ಚಿನ್ನ, ಬೆಳ್ಳಿ ಬೆಲೆ ಇಳಿಕೆ: ಮಾರ್ಚ್ 28ರಂದು ಬೆಲೆ ಎಷ್ಟಿದೆ?
ಭಾರತೀಯ ಮಾರುಕಟ್ಟೆಯಲ್ಲಿ ಭಾನುವಾರ (ಮಾರ್ಚ್ 28)ದಂದು ಹಳದಿ ಲೋಹದ ವಹಿವಾಟು ಬೆಲೆ ಕುಸಿತಗೊಂಡಿದೆ. ಬೆಳ್ಳಿ ಕೂಡಾ ಇಳಿಮುಖವಾಗಿದೆ. ಆದರೆ, ಖರೀದಿ ಚಿನ್ನದ ದರ ಕೊಂಚ ಏರಿಕೆಯಾಗಿದ್ದು, ಗ್ರಾಹಕರಿಗೆ ಹೆಚ್ಚಿನ ವ್ಯತ್ಯಾಸ ಕಂಡು ಬರುವುದಿಲ್ಲ.
ನವದೆಹಲಿಯಲ್ಲಿ ಹೋಳಿ ನಂತರ 100 ಗ್ರಾಂಗೆ 7,600 ರು ನಷ್ಟು ವಹಿವಾಟು ಚಿನ್ನ ಕುಸಿದಿದ್ದು,ಖರೀದಿ ಚಿನ್ನ 10 ಗ್ರಾಂ 22 ಕ್ಯಾರೆಟ್ ಬೆಲೆ 44,060ರು ನಷ್ಟಿತ್ತು. 24 ಕ್ಯಾರೆಟ್ ಚಿನ್ನ 48, 060 ರು ನಷ್ಟೀತ್ತು. ಈ ವಾರದಲ್ಲಿ 10 ಗ್ರಾಂಗೆ 44,764ರು ನಂತೆ ವಹಿವಾಟು ಆರಂಭಿಸಿದ ಹಳದಿ ಲೋಹ 11ತಿಂಗಳಲ್ಲೆ ಕಾಣದ ಕುಸಿತ ಕಂಡಿದೆ.
ಬೆಳ್ಳಿ ಬೆಲೆಯು ಕೆಜಿಗೆ 200 ರೂಪಾಯಿ ಕಡಿಮೆಯಾಗಿ 64,700ರೂಪಾಯಿಗೆ ತಲುಪಿದೆ. ಜಾಗತಿಕವಾಗಿ ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,739ಡಾಲರ್ ತಲುಪಿದೆ. ಬೆಳ್ಳಿ ಬೆಲೆ 25.15 ಡಾಲರ್ ಪ್ರತಿ ಔನ್ಸ್ ಆಗಿದೆ.
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಕಳೆದ ನಾಲ್ಕು ದಿನಗಳ ಏರಿಳಿತ ಹೇಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಲೋಹಗಳ ಮೇಲಿನ ಮೂಲ ಅಬಕಾರಿ ಸುಂಕ
ಪ್ರಮುಖ ಲೋಹಗಳ ಮೇಲಿನ ಮೂಲ ಅಬಕಾರಿ ಸುಂಕವನ್ನು 2019ರ ಜುಲೈಯಲ್ಲಿ ಶೇ 10 ರಿಂದ ಶೇ 12.5ಕ್ಕೇರಿಸಲಾಗಿತ್ತು. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಚಿನ್ನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಲಾಗಿದೆ. ಶೇ 11.85% ರಿಂದ ಶೇ 6.9ಕ್ಕಿಳಿಸಲಿದೆ. ಬೆಳ್ಳಿ ಮೇಲೆ ಇದ್ದ ಅಬಕಾರಿ ಸುಂಕ ಶೇ 11%ರಿಂದ ಶೇ 6.1ಕ್ಕೆ ಇಳಿಸಲಾಗಿದೆ. ಇದೇ ರೀತಿ ಪ್ಲಾಟಿನಂ ಹಾಗೂ ಪಲ್ಲಿಡಂ ಮೇಲಿನ ಸುಂಕ ಶೇ 12.5ರಿಂದ 10ಕ್ಕಿಳಿಸಲಾಗಿದೆ. ಇದಲ್ಲದೆ ಈ ಬಾರಿ ಬಜೆಟ್ ನಲ್ಲಿ ಕೃಷಿ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಸೆಸ್ 2.5% ಚಿನ್ನ ಹಾಗೂ ಬೆಳ್ಳಿ ಮೇಲೂ ಹಾಕಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮಾರ್ಚ್ 28: 41,910 ( +10)<> 45, 720 (+10)
ಮಾರ್ಚ್ 27: 41,900 (+200)<> 45,710 (+220)
ಮಾರ್ಚ್ 26: 41,700 (-300)<> 45,490 (-330)
ಮಾರ್ಚ್ 25: 42, 000 (+100)<> 45,820 (+120)
ಬೆಳ್ಳಿ: 65,400 ಪ್ರತಿ 1 ಕೆ.ಜಿ

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮಾರ್ಚ್ 28: 44, 060 ( +10)<> 48, 060 (+10)
ಮಾರ್ಚ್ 27: 44,050 (+200)<> 48,050 (+210)
ಮಾರ್ಚ್ 26: 43,850 (-300)<> 47,840 (-320)
ಮಾರ್ಚ್ 25: 44, 150 (+90)<> 48,160 (+100)
ಬೆಳ್ಳಿ: 64,700 ಪ್ರತಿ 1 ಕೆ.ಜಿ

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮಾರ್ಚ್ 28: 42,330 ( +10)<> 46, 180 (+10)
ಮಾರ್ಚ್ 27: 42,320 (+160)<> 46,170 (+170)
ಮಾರ್ಚ್ 26: 42,160 (-190)<> 46,000 (-200)
ಮಾರ್ಚ್ 25: 42, 350 (+50)<> 46,200 (+60)
ಬೆಳ್ಳಿ: 69,300 ಪ್ರತಿ 1 ಕೆ.ಜಿ

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮಾರ್ಚ್ 28: 42, 990 (-10)<> 43,990 (-10)
ಮಾರ್ಚ್ 27: 43,000 (-760)<> 44,000 (-760)
ಮಾರ್ಚ್ 26: 43,760 (-160)<> 44,760 (-160)
ಮಾರ್ಚ್ 25: 43,920 (-100)<> 44,920(-100)
ಬೆಳ್ಳಿ: 64,700 ಪ್ರತಿ 1 ಕೆ.ಜಿ