Get Updates
Get notified of breaking news, exclusive insights, and must-see stories!

ಬೇಡಿಕೆ ಹೆಚ್ಚಿಸಿಕೊಂಡ ಚಿನ್ನ ಫಳ ಫಳ ಹೊಳೆಯುತ್ತಿದೆ !

ನವದೆಹಲಿ, ಜ.12: ಜಾಗತಿಕ ಮಾರುಕಟ್ಟೆಯಲ್ಲಿನ ಏರುಪೇರು, ಶುಭ ಸಮಾರಂಭಕ್ಕಾಗಿ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಆಭರಣಕ್ಕಾಗಿ ರೀಟೈಲರ್ ಗಳಿಗೆ ಬೇಡಿಕೆ ಹೆಚ್ಚಿರುವುದು ಎಲ್ಲವೂ ಒಟ್ಟಿಗೆ ಸೇರಿ ಹಳದಿ ಲೋಹವನ್ನು ಮತ್ತೊಮ್ಮೆ ಫಳ ಫಳ ಹೊಳೆಯುವಂತೆ ಮಾಡಿದೆ. ಸೋಮವಾರ ಚಿನಿವಾರ ಪೇಟೆಯಲ್ಲಿ 230 ರು ಏರಿಕೆ ಕಂಡು ಪ್ರತಿ 10 ಗ್ರಾಂಗೆ 27,840 ರು ತಲುಪಿದೆ.

ಚಿನ್ನದ ಬೆಲೆಯಲ್ಲಿ ಇಳಿಕೆ ಮುಂದುವರಿಯುವ ಲಕ್ಷಣಗಳು ಗೋಚರಿಸಿದ ಬೆನ್ನಲ್ಲೇ ಬೆಲೆಯಲ್ಲಿ ಸುಧಾರಣೆ ಕಂಡಿರುವುದು ಆಭರಣ ಮಳಿಗೆಗಳಲ್ಲಿ ಚಟುವಟಿಕೆ ಹೆಚ್ಚಿಸಿದೆ. ಇತ್ತೀಚೆಗೆ ಈ ವರ್ಷದಲ್ಲೇ ಒಂದೇ ದಿನ ಅತ್ಯಂತ ಅಧಿಕ ಪ್ರಮಾಣದ ದರ ಏರಿಕೆ ಇದಾಗಿದೆ ಎಂದು ಚಿನಿವಾರ ಪೇಟೆಯಿಂದ ತಿಳಿದು ಬಂದಿದೆ. [ಚಿನ್ನ ಸಾಲದ ಮಿತಿ 2 ಲಕ್ಷಕ್ಕೆ ಹೆಚ್ಚಿಸಿದ ರಿಸರ್ವ್ ಬ್ಯಾಂಕ್]

ಬೆಳ್ಳಿ ಬೆಲೆ ಕೂಡಾ 400 ರು ಚೇತರಿಕೆ ಕಂಡು ಪ್ರತಿ ಕೆಜಿಗೆ 37,250 ರು ನಷ್ಟಾಗಿದೆ. ನಾಣ್ಯಗಳ ಟಂಕಿಸುವ ಬೇಡಿಕೆ ಹೆಚ್ಚಿರುವುದು ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಪ್ರತಿ 100 ಪೀಸ್ ಬೆಳ್ಳಿ ನಾಣ್ಯಗಳು 61 ಸಾವಿರದಿಂದ 62,000 ರು ನಂತೆ ಮಾರಾಟವಾಗುತ್ತಿವೆ.

Gold glitters on seasonal demand, global cues
ಸೋಮವಾರದ ದರ ಪಟ್ಟಿ
ಚಿನ್ನ(ಪ್ರತಿ 10 ಗ್ರಾಂ)

ಬೆಂಗಳೂರು: 25,580(22 Karat), 27,360(ಅಪರಂಜಿ)
ದೆಹಲಿ: 25,480(22K), 27,270(24K)
ಚೆನ್ನೈ: 25,540 (22K), 27,330 (24K)
ಮುಂಬೈ: 25,500 (22K), 27,290 (24K)

ಬೆಳ್ಳಿ(ಪ್ರತಿ 1 ಕೆಜಿಗೆ)
ಬೆಂಗಳೂರು: 37,178 ರು
ದೆಹಲಿ: 37,112
ಚೆನ್ನೈ: 37,155
ಮುಂಬೈ: 37,132

ಮದುವೆ ಮುಂತಾದ ಶುಭ ಸಮಾರಂಭ, ವರ್ಷಾಂತ್ಯದ ಆಫರ್ ಗಳು ಚಿನ್ನದ ಬೇಡಿಕೆ ಹೆಚ್ಚಿಸಿತ್ತು. ಈಗಲೂ ಇದೇ ರೀತಿ ಬೇಡಿಕೆ ಮುಂದುವರೆದಿದೆ. ಜಾಗತಿಕವಾಗಿ ಸಿಂಗಪುರದಲ್ಲಿ 1,231.29 ಯುಎಸ್ ಡಿ ಪ್ರತಿ ಔನ್ಸಿಗೆ ಹಾಗೂ ಬೆಳ್ಳಿ 16.61 ಪ್ರತಿ ಔನ್ಸಿಗೆ ತಲುಪಿದೆ.(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+