2020ರ ಕೊನೆಯ ದಿನ 22, 24 ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ?
ನವದೆಹಲಿ, ಡಿಸೆಂಬರ್ 31: ಭಾರತೀಯ ಮಾರುಕಟ್ಟೆಯಲ್ಲಿ 2020ರ ಕೊನೆಯ ದಿನ ಗುರುವಾರ ಹಳದಿ ಲೋಹದ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸವಾಗಿಲ್ಲ. ಕೆಲವು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಬದಲಾಗದೆ ಉಳಿದಿದ್ದರೆ, ಇನ್ನು ಕೆಲವು ನಗರಗಳಲ್ಲಿ ಕೊಂಚ ಏರಿಳಿತ ಕಂಡಿದೆ.
ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,850 ರೂಪಾಯಿ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 53,300 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 68,400 ರೂಪಾಯಿ ತಲುಪಿದೆ.
ಚಿನ್ನದ ಇಳಿಕೆ ಇಳಿಕೆ: ಬೆಳ್ಳಿ ಬೆಲೆಯು ಕುಸಿತ, ಸಾರ್ವಕಾಲಿಕ ಗರಿಷ್ಠ ಮಟ್ಟದ ಹತ್ತಿರ
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 31: 46,700-50,950 (ಬದಲಾವಣೆ ಇಲ್ಲ)
ಡಿಸೆಂಬರ್ 30: 46,700-50,950
ಡಿಸೆಂಬರ್ 29: 46,700-50,950
ಡಿಸೆಂಬರ್ 28: 47,100-51,300

ದೆಹಲಿಯಲ್ಲಿ ಚಿನ್ನದ ಬೆಲೆ
ಡಿಸೆಂಬರ್ 31: 48,850-53,300 (ಬದಲಾವಣೆ ಇಲ್ಲ)
ಡಿಸೆಂಬರ್ 30: 48,850-53,300
ಡಿಸೆಂಬರ್ 29: 48,810-53,240
ಡಿಸೆಂಬರ್ 28: 48,800-53,230

ಚೆನ್ನೈನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 31: 47,240-51,540 (120 ರೂಪಾಯಿ ಏರಿಕೆ)
ಡಿಸೆಂಬರ್ 30: 47,120-51,420
ಡಿಸೆಂಬರ್ 29: 47,160-51,460
ಡಿಸೆಂಬರ್ 28: 47,280-51,580

ಮುಂಬೈ ಚಿನ್ನದ ಬೆಲೆ
ಡಿಸೆಂಬರ್ 31: 48,930-49,930 (ಬದಲಾವಣೆ ಇಲ್ಲ)
ಡಿಸೆಂಬರ್ 30: 48,930-49,930
ಡಿಸೆಂಬರ್ 29: 49,220-50,220
ಡಿಸೆಂಬರ್ 28: 49,210-50,210

ಜೈಪುರ ಚಿನ್ನದ ಬೆಲೆ
ಡಿಸೆಂಬರ್ 31: 48,860-53,310 (10 ರೂಪಾಯಿ ಏರಿಕೆ)
ಡಿಸೆಂಬರ್ 30: 48,850-53,300
ಡಿಸೆಂಬರ್ 29: 48,810-53,240
ಡಿಸೆಂಬರ್ 28: 48,800-53,230

ಚಂಡೀಗಡ ಚಿನ್ನದ ಬೆಲೆ
ಡಿಸೆಂಬರ್ 31: 49,200-53,170 (10 ರೂಪಾಯಿ ಏರಿಕೆ)
ಡಿಸೆಂಬರ್ 30: 49,190-53,160
ಡಿಸೆಂಬರ್ 29: 49,180-53,150
ಡಿಸೆಂಬರ್ 28: 49,170-53,140

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.