Gold Price: ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್: ಚಿನ್ನದ ಬೆಲೆ ಬಂಪರ್ ಇಳಿಕೆ!
Gold Price: ಚಿನ್ನ ಪ್ರಿಯರಿಗೆ ಇಲ್ಲೊಂದು ಭರ್ಜರಿ ಗುಡ್‌ನ್ಯೂಸ್ ಇದೆ. ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು. ಚಿನ್ನ ಖರೀದಿ ಮಾಡುವವರ ಹಾಗೂ ಚಿನ್ನ ಪ್ರಿಯರಲ್ಲಿ ಸಂತೋಷ ಮೂಡುವುದಕ್ಕೆ ಕಾರಣವಾಗಿದೆ. ಕಳೆದ 15 ದಿನಗಳ ಹಿಂದೆ ಚಿನ್ನದ ಬೆಲೆಯಲ್ಲಿ ಭರ್ಜರಿ ಹೆಚ್ಚಳವಾಗಿತ್ತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಸ್ವೀಕರಿಸಿದ ಮೇಲೆ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗಿದೆ.
ಇದಕ್ಕೆ ಕಾರಣ ಅವರು ಅಮೆರಿಕದ ತೆರಿಗೆ ನೀತಿಯನ್ನು ಬದಲಾಯಿಸುತ್ತೇವೆ. ಹೊಸ ತೆರಿಗೆ ನೀತಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದು. ಇದರ ಬೆನ್ನಲ್ಲೇ ಚಿನ್ನದ ಬೆಲೆ ಭರ್ಜರಿ ಏರಿಕೆ ಆಗಿತ್ತು. ಟ್ರಂಪ್ ಅವರ ನಿರ್ಧಾರಗಳಿಂದ ಡಾಲರ್ ಬೆಲೆ ತುಸು ಇಳಿಕೆ ಕಂಡಿತ್ತು. ಈ ಸಂದರ್ಭದಲ್ಲಿ ಜನ ಚಿನ್ನದ ಮೇಲೆ ಹೂಡಿಕೆ ಮಾಡಲು ಶುರು ಮಾಡಿದ್ದರು. ಇದರಿಂದ ಚಿನ್ನದ ಬೆಲೆ ಭರ್ಜರಿ ಹೆಚ್ಚಳವಾಗಿತ್ತು. ಇದಾದ ಮೇಲೆ ಆಗಿರುವ ಬದಲಾವಣೆಗಳಿಂದ ಚಿನ್ನದ ಬೆಲೆ ಮತ್ತೆ ತುಸು ಇಳಿಕೆಯಾಗುತ್ತಿದೆ. ಫೆಬ್ರವರಿ 3ರ ಚಿನ್ನ ಹಾಗೂ ಬೆಳ್ಳಿ ಬೆಲೆ ವಿವರ ಇಲ್ಲಿದೆ.

ಕಳೆದ ಹತ್ತು ದಿನಗಳ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸಗಳು ಆಗಿವೆ. ಒಮ್ಮೆಗೆ ಚಿನ್ನದ ಬೆಲೆ 2,000 ಸಾವಿರ ಹಾಗೂ 1000 ಸಾವಿರ ರೂಪಾಯಿ ಹೆಚ್ಚಳವಾಗುವ ಮೂಲಕ ಚಿನ್ನ ಪ್ರಿಯರು ಶಾಕ್ ಆಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಫೆಬ್ರವರಿ 3ರಂದು ಚಿನ್ನದ ಬೆಲೆ ಭರ್ಜರಿ ಇಳಿಕೆಯಾಗಿದೆ. ಚಿನ್ನದ ಬೆಲೆಯು 4,400 ರೂಪಾಯಿ ಇಳಿಕೆಯಾಗಿದೆ. ಹೌದು ಚಿನ್ನದ ಬೆಲೆ ಇಳಿಕೆಯಾಗುತ್ತಿರುವುದು ಚಿನ್ನ ಪ್ರಿಯರಲ್ಲಿ ಸಂತೋಷ ತಂದಿದೆ. ಚಿನ್ನದ ಬೆಲೆ ಯಾವ ಕ್ಯಾರೇಟ್‌ನ ಮೇಲೆ ಎಷ್ಟು ಇಳಿಕೆಯಾಗಿದೆ ಎನ್ನುವ ವಿವರ ನೋಡೋಣ.
ಚಿನ್ನದ ಬೆಲೆಯು ಭರ್ಜರಿ ಇಳಿಕೆಯಾಗಿದೆ. 24 ಕ್ಯಾರೇಟ್ ಚಿನ್ನದ ಬೆಲೆಯು 1 ಗ್ರಾಂಗೆ 8,405 ರೂಪಾಯಿ ಇದೆ. ಇನ್ನು 10 ಗ್ರಾಂಗೆ 84,050 ರೂಪಾಯಿ ಆಗಿದೆ. 100 ಗ್ರಾಂಗೆ 8,40,500 ರೂಪಾಯಿ ಆಗಿದ್ದು. ಒಟ್ಟಾರೆ 4,400 ರೂಪಾಯಿ ಇಳಿಕೆಯಾಗಿದೆ. 22 ಕ್ಯಾರೇಟ್ ಚಿನ್ನದ ಬೆಲೆ 1 ಗ್ರಾಂಗೆ 7,705 ರೂ ಹಾಗೂ 10 ಗ್ರಾಂಗೆ 77,050 ರೂಪಾಯಿ ಆಗಿದೆ.

ಬೆಳ್ಳಿ ಬೆಲೆಯಲ್ಲೂ ಇಳಿಕೆ: ಇನ್ನು ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡು ಬಂದಿದೆ. ಪ್ರತಿ ಗ್ರಾಂ ಬೆಳ್ಳಿ ಬೆಲೆಯು 99.40 ರೂಪಾಯಿ ಇದ್ದರೆ. ಪ್ರತಿ ಕೆಜಿ ಬೆಳ್ಳಿ ಬೆಲೆಯು 99,400 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆಯಲ್ಲಿ ಒಟ್ಟಾರೆ 100 ರೂಪಾಯಿ ಇಳಿಕೆಯಾದಂತಾಗಿದೆ.
80,000 ಸಾವಿರ ಗಡಿ ದಾಟಿದ್ದ ಚಿನ್ನ!
ಕಳೆದ ಕೆಲವು ದಿನಗಳ ಮುಂಚೆ ಚಿನ್ನದ ಬೆಲೆಯು ಭರ್ಜರಿ 80,000 ಸಾವಿರ ರೂಪಾಯಿ ಗಡಿ ದಾಟಿತ್ತು. 80,000 ಸಾವಿರ ರೂಪಾಯಿ ಚಿನ್ನದ ಗಡಿ ದಾಟುತ್ತಿದ್ದಂತೆಯೇ ಚಿನ್ನ ಪ್ರಿಯರು ಕಂಗಾಲಾಗಿದ್ದರು. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನೇನು 1 ಲಕ್ಷ ರೂಪಾಯಿ ಮುಟ್ಟಲಿದೆ ಎನ್ನುವ ಆತಂಕದಲ್ಲಿ ಚಿನ್ನ ಖರೀದಿದಾರರು ಶಾಕ್ ಆಗಿದ್ದರು.
ಆದರೆ, ಇದೀಗ ಮತ್ತೆ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು ಚಿನ್ನ ಖರೀದಿ ಮಾಡಬೇಕು ಎನ್ನುವವರು ತುಸು ನಿರಾಳರಾಗಿದ್ದಾರೆ. ಆದರೆ ಚಿನ್ನದ ಬೆಲೆ ಭಾರೀ ಇಳಿಕೆ ಸಹ ಆಗಿಲ್ಲ. 84,000 ಸಾವಿರದ ಗಡಿಯಲ್ಲಿ ನಿಂತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಯಾವ ರೀತಿ ಏರುಪೇರಾಗಲಿದೆ ಎನ್ನುವ ಆತಂಕವಂತೂ ಚಿನ್ನ ಪ್ರಿಯರಲ್ಲಿ ಇದೆ.












Click it and Unblock the Notifications