• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಜಿಟಲ್ ಥೆರಪಿ ಸಲಹೆ ಸೂಚನೆ ಈಗ ಕನ್ನಡದಲ್ಲೇ ಲಭ್ಯ

|

ಬೆಂಗಳೂರು, ಅಕ್ಟೋಬರ್ 09: ಏಷ್ಯಾದಲ್ಲೇ ಮುಂಚೂಣಿಯಲ್ಲಿರುವ ಡಿಜಿಟಲ್ ಥೆರಪ್ಯೂಟಿಕ್ಸ್ ಕಂಪನಿ ವೆಲ್ತಿ ಥೆರಪ್ಯೂಟಿಕ್ಸ್ ಇತ್ತೀಚಿಗೆ ಕನ್ನಡದಲ್ಲಿ ಡಯಾಬಿಟಿಸ್ ಮತ್ತು ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ತನ್ನ ಥೆರಪ್ಯೂಟಿಕ್ಸ್ ಅನ್ನು ಆರಂಭಿಸಿದೆ. ಮುಂದಿನ ದಶಕದ ಹೊತ್ತಿಗೆ, 1 ಕೋಟಿ ರೋಗಿಗಳು, ತಮಗೆ ಕಾಡುತ್ತಿರುವ ಬಹುಕಾಲದ ರೋಗಗಳನ್ನು ಗುಣಪಡಿಸಿಕೊಳ್ಳಲು, ಇನ್ನೂ ಹದಗೆಡದಂತೆ ನೋಡಿಕೊಳ್ಳಲು ಮತ್ತು ಹತೋಟಿಯಲ್ಲಿಡಲು ಹುರಿದುಂಬಿಸಿ, ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುವುದೇ ವೆಲ್ತಿ ಥೆರಪ್ಯೂಟಿಕ್ಸ್‌ನ ಗುರಿಯಾಗಿದೆ.

ರೋಗಿಗಳು ಮತ್ತು ವೈದ್ಯರ ಮನವಿಯ ಮೇರೆಗೆ, ರೋಗಿಗಳಿಗೆ ನೀಡಲಾದ ಚಿಕಿತ್ಸೆ ಮತ್ತು ಸಂಶೋಧನೆಗಳಿಂದ ಕಂಡು ಬಂದ ಮಾಹಿತಿಗಳನ್ನು ಕ್ರೋಡೀಕರಿಸುವ ಮೂಲಕ, ಭಾರತದಲ್ಲಿರುವ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ಬಳಿಗೆ ಡಿಜಿಟಲ್ ಥೆರಪ್ಯೂಟಿಕ್ಸ್ ಅನ್ನು ಕೊಂಡೊಯ್ಯುವುದೇ ವೆಲ್ತಿ ಕೇರ್‌ನ ಮುಂದಿನ ಹೆಜ್ಜೆಯಾಗಿದೆ. ಇದರ ಅಂಗವಾಗಿ ಹಿಂದಿ ಮತ್ತು ಕನ್ನಡದಲ್ಲಿ ಈ ಸೇವೆಗಳನ್ನು ಆರಂಭಿಸಲಾಗುತ್ತಿದೆ.

ಉತ್ಕೃಷ್ಟ ಗುಣಮಟ್ಟದ ಸಾಫ್ಟ್ ವೇರ್ ಪ್ರೋಗ್ರಾಮ್‍ಗಳೇ ಜೀವಾಳವಾಗಿರುವ ಡಿಜಿಟಲ್ ಥೆರಪ್ಯೂಟಿಕ್ಸ್ (DTx), ರೋಗವನ್ನು ತಡೆಗಟ್ಟಲು, ನಿರ್ವಹಿಸಲು ಇಲ್ಲವೆ ಗುಣಪಡಿಸಲು, ಪುರಾವೆ ಆಧಾರಿತ ನೆರವನ್ನು ರೋಗಿಗಳಿಗೆ ನೀಡುತ್ತದೆ. ರೋಗಿಗಳ ಆರೈಕೆ ಮತ್ತು ಆರೋಗ್ಯ ಫಲಿತಾಂಶಗಳನ್ನು ಉತ್ತಮಗೊಳಿಸುವುದಕ್ಕಾಗಿ, ಇವುಗಳನ್ನು ಸ್ವತಂತ್ರವಾಗಿ ಅಥವಾ ಔಷಧಿಗಳು, ಸಾಧನಗಳು ಅಥವಾ ಇತರ ಚಿಕಿತ್ಸೆಗಳೊಂದಿಗೆ ಬಳಸಬಹುದು.

ಸಹ-ಸಂಸ್ಥಾಪಕರಾದ ಅಭಿಷೇಕ್ ಶಾ

ಸಹ-ಸಂಸ್ಥಾಪಕರಾದ ಅಭಿಷೇಕ್ ಶಾ

ಈ ಸಂದರ್ಭದಲ್ಲಿ ಮಾತನಾಡಿದ, ವೆಲ್ತಿ ಥೆರಪ್ಯೂಟಿಕ್ಸ್‌ನ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಅಭಿಷೇಕ್ ಶಾ ಅವರು "ಡಿಜಿಟಲ್ ಥೆರಪ್ಯೂಟಿಕ್ಸ್ ಬಳಸಿಕೊಂಡು ಜನರಿಗೆ ಉತ್ತಮ ಆರೋಗ್ಯ ಫಲಿತಾಂಶಗಳನ್ನು ಒದಗಿಸುವ ಕ್ರಮವು, ರೋಗಿಯೇ ಪ್ರಥಮ ಎಂಬ ಧ್ಯೇಯದೊಂದಿಗೆ ಚಿಕಿತ್ಸಾ ವಿನ್ಯಾಸ ರಚಿಸುವ ವಿಶಿಷ್ಟ ಸವಲತ್ತನ್ನು ನಮಗೆ ನೀಡುತ್ತದೆ. ಡಯಾಬಿಟಿಸ್ ಮತ್ತು ಹೃದ್ರೋಗ ಶಾಸ್ತ್ರದಲ್ಲಿನ ನಮ್ಮ ಥೆರಪ್ಯೂಟಿಕ್ ಸಾಮರ್ಥ್ಯದಲ್ಲಿ ಅದ್ಭುತವಾದ ಬೆಳವಣಿಗೆಯನ್ನು ನಾವು ಕಂಡಿದ್ದೇವೆ ಹಾಗೂ ಮುಂದೆಯೂ ಕಾಣುತ್ತಿರುತ್ತೇವೆ, ಇದೇ ಉತ್ಸಾಹದಲ್ಲಿ ನಾವು ಸ್ಥಳೀಯ ಭಾಷೆಯನ್ನು ಬಳಸಿಕೊಂಡು ಅದ್ಭುತ ಪ್ರಯಾಣವೊಂದನ್ನು ಆರಂಭಿಸುತ್ತಿದ್ದೇವೆ. ನಮ್ಮ ಮೇಡ್ ಇನ್ ಇಂಡಿಯಾ ಪ್ರಯತ್ನವನ್ನು ಮೇಡ್ ಫಾರ್ ಭಾರತಕ್ಕೆ ವಿಸ್ತರಿಸುತ್ತಾ, ಬಳಕೆದಾರರ ಅಗತ್ಯಗಳನ್ನು ಅವರ ಸಾಂಸ್ಕೃತಿಕ ನೆಲೆಯಲ್ಲಿ, ಅವರ ಆಯ್ಕೆಯ ಭಾಷೆಯಲ್ಲಿ ಪೂರೈಸುವ ಮೂಲಕ, ಅವರನ್ನು ಕಾಡುತ್ತಿರುವ ಗಂಭೀರ ರೋಗಗಳನ್ನು ಉತ್ತಮವಾಗಿ ನಿರ್ವಹಿಸಲು ಹಾಗೂ ಅವರನ್ನು ಸಬಲೀಕರಣಗೊಳಿಸುವತ್ತ ನಾವು ಹೆಜ್ಜೆಯನ್ನು ಇಡುತ್ತಿದ್ದೇವೆ."

 ಡಾ. ರಾಜೀವ್ ಚಾವ್ಲಾ ಸಲಹೆ

ಡಾ. ರಾಜೀವ್ ಚಾವ್ಲಾ ಸಲಹೆ

"ಜೀವನಶೈಲಿಯಲ್ಲಿನ ಬದಲಾವಣೆ ಮತ್ತು ಮೇಲ್ವಿಚಾರಣೆಯ ಕ್ರಮಗಳನ್ನು ಆಧರಿಸಿದ ಪರಿಹಾರಗಳೇ ಗಂಭೀರ ರೋಗದ ನಿರ್ವಹಣೆಯ ಜೀವಾಳವಾಗಬೇಕು. ಬಳಕೆದಾರರೊಂದಿಗೆ ಅವರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಮಾತನಾಡಲು ವೆಲ್ತಿಯವರು ತೆಗೆದುಕೊಂಡಿರುವ ಈ ಕ್ರಮವು ಹೆಚ್ಚಿನ ಪ್ರಭಾವವನ್ನು ಬೀರಲಿದೆ ಹಾಗೂ ರೋಗಿಗಳನ್ನು ಸಬಲೀಕರಣಗೊಳಿಸಿ, ಅವರಿಗೆ ಹೆಚ್ಚುತ್ತಿರುವ ರೋಗದ ಹೊರೆಯನ್ನು ಇಳಿಸುವ ಮೂಲಕ ಉತ್ತಮ ಲಾಭವನ್ನು ಬಳಕೆದಾರರಿಗೆ ತಂದುಕೊಡಲಿದೆ," ಎಂದು ರಿಸರ್ಚ್ ಸೊಸೈಟಿ ಫಾರ್ ದಿ ಸ್ಟಡಿ ಆಫ್ ಡಯಾಬೆಟಿಸ್‌ನ ಅಧ್ಯಕ್ಷರಾದ, ಡಾ. ರಾಜೀವ್ ಚಾವ್ಲಾ, ತಿಳಿಸಿದರು

ಡಿಜಿಟಲ್ ಥೆರಪ್ಯೂಟಿಕ್ ಪರಿಹಾರ

ಡಿಜಿಟಲ್ ಥೆರಪ್ಯೂಟಿಕ್ ಪರಿಹಾರ

ಗಂಭೀರ ರೋಗಗಳಿಗೆ ಡಿಜಿಟಲ್ ಥೆರಪ್ಯೂಟಿಕ್ ಪರಿಹಾರಗಳನ್ನು ಒದಗಿಸಲು, ವೆಲ್ತಿ ಥೆರಪ್ಯೂಟಿಕ್ಸ್ ಪರಿಣತಿ ಹೊಂದಿದೆ. ಟೈಪ್ II ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಡಿಸ್ಲಿಪಿಡೆಮಿಯಾ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ, ಅಗತ್ಯ ಕೌಶಲ್ಯಗಳನ್ನು ಕಲಿಸಲು, ಅವರ ನಡವಳಿಕೆಗಳನ್ನು ಸುಧಾರಿಸಲು ಮತ್ತು ವೈದ್ಯರಿಗೆ ಸರಿಯಾದ ವೈದ್ಯಕೀಯ ತೀರ್ಮಾನ ತೆಗೆದುಕೊಳ್ಳುವುದಕ್ಕಾಗಿ ಬೆಂಬಲವನ್ನು ಒದಗಿಸಲು ಹಾಗೂ ಆ ಮೂಲಕ ಉತ್ತಮ ಆರೋಗ್ಯ ಫಲಿತಾಂಶವನ್ನು ಹೊರ ತರುವ ನಿಟ್ಟಿನಲ್ಲಿ ಡಿಜಿಟಲ್ ಥೆರಪ್ಯೂಟಿಕ್ ಪರಿಹಾರವು ಕಾರ್ಯನಿರ್ವಹಿಸುತ್ತದೆ.

ಸ್ಥಳೀಯ ಭಾಷೆಯಲ್ಲೇ ಸಲಹೆ ಸೂಚನೆಗೆ ಆದ್ಯತೆ

ಸ್ಥಳೀಯ ಭಾಷೆಯಲ್ಲೇ ಸಲಹೆ ಸೂಚನೆಗೆ ಆದ್ಯತೆ

ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗಾಗಿ ಡೌನ್‌ಲೋಡ್ ಮಾಡಲು ಸಾಧ್ಯವಾಗುವಂತಹ ಅಪ್ಲಿಕೇಶನ್‌ನ ರೂಪದಲ್ಲಿ ಈ ಪರಿಹಾರಗಳು ರೋಗಿಗಳಿಗೆ ಲಭ್ಯವಿದೆ. ಬಳಕೆದಾರರು ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಈ ಅಪ್ಲಿಕೇಶನ್‌ನ ಮೂಲಕ ಲಭ್ಯವಿರುವ ಎಲ್ಲಾ ಥೆರಪ್ಯೂಟಿಕ್ ವಿಷಯಗಳು, ತರಬೇತಿ ಮತ್ತು ಆರೈಕೆಯ ಸೇವೆಗಳನ್ನು ಪಡೆಯಬಹುದಾಗಿದೆ.

ವೆಲ್ತಿ ಥೆರಪ್ಯೂಟಿಕ್ಸ್, ಭವಿಷ್ಯದಲ್ಲಿ ಬಂಗಾಳಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಸಾಂಸ್ಕೃತಿಕ ಮತ್ತು ಭಾಷಾ ರೂಪಾಂತರಗಳಲ್ಲಿ ತನ್ನ ಡಿಜಿಟಲ್ ಥೆರಪ್ಯೂಟಿಕ್ಸ್ ಪರಿಹಾರಗಳನ್ನು ವಾಣಿಜ್ಯಿಕವಾಗಿ ಬಿಡುಗಡೆ ಮಾಡಲಿದೆ. ಆರೋಗ್ಯದ ಫಲಿತಾಂಶಗಳನ್ನು ಸುಧಾರಿಸುವ ಉದ್ದೇಶದಿಂದ ಇದನ್ನು ಪ್ರಮುಖವಾಗಿರುವ ಅಸಿಯಾನ್(ASEAN ) ಮತ್ತು ಮೇನಾ (MENA ) ಮಾರುಕಟ್ಟೆಗಳಿಗೆ ಸಹ ಹೊಂದುವಂತೆ ರೂಪಾಂತರಗಳನ್ನು ಮಾಡುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Asia’s leading Digital Therapeutics company Wellthy Therapeutics today announced the launch of its digital therapeutics in Diabetes and Cardiovascular conditions in Hindi and Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more