Gold Price: ಚಿನ್ನ ಬೆಲೆ 40,000 ರೂಪಾಯಿ ಏರಿಕೆ, ರೇಟ್ ಎಷ್ಟಾಗಲಿದೆ ಅಂದ್ರೆ...

ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿದೆ, ಸಂಕ್ರಾಂತಿ ಹಬ್ಬದ ಸಮಯದಲ್ಲಿ ಒಂದಷ್ಟು ಚಿನ್ನ ಖರೀದಿ ಮಾಡಿ ಅದ್ಧೂರಿಯಾಗಿ ಹಬ್ಬ ಆಚರಣೆ ಮಾಡೋಣ ಅಂತಾ ಕಾಯುತ್ತಿದ್ದ ಜನರಿಗೆ ಈಗ ಆಘಾತ ಎದುರಾಗಿದೆ. ಚಿನ್ನದ ಬೆಲೆ ಕಡಿಮೆ ಆಗಬಹುದು ಅನ್ನೋ ನಿರೀಕ್ಷೆ ಇಟ್ಕೊಂಡು ಜನ ಕಾಯುತ್ತಿದ್ದರು, ಆದರೆ ಒಂದೇ ದಿನ ಚಿನ್ನ ಬೆಲೆ 40,000 ರೂಪಾಯಿ ಏರಿಕೆಯಾಗಿದೆ!

ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಗಿಬಿಳುತ್ತಿರುವ ಕಾರಣ ಹೊಸ ಇತಿಹಾಸ ಬರೆಯುತ್ತಿದೆ ಚಿನ್ನದ ಬೆಲೆ. ಅದರಲ್ಲೂ ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆಯು ಸತತ ಏರಿಕೆ ಕಂಡಿದೆ. ಶೀಘ್ರದಲ್ಲೇ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1 ಲಕ್ಷ ರೂಪಾಯಿ ದಾಟುವ ಸಾಧ್ಯತೆಯು ದಟ್ಟವಾಗಿದೆ. ಇದರ ಜೊತೆಗೆ ಮತ್ತೊಂದು ಕಾರಣಕ್ಕೆ ಕೂಡ ಜಗತ್ತಿನಾದ್ಯಂತ ಈಗ ಚಿನ್ನದ ಬೆಲೆ ಆಕಾಶಕ್ಕೆ ತಲುಪುತ್ತಿದೆ. ಹೀಗಿದ್ದಾಗಲೇ ಆಭರಣ ಪ್ರಿಯರಿಗೆ ಈಗ ಮತ್ತೊಂದು ಆಘಾತ ಕೂಡ ಎದುರಾಗಿದೆ!

Gold And Silver Price Has Been Raised On 13th Of January 2025

ಚಿನ್ನ ಬೆಲೆ 40,000 ರೂಪಾಯಿ ಏರಿಕೆ!

ಚಿನ್ನ.. ಚಿನ್ನ.. ಚಿನ್ನ.. ಮಹಿಳೆಯರಿಗೆ ಚಿನ್ನದ ಮೇಲೆ ಬೆಟ್ಟದಷ್ಟು ಪ್ರೀತಿ ಇರುತ್ತದೆ. ಹೀಗೆ ಕೆಜಿ ಕೆಜಿ ಚಿನ್ನ ಇದ್ರು ಮತ್ತಷ್ಟು ಚಿನ್ನ ಬೇಕು ಎಂಬ ಆಸೆ ಪ್ರತಿಯೊಬ್ಬ ಮಹಿಳೆಯರಲ್ಲೂ ಇದ್ದೇ ಇರುತ್ತದೆ. ಇದರ ಜೊತೆಗೆ ಹೂಡಿಕೆ ಮಾಡುವವರಿಗೆ ಕೂಡ ಚಿನ್ನವೇ ಬೆಸ್ಟ್ ಆಯ್ಕೆ. ಹೀಗೆ ಚಿನ್ನ ಎಲ್ಲೆಲ್ಲೂ ಸದ್ದು ಮಾಡುತ್ತಿರುವ ಸಮಯದಲ್ಲೇ ದಿಢೀರ್ ಒಂದೇ ದಿನದಲ್ಲಿ ಚಿನ್ನ ಬೆಲೆ 40,000 ರೂಪಾಯಿ ಏರಿಕೆಯಾಗಿದೆ.

ಹೌದು, ಚಿನ್ನಕ್ಕೆ ಭಾರಿ ಬೆಲೆ ಬಂದಿದೆ. ಅದ್ರಲ್ಲೂ ಕೇವಲ 10 ವರ್ಷ ಹಿಂದೆ ಕೈಗೆ ಎಟುಕುವಂತೆ ಇದ್ದ ಚಿನ್ನ ಬೆಲೆ ಈಗ ಭರ್ಜರಿ ಮುಕ್ಕಾಲು ಲಕ್ಷಕ್ಕೆ ಅಂದ್ರೆ 75,000 ರೂಪಾಯಿ ದಾಟಿ ಹೋಗಿದೆ ಈ ಸಮಯದಲ್ಲೇ ಚಿನ್ನ ಬೆಲೆ ಸಂಕ್ರಾಂತಿ ಹಬ್ಬದ ಹಿಂದಿನ ದಿನ ಕೂಡ ಭಾರಿ ಏರಿಕೆ ಕಂಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ?

22 ಕ್ಯಾರೆಟ್ ಚಿನ್ನ ಬೆಲೆ ಎಷ್ಟು?

ದಿಢೀರ್ ಚಿನ್ನ ಬೆಲೆ ಏರಿಕೆ ಕಂಡು, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಏರಿಕೆ ಬಳಿಕ ಮತ್ತಷ್ಟು ಮೇಲೆ ಹೋಗಿದೆ. ಪ್ರತಿ 1 ಕೆ.ಜಿ. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು 40,000 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,34,000 ರೂಪಾಯಿ ಆಗಿದೆ. 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 400 ರೂಪಾಯಿ ಏರಿಕೆ ಕಂಡಿದ್ದು, 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 73,400 ರೂಪಾಯಿ ತಲುಪಿದೆ.

ಶುದ್ಧ ಚಿನ್ನದ ಬೆಲೆಯೂ ಏರಿಕೆ

24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯೂ ಏರಿದ್ದು, ಇದೀಗ ಪ್ರತಿ 100 ಗ್ರಾಂಗೆ 4,300 ರೂಪಾಯಿ ಏರಿಕೆ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ. ಈ ಮೂಲಕ ಶುದ್ಧ ಚಿನ್ನದ ಬೆಲೆಯು ಪ್ರತಿ 100 ಗ್ರಾಂಗೆ 8,00,700 ರುಪಾಯಿ ಆಗಿದೆ. ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 80,070 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆ ಪ್ರತಿ 1 ಕೆಜಿಗೆ ಇದೀಗ ಭರ್ಜರಿ 1000 ರೂಪಾಯಿ ಏರಿಕೆ ಕಂಡು 94,500 ರೂಪಾಯಿಗೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+