Gold And Silver Price: ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ ಗ್ಯಾರಂಟಿ? ಬೆಳ್ಳಿ ಬೆಲೆ ಏನಾಗುತ್ತೆ?
ಚಿನ್ನ ಖರೀದಿಗೆ ಇದೀಗ ಜನರು ಸಿದ್ಧತೆ ನಡೆಸಿದ್ದಾರೆ, ಯಾಕಂದ್ರೆ ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಸೀಸನ್ ಆರಂಭ ಆಗಲಿದೆ. ಹೀಗಾಗಿ ಚಿನ್ನದ ಆರ್ಡರ್ ಕೊಡಲು ಜನಗಳು ಸಿದ್ಧತೆ ನಡೆಸಿದ್ದಾರೆ. ಹಾಗೇ ಬೆಳ್ಳಿ ಖರೀದಿಗೆ ಕೂಡ ಪ್ಲಾನ್ ಮಾಡಿದ್ದಾರೆ ಜನ. ಇಂತಹ ಸಮಯದಲ್ಲಿ ಚಿನ್ನ & ಬೆಳ್ಳಿ ಬೆಲೆ ಕುಸಿತ ಕಾಣಬಹುದು ಎಂಬ ನಿರೀಕ್ಷೆಯಲ್ಲಿ ಜನರು ಇದ್ದಾರೆ. ಸತತವಾಗಿ ಕುಸಿತ ಕಾಣುತ್ತಿದ್ದ ಚಿನ್ನ & ಬೆಳ್ಳಿ ಬೆಲೆ ಶುಕ್ರವಾರ ಮಾತ್ರ ಒಂದಷ್ಟು ಏರಿಕೆ ಕಂಡಿದೆ. ಆದ್ರೆ ಶನಿವಾರ ಚಿನ್ನ & ಬೆಳ್ಳಿ ಬೆಲೆ ಕುಸಿತ ಕಾಣುತ್ತಾ?
ಚಿನ್ನ & ಬೆಳ್ಳಿ ಇಲ್ಲದೆ ಮದುವೆ ನಡೆಯೋದೆ ಇಲ್ಲ ಎನ್ನಬಹುದು. ಯಾಕಂದ್ರೆ ಭಾರತದಲ್ಲಿ ಮದುವೆಗೆ ಚಿನ್ನ & ಬೆಳ್ಳಿ ಬೇಕೆ ಬೇಕು. ತಾಳಿ & ಓಲೆಯಿಂದ ಹಿಡಿದು ಪ್ರತಿಯೊಂದು ವಸ್ತು ಕೂಡ ಚಿನ್ನ ಅಥವಾ ಬೆಳ್ಳಿಯನ್ನ ಡಿಮ್ಯಾಂಡ್ ಮಾಡುತ್ತದೆ. ಹೀಗಿದ್ದಾಗ ಜನರು ಕೂಡ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ಚಿನ್ನ & ಬೆಳ್ಳಿ ಖರೀದಿ ಮಾಡುತ್ತಾರೆ. ಹೀಗಿದ್ದಾಗಲೇ ಸದ್ಯಕ್ಕೆ ಚಿನ್ನ & ಬೆಳ್ಳಿ ಬೆಲೆ ಕುಸಿತ ಕಾಣಬಹುದು ಎಂಬ ನಿರೀಕ್ಷೆಯಲ್ಲಿ ಇರುವ ಜನರಿಗೆ ಇದೀಗ...

ಶುಕ್ರವಾರ ಚಿನ್ನ ಭರ್ಜರಿ ಏರಿಕೆ!
ಅಂದಹಾಗೆ 24 ಕ್ಯಾರೆಟ್ ಚಿನ್ನದ ಬೆಲೆ ಶುಕ್ರವಾರ ಪ್ರತಿ 1 ಕೆ.ಜಿ.ಗೆ 91 ಸಾವಿರ ರೂಪಾಯಿ ಏರಿಕೆ ಕಂಡಿತ್ತು. ಈ ಮೂಲಕ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 910 ರೂಪಾಯಿ ಏರಿಕೆ ಕಂಡಿದೆ. ಹೀಗಾಗಿ ಈಗ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 79,470 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ ಬರೋಬ್ಬರಿ 7,94,700 ರೂಪಾಯಿ ಆಗಿದೆ. ಈ ಮೂಲಕ ಚಿನ್ನದ ಬೆಲೆಯಲ್ಲಿ ಶುಕ್ರವಾರ ಒಂದೇ ದಿನದಲ್ಲಿ ಭಾರಿ ದೊಡ್ಡ ಪ್ರಮಾಣದ ಏರಿಕೆ ಕಂಡು ಬಂದಿದೆ. ಇದರ ಜೊತೆಗೆ ಬೆಳ್ಳಿ ಬೆಲೆಯಲ್ಲಿ ಕೂಡ ಭಾರಿ ಏರಿಕೆ ಆಗಿತ್ತು. ಹಾಗಾದ್ರೆ ಶನಿವಾರ ಚಿನ್ನದ ಬೆಲೆ ಕುಸಿತ ಕಾಣಬಹುದಾ?
ಆಭರಣ ಚಿನ್ನದ ಕಥೆ ಏನು?
ಶುಕ್ರವಾರ 24 ಕ್ಯಾರೆಟ್ ಚಿನ್ನದ ಜೊತೆಗೆ ಆಭರಣ ಚಿನ್ನದ ಬೆಲೆ ಕೂಡ ಏರಿಕೆಯನ್ನು ಕಂಡಿತ್ತು. ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಏರಿಕೆಯನ್ನ ಕಂಡು ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಇದೀಗ 8,500 ರೂಪಾಯಿ ಏರಿಕೆ ಆಗಿದೆ. ಈ ಮೂಲಕ ಪ್ರತಿ 10 ಗ್ರಾಂ ಆಭರಣ ಚಿನ್ನ ಬೆಲೆ ಈಗ 850 ರೂಪಾಯಿ ಏರಿಕೆ ಆಗಿದೆ.
ಆಭರಣ ಚಿನ್ನ ಬೆಲೆ ಏರಿಕೆ ಬಳಿಕ ಈಗ ಪ್ರತಿ 10 ಗ್ರಾಂಗೆ 72,850 ರೂಪಾಯಿ ಮಾರಾಟ ಆಗ್ತಿದೆ. ಮತ್ತೊಂದು ಕಡೆ ಬೆಳ್ಳಿ ಬೆಲೆಯಲ್ಲಿ 1000 ರೂಪಾಯಿ ಏರಿಕೆ ಕಂಡು 94,000 ರೂಪಾಯಿ ಪ್ರತಿ ಕೆಜಿಗೆ ಮಾರಾಟ ಆಗುತ್ತಿದೆ. ಹೀಗಿದ್ದಾಗ, ಶನಿವಾರ ಚಿನ್ನದ ಬೆಲೆ ಕುಸಿಯುವ ನಿರೀಕ್ಷೆಯಲ್ಲಿ ಜನರು ಇದ್ದು, ಈ ಸಾಧ್ಯತೆಗಳನ್ನ ತಳ್ಳಿ ಹಾಕುವಂತೆ ಇಲ್ಲ.
ಚಿನ್ನ ಬಳಕೆಗೆ 5000 ವರ್ಷಗಳ ಇತಿಹಾಸ!
ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನ ಹೆಚ್ಚಾಗಿ ಬಳಸತೊಡಗಿದ. ಅದ್ರಲ್ಲೂ ಚಿನ್ನ ಬಳಕೆಗೆ ಸುಮಾರು 5000 ವರ್ಷಗಳ ದೊಡ್ಡ ಇತಿಹಾಸವಿದೆ. ಹೀಗೆ ಚಿನ್ನವನ್ನ ಮನುಷ್ಯ ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾನೆ. ಹೀಗಾಗಿ ಈ ಹೊತ್ತಿಗು ಚಿನ್ನಕ್ಕೆ ಭಾರಿ ದೊಡ್ಡ ಗೌರವ & ಬೆಲೆ ಇದೆ. ಈ ರೀತಿ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತೀ ಹೆಚ್ಚು ಬೆಲೆ ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು.












Click it and Unblock the Notifications