Gold Price on August 4: ಶ್ರಾವಣ ಮಾಸದಲ್ಲೇ ಬಂಗಾರ ದರ ಭರ್ಜರಿ ಇಳಿಕೆ; ಆಗಸ್ಟ್ 4ರ ದರಪಟ್ಟಿ ಇಲ್ಲಿದೆ
Gold Price on August 4: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲಿರುತ್ತದೆ. ಅದರಲ್ಲೂ ಶ್ರಾವಣ ಮಾಸದ ಆರಂಭವಾಗಿನಿಂದ ಬೆಲೆ ಇಳಿಕೆಯಾಗುತ್ತಲಿದೆ. ಹಾಗಾದ್ರೆ ಇಂದು (ಆಗಸ್ಟ್ 4) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಗರವಾರು ಬಂಗಾರ ದರಗಳು: ನಿನ್ನೆ (ಆಗಸ್ಟ್ 3) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 92,900 ರೂಪಾಯಿ ಇದ್ದರೆ, ಇಂದು (ಆಗಸ್ಟ್ 4) 92,890 ರೂಪಾಯಿಗೆ ಇಳಿಕೆ ಆಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,01,350 ರೂಪಾಯಿ ಇತ್ತು. ಇನ್ನು ಇಂದು 1,01,340 ರೂಪಾಯಿಗೆ ಇಳಿಕೆ ಆಗಿದೆ. ಹಾಗಾದರೆ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರ, ಬೆಳ್ಳಿ ದರ ಪಟ್ಟಿ ಇಲ್ಲಿದೆ ಪರಿಶೀಲಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 74,312 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 81,072
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 92,890 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,01,340 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 92,890 ರೂಪಾಯಿ
* ಚೆನ್ನೈ - 92,890 ರೂಪಾಯಿ
* ಮುಂಬೈ - 92,890 ರೂಪಾಯಿ
* ಕೋಲ್ಕತ್ತಾ - 92,890 ರೂಪಾಯಿ
* ನವದೆಹಲಿ - 93,040 ರೂಪಾಯಿ
* ಹೈದರಾಬಾದ್ - 92,890 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,01,340 ರೂಪಾಯಿ
* ಚೆನ್ನೈ - 1,01,340 ರೂಪಾಯಿ
* ಮುಂಬೈ - 1,01,340 ರೂಪಾಯಿ
* ಕೋಲ್ಕತ್ತಾ - 1,01,340 ರೂಪಾಯಿ
* ನವದೆಹಲಿ - 1,01,490 ರೂಪಾಯಿ
* ಹೈದರಾಬಾದ್ - 1,01,340 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,12,900 ರೂಪಾಯಿ (100 ಇಳಿಕೆ)
* ಚೆನ್ನೈ - 1,22,900 ರೂಪಾಯಿ (100 ಇಳಿಕೆ)
* ಮುಂಬೈ - 1,12,900 ರೂಪಾಯಿ (100 ಇಳಿಕೆ)
* ಕೋಲ್ಕತ್ತಾ - 1,12,900 ರೂಪಾಯಿ (100 ಇಳಿಕೆ)
* ನವದೆಹಲಿ - 1,12,900 ರೂಪಾಯಿ (100 ಇಳಿಕೆ)
* ಹೈದರಾಬಾದ್ - 1,22,900 ರೂಪಾಯಿ (100 ಇಳಿಕೆ)
ಬಂಗಾರ, ಬೆಳ್ಳಿ ದರ ಭರ್ಜರಿ ಇಳಿಕೆ: ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಸಾಮಾನ್ಯ ದಿನಗಳಲ್ಲೂ ಕೂಡ ಬಂಗಾರ ಕೊಳ್ಳುವವರ ಸಂಖ್ಯೆಯೇನು ಕಡಿಮೆ ಇರುವುದಿಲ್ಲ. ದರ ಕಡಿಮೆಯಿರಲಿ, ಬಿಡಲಿ ಆಭರಣಗಳನ್ನು ಕಷ್ಟದ ಕಾಲಕ್ಕೆ ಆಗುತ್ತವೆ ಎಂದು ಕೊಂಡುಕೊಳ್ಳುತ್ತಲಿರುತ್ತಾರೆ. ಹಬ್ಬ, ಹರಿ ದಿನಗಳಲ್ಲಂತೂ ತುಸು ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಕೊಳ್ಳುತ್ತಾರೆ. ಅದರಲ್ಲೂ ಇದೀಗ ಶ್ರಾವಣ ಮಾಸ ಆರಂಭವಾಗಿದ್ದು, ಈ ವೇಳೆಯೇ ದರ ಸತತವಾಗಿ ಇಳಿಕೆಯಾಗುತ್ತಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.












Click it and Unblock the Notifications