ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳದಿ ಲೋಹ ಮತ್ತೆ ದುಬಾರಿ: ಮಾರ್ಚ್ 18ರಂದು ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರ

|
Google Oneindia Kannada News

ಬೆಂಗಳೂರು, ಮಾರ್ಚ್ 18: ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಗುರುವಾರ ಮತ್ತೆ ಏರಿಕೆ ಕಂಡಿದೆ. ಬುಧವಾರ ಸ್ಥಿರತೆ ಕಾಯ್ದುಕೊಂಡಿದ್ದ ಹಳದಿ ಲೋಹ, ಗುರುವಾರ ಪುನಃ ದುಬಾರಿಯಾಗಿದೆ. ಎಂಸಿಎಕ್ಸ್‌ನಲ್ಲಿ ಹಳದಿ ಲೋಹದ ಬೆಲೆ ಪ್ರತಿ ಗ್ರಾಂಗೆ 1 ರೂಪಾಯಿಯಂತೆ ಏರಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ ಮಂಗಳವಾರ ಪ್ರತಿ ಹತ್ತು ಗ್ರಾಂ ಚಿನ್ನದ ದರ 300 ರೂಪಾಯಿಯಷ್ಟು ಇಳಿಕೆಯಾಗಿತ್ತು. ಬುಧವಾರ ಇದೇ ದರವನ್ನು ಕಾಯ್ದುಕೊಂಡಿತ್ತು.

ಎಂಸಿಎಕ್ಸ್‌ನಲ್ಲಿ 22 ಕ್ಯಾರಟ್ ಮತ್ತು 24 ಕ್ಯಾರಟ್ ಎರಡರಲ್ಲಿಯೂ ಏರಿಕೆಯಾಗಿದ್ದು, 22 ಕ್ಯಾರಟ್‌ನ ಹತ್ತು ಗ್ರಾಂ ಚಿನ್ನದ ಬೆಲೆ 43,970 ರೂ. ತಲುಪಿದೆ. 24 ಕ್ಯಾರಟ್ ಚಿನ್ನದ ಹತ್ತು ಗ್ರಾಂ.ಗೆ 44,970 ರೂಪಾಯಿ ದರವಿದೆ. ಆದರೆ ಈ ದರ ದೇಶದ ವಿವಿಧ ನಗರಗಳಲ್ಲಿ ವ್ಯತ್ಯಾಸವಿದೆ. ಕೆಲವು ನಗರಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ದುಬಾರಿಯಾಗಿದೆ, ವಿವಿಧ ನಗರಗಳಲ್ಲಿ ಬುಧವಾರ ದರವನ್ನೇ ಕಾಯ್ದುಕೊಂಡಿದೆ.

ಚಿನ್ನದ ಬೆಲೆ ಏರಿಕೆ ಕುರಿತು ಚಿನ್ನದ ಬೆಲೆ ಏರಿಕೆ ಕುರಿತು "ಗೋಲ್ಡ್ ಗುರು" ಕೊಟ್ಟಿರುವ ಈ ವಾರದ ಟಿಪ್ಸ್ !

ಬೆಂಗಳೂರಿನಲ್ಲಿ ನಿನ್ನೆ ಯಾವುದೇ ಬದಲಾವಣೆ ಕಾಣದ ಚಿನ್ನದ ದರ, ಗುರುವಾರ ದೊಡ್ಡ ಏರಿಕೆ ಕಂಡಿದೆ. ಚಿನ್ನಾಭರಣ ಖರೀದಿಯ ಉದ್ದೇಶ ಹೊಂದಿರುವ ಗ್ರಾಹಕರಿಗೆ ಮತ್ತೆ ಆಘಾತ ಮೂಡಿಸಿದೆ. ಬೆಳ್ಳಿಯ ದರವೂ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ.

ದೆಹಲಿಯಲ್ಲಿ ದರ

ದೆಹಲಿಯಲ್ಲಿ ದರ

ಹಳದಿ ಲೋಹದ ಬೆಲೆ ದೆಹಲಿಯಲ್ಲಿ ಗುರುವಾರ ಬದಲಾಗಿಲ್ಲ. ಗುರುವಾರ ಹತ್ತು ರೂಪಾಯಿಯಷ್ಟು ಅಲ್ಪ ಇಳಿಕೆಯಾಗಿದ್ದ ದರವನ್ನೇ ಉಲಿಸಿಕೊಂಡಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 44,160 ರೂ ದಿಂದ 44,150ಕ್ಕೆ ಇಳಿಕೆಯಾಗಿತ್ತು. ಹಾಗೆಯೇ 24 ಕ್ಯಾರಟ್ ಚಿನ್ನ ಬೆಲೆ ಗ್ರಾಂಗೆ ಕೂಡ ಸ್ಥಿರವಾಗಿದ್ದು, ಪ್ರತಿ 10 ಗ್ರಾಂ ಚಿನ್ನದ ದರ 48,160 ರೂಪಾಯಿ ಇದೆ.

ಬೆಂಗಳೂರಲ್ಲಿ ಚಿನ್ನದ ದರ

ಬೆಂಗಳೂರಲ್ಲಿ ಚಿನ್ನದ ದರ

ಬೆಂಗಳೂರಿನಲ್ಲಿ ಚಿನ್ನದ ದರ ತುಟ್ಟಿಯಾಗಿದೆ. 22 ಕ್ಯಾರಟ್ ಚಿನ್ನದ ಬೆಲೆ 42,010 ರೂ.ನಲ್ಲಿ ಬುಧವಾರ ಸ್ಥಿರತೆ ಕಂಡಿತ್ತು. ಅದೀಗ 190 ರೂಪಾಯಿಯಷ್ಟು ಏರಿಕೆಯಾಗಿದ್ದು, 42,200 ರೂಪಾಯಿಗೆ ತಲುಪಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ 210 ರೂ ಏರಿಕೆಯಾಗಿದೆ. ಶುದ್ಧ ಚಿನ್ನದ ದರ 46,040 ರೂಪಾಯಿಗೆ ಮುಟ್ಟಿದೆ.

ಚೆನ್ನೈನಲ್ಲಿ ಬೆಲೆ ಎಷ್ಟು?

ಚೆನ್ನೈನಲ್ಲಿ ಬೆಲೆ ಎಷ್ಟು?

ಚೆನ್ನೈನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ 210 ರೂಪಾಯಿಯಷ್ಟು ದುಬಾರಿಯಾಗಿದೆ. 10 ಗ್ರಾಂ ತೂಕದ 22 ಕ್ಯಾರಟ್ ಚಿನ್ನದ ಬೆಲೆ ಬುಧವಾರ ಇಳಿಕೆಯಾಗಿತ್ತು. ಗುರುವಾರ 42,580 ರೂ.ಗೆ ಮಾರಾಟವಾಗುತ್ತಿದೆ ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 230 ರೂಪಾಯಿ ಹೆಚ್ಚಳದೊಂದಿಗೆ 46,450 ರೂ. ತಲುಪಿದೆ.

ಮುಂಬೈನಲ್ಲಿ ಚಿನ್ನದ ದರ

ಮುಂಬೈನಲ್ಲಿ ಚಿನ್ನದ ದರ

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂ ಏರಿಕೆಯಾಗಿದ್ದು, 43,970 ರೂ ದರದಲ್ಲಿದೆ. 24 ಕ್ಯಾರಟ್ ಚಿನ್ನದ ಬೆಲೆ ಕೂಡ 10 ಗ್ರಾಂಗೆ 10 ರೂ ಹೆಚ್ಚಳದಂತೆ 44,970 ರೂ ದರಕ್ಕೆ ಮಾರಾಟವಾಗುತ್ತಿದೆ. ಕೇರಳದಲ್ಲಿ ಸಹ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನವು 190 ರೂದಂತೆ ಏರಿಕೆಯಾಗಿದ್ದು, 10 ಗ್ರಾಂಗೆ 42,200 ರೂ ಮತ್ತು, 24 ಕ್ಯಾರಟ್ ಹಳದಿ ಲೋಹ 210 ರೂಪಾಯಿ ಏರಿಕೆಯೊಂದಿಗೆ 46,040 ರೂಗೆ ಮಾರಾಟವಾಗುತ್ತಿದೆ.

ದೇಶದಲ್ಲಿ ಬೆಳ್ಳಿ ಬೆಲೆ

ದೇಶದಲ್ಲಿ ಬೆಳ್ಳಿ ಬೆಲೆ

ಬೆಳ್ಳಿ ದರದಲ್ಲಿಯೂ ದೇಶದ ವಿವಿಧ ನಗರಗಳಲ್ಲಿ ಏರಿಕೆ ಕಂಡಿದೆ. ಎಂಸಿಎಕ್ಸ್‌ನಲ್ಲಿ ಪ್ರತಿ ಕೆಜಿ ಬೆಳ್ಳಿ ದರ 1200 ರೂಪಾಯಿಯಷ್ಟು ತುಟ್ಟಿಯಾಗಿದೆ. ಪ್ರಸ್ತುತ ಒಂದು ಕೆಜಿ ಬೆಳ್ಳಿಗೆ 68,200 ರೂ ದರವಿದೆ. ಬೆಂಗಳೂರಿನಲ್ಲಿ ಸತತ ಮೂರನೇ ದಿನ ಏರಿಕೆಯಾಗಿದೆ. ನಗರದಲ್ಲಿ ಬೆಳ್ಳಿ ದರ ಒಂದು ಕೆಜಿಗೆ 400 ರೂಪಾಯಿ ಹೆಚ್ಚಳವಾಗಿದ್ದು, 67,800 ರೂಪಾಯಿಯಿಂದ 68,200 ರೂ.ಗೆ ಏರಿಕೆಯಾಗಿದೆ. ದೆಹಲಿಯಲ್ಲಿ ಕೆಜಿ ಬೆಳ್ಳಿಗೆ 1200 ರೂಪಾಯಿ ಇಳಿಕೆಯಾಗಿದ್ದು 67,600 ರೂ. ದಿಂದ 68,200 ರೂ.ಗೆ ಏರಿದೆ. ಚೆನ್ನೈನಲ್ಲಿ 71,500 ರೂ ಮತ್ತು ಮುಂಬೈನಲ್ಲಿ 68,200 ರೂಪಾಯಿ ದರವಿದೆ.

* ಚಿನ್ನ ಮತ್ತು ಬೆಳ್ಳಿ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಬದಲಾವಣೆ ಮತ್ತು ಸ್ಥಳೀಯ ತೆರಿಗೆ ನೀತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಈ ಮಾಹಿತಿ ಬೆಳಿಗ್ಗೆ 11 ಗಂಟೆಯವರೆಗಿನ ಮಾರುಕಟ್ಟೆ ದರ ಬದಲಾವಣೆಯನ್ನು ಆಧರಿಸಿದೆ.

English summary
Gold and silver rates raises on March 18 in some major cities. Here is the price details of major cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X