Gold Rate: ಒಂದೇ ದಿನ 20,800 ರೂಪಾಯಿ ಕುಸಿದ ಚಿನ್ನದ ಬೆಲೆ
ಸತತ ಎರಡು ದಿನ ಏರಿಕೆ ಕಂಡಿದ್ದ ಚಿನ್ನದ ಬೆಲೆ ಒಂದೇ ದಿನ ಬರೋಬ್ಬರಿ 20,000 ರೂಪಾಯಿ ಕುಸಿತ ಕಂಡಿದ್ದು ಆಭರಣ ಪ್ರಿಯರ ಖುಷಿ ಹೆಚ್ಚಿಸಿದೆ. ಎರಡು ದಿನದಲ್ಲಿ 11,000 ಸಾವಿರ ಏರಿಕೆ ಕಂಡಿದ್ದ ಚಿನ್ನ ಒಂದೇ ದಿನ ಮಹಾಕುಸಿತ ಕಂಡಿದೆ.
ಶುಕ್ರವಾರ ₹ 6,760 ಇದ್ದ ಒಂದು ಗ್ರಾಂ ಆಭರಣ (22 ಕ್ಯಾರೆಟ್) ಚಿನ್ನದ ಬೆಲೆ 190 ರೂಪಾಯಿ ಕುಸಿತ ಕಂಡಿದ್ದು ಶನಿವಾರ 6,570 ರೂಪಾಯಿಗೆ ಮಾರಾಟವಾಗುತ್ತಿದೆ. 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 19,000 ರೂಪಾಯಿ ಕುಸಿದಿದೆ. ಶುಕ್ರವಾರ 6,76,000 ರೂಪಾಯಿ ಇದ್ದ 100 ಗ್ರಾಂ 22 ಕ್ಯಾರೆಟ್ ಚಿನ್ನ ಶನಿವಾರ 6,57,000 ರೂಪಾಯಿಗೆ ಕುಸಿದಿದೆ.

ಶುಕ್ರವಾರ ₹ 7,375 ಇದ್ದ ಒಂದು ಗ್ರಾಂ ಶುದ್ಧ (24 ಕ್ಯಾರೆಟ್) ಚಿನ್ನದ ಬೆಲೆ 208 ರೂಪಾಯಿ ಕುಸಿತ ಕಂಡಿದ್ದು ಶನಿವಾರ 7,167 ರೂಪಾಯಿಗೆ ಮಾರಾಟವಾಗುತ್ತಿದೆ. 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 20,800 ರೂಪಾಯಿ ಕುಸಿದಿದೆ. ಶುಕ್ರವಾರ 7,37,500 ರೂಪಾಯಿ ಇದ್ದ 100 ಗ್ರಾಂ 24 ಕ್ಯಾರೆಟ್ ಚಿನ್ನ ಶನಿವಾರ 7,16,700 ರೂಪಾಯಿಗೆ ಕುಸಿದಿದೆ.
ಬೆಳ್ಳಿ ಬೆಲೆ ಕೂಡ ಬಾರಿ ಕುಸಿತ
ಇನ್ನು ಬೆಳ್ಳಿ ಬೆಲೆ ಕೂಡ ಕುಸಿತ ಕಂಡಿದ್ದು, ಒಂದು ಕೆಜಿ ಬೆಳ್ಳಿ ಬೆಲೆ 4500 ರೂಪಾಯಿ ಕುಸಿದಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಶುಕ್ರವಾರ 96,000 ರೂಪಾಯಿ ಇದ್ದ ಒಂದು ಕೆಜಿ ಬೆಳ್ಳಿ ಬೆಲೆ ಶನಿವಾರ 91,500 ರೂಪಾಯಿಗೆ ಕುಸಿತ ಕಂಡಿದೆ.












Click it and Unblock the Notifications