Gold Price on January 1: ಬಂಗಾರ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ 2026ನೇ ವರ್ಷದ ಮೊದಲ ದಿನದ ಚಿನ್ನದ ದರಪಟ್ಟಿ
Gold Price on January 1: 2026ನೇ ವರ್ಷದ ಮೊದಲ ದಿನ ಬಂಗಾರ ದರ ಎಷ್ಟಿದೆ ಎನ್ನುವುದೇ ಬಹುತೇಕ ಮಂದಿ ಪ್ರಶ್ನೆಯಾಗಿದೆ. ಹಾಗಾದ್ರೆ, ಇಂದು (ಜನವರಿ 1) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ಹಾಗೂ ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ನಿನ್ನೆ (ಡಿಸೆಂಬರ್ 31, 2025) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,23,650 ರೂಪಾಯಿ ಇದ್ದರೆ, ಇಂದು (ಜನವರಿ 1, 2026) 1,23,800 ರೂಪಾಯಿಗೆ ಆಗಿದೆ. ಇನ್ನೂ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,34,890 ರೂಪಾಯಿ ಇತ್ತು. ಇನ್ನು ಇಂದು 1,35,060 ರೂಪಾಯಿ ಆಗಿದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 99,040 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 1,08,048 ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ದರ - 1,23,800 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,35,060 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,23,800 ರೂಪಾಯಿ
* ಚೆನ್ನೈ - 1,24,400 ರೂಪಾಯಿ
* ಮುಂಬೈ - 1,23,800 ರೂಪಾಯಿ
* ಕೋಲ್ಕತ್ತಾ - 1,23,800 ರೂಪಾಯಿ
* ನವದೆಹಲಿ - 1,23,950 ರೂಪಾಯಿ
* ಹೈದರಾಬಾದ್ - 1,23,800 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,35,060 ರೂಪಾಯಿ
* ಚೆನ್ನೈ - 1,36,140 ರೂಪಾಯಿ
* ಮುಂಬೈ - 1,35,060 ರೂಪಾಯಿ
* ಕೋಲ್ಕತ್ತಾ - 1,35,060 ರೂಪಾಯಿ
* ನವದೆಹಲಿ - 1,35,210 ರೂಪಾಯಿ
* ಹೈದರಾಬಾದ್ - 1,35,060 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 2,38,000 ರೂಪಾಯಿ (1,000 ರೂಪಾಯಿ ಇಳಿಕೆ)
* ಚೆನ್ನೈ - 2,56,000 ರೂಪಾಯಿ (1,000 ರೂಪಾಯಿ ಇಳಿಕೆ)
* ಮುಂಬೈ - 2,38,000 ರೂಪಾಯಿ (1,000 ರೂಪಾಯಿ ಇಳಿಕೆ)
* ಕೋಲ್ಕತ್ತಾ - 2,38,000 ರೂಪಾಯಿ (1,000 ರೂಪಾಯಿ ಇಳಿಕೆ)
* ನವದೆಹಲಿ - 2,38,000 ರೂಪಾಯಿ (1,000 ರೂಪಾಯಿ ಇಳಿಕೆ)
* ಹೈದರಾಬಾದ್ - 2,56,000 ರೂಪಾಯಿ (1,000 ರೂಪಾಯಿ ಇಳಿಕೆ)
ಆಭರಣಗಳ ದರ ಹೆಚ್ಚಾದರೂ ಸಹ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆ ಆಗುವುದಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಕಷ್ಟದ ಕಾಲಕ್ಕೆ ಆಗುತ್ತವೆ ಎನ್ನುವ ನಿಟ್ಟಿನಲ್ಲಿ ಖರೀದಿ ಮಾಡುತ್ತಲಿದ್ದಾರೆ. ಹೊಸ ವರ್ಷಕ್ಕೂ ಮುನ್ನಾ ದಿನ ಬಂಗಾರ ದರ ಇಳಿಕೆಯಾಗಿತ್ತು. ಆದರೆ, 2026ನೇ ವರ್ಷದ ಮೊದಲ ದಿನ ಬಹುತೇಕ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ತುಸು ಹೆಚ್ಚಾಗಿದ್ದು, ಬೆಳ್ಳಿ ದರ ಇಳಿಕೆಯಾಗಿದೆ. ಕೊಳ್ಳುವವರಿಗೆ ಇದು ಉತ್ತಮ ಸಮಯಾಗಿದೆ. ಯಾಕಂದ್ರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗಗಲೂಬಹುದು ಅಥವಾ ಇಳಿಕೆಯೂ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.












Click it and Unblock the Notifications