀಗಿದ್ದಾಗಲೇ, ಚಿನ್ನ-ಬೆಳ್ಳಿ ಬೆಲೆ ಭಾರೀ ಕುಸಿತ, ಹೂಡಿಕೆದಾರರಿಗೆ ಒಟ್ಟು 27,55,07,13,98,99,999 ರೂಪಾಯಿ ಭರ್ಜರಿ ನಷ್ಟ.
ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆ ಆಗುತ್ತಿದೆ ಎಂದು ಈಗ ಜನರು ಕೂಡ ಮುಗಿಬಿದ್ದು ಖರೀದಿ ಮಾಡಿ ಮನೆಯಲ್ಲಿ ಇಟ್ಟುಕೊಳ್ಳಲು ಮುಂದಾಗಿದ್ದಾರೆ. ಆದರೆ ಚಿನ್ನ ಹಾಗೂ ಬೆಳ್ಳಿ ಬೆಲೆ ಇನ್ನಷ್ಟು ಹೆಚ್ಚಾಗಿ ಖರೀದಿ ಮಾಡಲು ಕೂಡ ಕಷ್ಟಕರವಾಗುತ್ತಿದೆ. ಅದರಲ್ಲೂ ಭಾರತಕ್ಕೆ ಚಿನ್ನ ರಫ್ತು ಮಾಡುವ ದೇಶಗಳಿಗೆ ಈಗ ಸಿಕ್ಕಾಪಟ್ಟೆ ಲಾಭ ಆಗುತ್ತಿದೆ. ಚಿನ್ನದ ಬೆಲೆ ಕೈಗೆ ಎಟುಕದ ರೀತಿ ಮೇಲೆ ಹೋಗಿರುವುದು ಚಿಂತೆ ತರಿಸಿದೆ ಎನ್ನುವಾಗಲೇ ಆಭರಣ ಪ್ರಿಯರಿಗೆ ಈಗ ಭರ್ಜರಿ ಸುದ್ದಿ ಸಿಕ್ಕಿದೆ. ಚಿನ್ನ ಹಾಗೂ ಬೆಳ್ಳಿ ಬೆಲೆ ದಿಢೀರ್ ಕುಸಿತ ಕಂಡ ಹಿನ್ನೆಲೆ ಹೂಡಿಕೆ ಮಾಡಿದ್ದವರಿಗೆ 27,55,07,13,98,99,999 ರೂಪಾಯಿ ಭಾರಿ ನಷ್ಟವಾಗಿದೆ.

ಚಿನ್ನ & ಬೆಳ್ಳಿ ಬೆಲೆ ಭಾರಿ ಕುಸಿತ!
ಹೌದು, ಚಿನ್ನದ ಬೆಲೆ ನೋಡ ನೋಡುತ್ತಲೇ ಭಾರಿ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿರುವುದು ಈಗ ಸಂಚಲನ ಸೃಷ್ಟಿ ಮಾಡಿದೆ. ಸುಮಾರು 1,79,000 ರೂಪಾಯಿ ತಲುಪಿದ್ದ ಚಿನ್ನದ ಬೆಲೆ ಈಗ ಭಾರಿ ಕುಸಿತ ಕಂಡಿದ್ದು, ಬೆಳ್ಳಿ ಕೂಡ ಭಾರಿ ಹಿನ್ನಡೆ ಕಂಡಿದೆ. ಅಂದಹಾಗೆ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ಈಗ ಹೊಳೆಯುತ್ತಿದೆ. ಏಕೆಂದರೆ ಈ ಎರಡೂ ಲೋಹಗಳ ಬೆಲೆ ಭಾರಿ ಏರಿಕೆ ಕಂಡ ಹಿನ್ನೆಲೆ ಜನರು ಕೂಡ ಹೂಡಿಕೆಗೆ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗಿದ್ದಾಗ ದಿಢೀರ್ ಚಿನ್ನದ ಬೆಲೆ ಪಾತಾಳ ಸೇರುವಂತೆ ಕುಸಿದಿದೆ, ಅದು ಕೆಲವೇ ನಿಮಿಷದಲ್ಲಿ ಚಿನ್ನದ ಬೆಲೆ ಕುಸಿತ ಕಂಡಿರುವುದು ಅನುಮಾನ ಮೂಡಿಸಿದೆ. ಈ ಹಿನ್ನೆಲೆ ಹೂಡಿಕೆದಾರರಿಗೆ ಕೆಲವೇ ನಿಮಿಷಗಳಲ್ಲಿ ಬರೋಬ್ಬರಿ 3 ಟ್ರಿಲಿಯನ್ ಡಾಲರ್ ಭಾರಿ ದೊಡ್ಡ ನಷ್ಟವಾಗಿದೆ.
ಭಾರಿ ಕುಸಿತ ಕಂಡ ಬಂಗಾರದ ಬೆಲೆ
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಕಾಣುತ್ತಿರುವ ಕಾರಣಕ್ಕೆ, ಇಡೀ ಜಗತ್ತಿನಾದ್ಯಂತ ಇದೀಗ ಚಿನ್ನ ಹಾಗೂ ಬೆಳ್ಳಿ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಹಾಗೇ ಜನ ಮತ್ತಷ್ಟು ಚಿನ್ನ & ಬೆಳ್ಳಿ ಖರೀದಿ ಮಾಡಲು ಪ್ಲಾನ್ ಕೂಡ ಮಾಡುತ್ತಿದ್ದಾರೆ. ಹೀಗಿದ್ದಾಗ ಕೇವಲ 30 ನಿಮಿಷಗಳ ಅಂತರದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡಿರುವುದು ಇದೀಗ ಭಾರಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಬೇಕು ಅಂತಲೇ ಹೀಗೆ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಮಾಡಿ, ನಂತರ ಬೀಳಿಸುವ ಪ್ರಯತ್ನ ನಡೆಯುತ್ತಿದೆಯಾ? ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ. ಏಕೆಂದರೆ ಅಂತಾರಾಷ್ಟ್ರೀಯ ಚಿನ್ನ ಮಾರುಕಟ್ಟೆಯಲ್ಲಿ ಕೇವಲ 30 ನಿಮಿಷಗಳ ಅಂತರದಲ್ಲಿ ಭರ್ಜರಿ 3 ಟ್ರಿಲಿಯನ್ ಡಾಲರ್ ನಷ್ಟವಾಗಿದೆ. ಯಾರೋ ಭಾರಿ ದೊಡ್ಡ ಪ್ರಮಾಣದಲ್ಲಿ ಚಿನ್ನ & ಬೆಳ್ಳಿ ಮಾರಾಟ ಮಾಡಿದ್ದಾರೆ.
ಹೀಗೆ 3 ಟ್ರಿಲಿಯನ್ ಡಾಲರ್ ಹಣ ಎಂದರೆ ಅದು ಭಾರತೀಯ ರೂಪಾಯಿ ಲೆಕ್ಕದಲ್ಲಿ ಈಗ ಸುಮಾರು 27,55,07,13,98,99,999 ರೂಪಾಯಿ ಆಗಲಿದೆ. ಈ ಮೂಲಕ ಚಿನ್ನದ ಬೆಲೆ ಮತ್ತು ಬೆಳ್ಳಿಯ ಬೆಲೆ ಹೀಗೆ ದಿಢೀರ್ ಕುಸಿತ ಕಾಣಲು ಕಾರಣ ಏನು? ಎಂಬುದು ಈಗಲೂ ನಿಗೂಢವಾಗಿದೆ, ಮತ್ತೊಂದು ಕಡೆ ಚಿನ್ನ ಮಾರುಕಟ್ಟೆ ತಜ್ಞರು ಹೇಳುವಂತೆ ಈ ರೀತಿ ದಿಢೀರ್ ದೊಡ್ಡ ಮಟ್ಟದಲ್ಲಿ ಮಾರಾಟ ನಡೆದಾಗ ಕುಸಿತ ಆಗುವುದು ಮಾಮೂಲು. ಆದರೆ ಚಿನ್ನ ಮತ್ತು ಬೆಳ್ಳಿಗೆ ಭವಿಷ್ಯದಲ್ಲಿ ಇನ್ನಷ್ಟು ಬೆಲೆ ಬರಲಿದೆ ಎನ್ನುತ್ತಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ಭೀತಿ ಸೇರಿದಂತೆ, ಚಿನ್ನಕ್ಕೆ ಭಾರಿ ಮಟ್ಟದಲ್ಲಿ ಬೇಡಿಕೆ ಹೀಗೆ ಹಲವು ಕಾರಣಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ಆಕಾಶ ಮುಟ್ಟುತ್ತಿದೆ.
ಚಿನ್ನದ ಮೇಲೆ ಭರ್ಜರಿ ಹೂಡಿಕೆ!
ಬಂಗಾರ ಅಂದ್ರೆ ಚಿನ್ನ ಭಾರಿ ಡಿಮ್ಯಾಂಡ್ ಇರುವ ವಸ್ತು, ಹೀಗಾಗಿ ಚಿನ್ನ ಖರೀದಿಗೆ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಲು ಜನ ಕೂಡ ಮುಗಿಬಿದ್ದು ಮುಂದೆ ಬರ್ತಾರೆ. ನಮ್ಮ ಭಾರತೀಯರು ಚಿನ್ನ ನಂಬಿ ಹೂಡಿಕೆ ಮಾಡುತ್ತಾ ಬಂದಿದ್ದಾರೆ, ನೂರಾರು ವರ್ಷಗಳಿಂದ ಭಾರತೀಯರು ಹಳದಿ ಲೋಹ ಚಿನ್ನದ ಮೇಲೆ ವಿಪರೀತ ಹೂಡಿಕೆ ಮಾಡಿದ್ದಾರೆ. ಆದರೆ ಹೀಗೆ ಚಿನ್ನ ಕೊಳ್ಳಲು ಜನ ಕೂಡ ಮುಗಿಬಿದ್ದು ಮುಂದೆ ಬರುತ್ತಿರುವ ಕಾರಣ ಬಂಗಾರ ಬೆಲೆ ಭಾರಿ ಏರಿಕೆ ಕಂಡಿದ್ದು ಆಭರಣ ಪ್ರಿಯರ ಪಾಲಿಗೆ ಅದರಲ್ಲೂ ಆಭರಣ ಪ್ರಿಯ ಮಹಿಳೆಯರ ಪಾಲಿಗೆ ಚಿಂತೆ ತಂದಿತ್ತು. ಆದರೆ ಈಗ ದಿಢೀರ್ ಚಿನ್ನದ ಬೆಲೆ ಭಾರಿ ಕುಸಿತ ಕಂಡಿರುವುದು ಒಂದಷ್ಟು ನೆಮ್ಮದಿ ಕೊಟ್ಟಿದೆ.












Click it and Unblock the Notifications