ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಗೌತಮ್ ಅದಾನಿ ಔಟ್‌: ಮುಂದುವರಿದ ಷೇರು ಕುಸಿತ- ಇಲ್ಲಿದೆ ಮಾಹಿತಿ

ಗೌತಮ್ ಅದಾನಿ ಅವರು ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಷೇರುಗಳ ಬೆಲೆಗಳು ಕುಸಿಯುತ್ತಾ ಹೋದರೆ ಶೀಘ್ರದಲ್ಲೇ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲೂ ಹಿಂಬಡ್ತಿ ಹೊಂದಲಿದ್ದಾರೆ. ಏನೆಲ್ಲಾ ಆಗಿದೆ, ಮುಂದೆ ಏನಾಗಬಹುದು ಎಂಬುದರ ವರದಿ ಇಲ್ಲಿದೆ.

|
Google Oneindia Kannada News

ನವದೆಹಲಿ, ಜನವರಿ 31: ಗೌತಮ್ ಅದಾನಿ ಅವರು ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಅವರ ಸಂಘಟಿತ ಸಂಸ್ಥೆಯಲ್ಲಿನ ಷೇರುಗಳ ಬೆಲೆಗಳು ಕುಸಿಯುತ್ತಾ ಹೋದರೆ ಶೀಘ್ರದಲ್ಲೇ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲೂ ಹಿಂಬಡ್ತಿ ಹೊಂದಲಿದ್ದಾರೆ. ಭಾರತೀಯ ಉದ್ಯಮಿ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ನಾಲ್ಕನೇ ಸ್ಥಾನದಿಂದ 11 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕೇವಲ ಮೂರು ವ್ಯಾಪಾರದ ದಿನಗಳಲ್ಲಿ ಅವರ ವೈಯಕ್ತಿಕ ಸಂಪತ್ತು $34 ಶತಕೋಟಿ ನಷ್ಟವಾಗಿದೆ. ಪ್ರಸ್ತುತ $84.4 ಶತಕೋಟಿ ಸಂಪತ್ತನ್ನು ಗೌತಮ್‌ ಅದಾನಿ ಹೊಂದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯ $ 82.2 ಬಿಲಿಯನ್ ಆಗಿದೆ. ಅಂಬಾನಿ ಅವರು ಅದಾನಿ ಅವರ ಪ್ರತಿಸ್ಪರ್ಧಿಯಾಗಿದ್ದಾರೆ.

 $68 ಶತಕೋಟಿಗಿಂತ ಹೆಚ್ಚು ನಷ್ಟ

$68 ಶತಕೋಟಿಗಿಂತ ಹೆಚ್ಚು ನಷ್ಟ

ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಮೂರು ದಿನಗಳ ಮಾರಾಟದಲ್ಲಿ ಕುಸಿದಿವೆ. ಅವರು $68 ಶತಕೋಟಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದ್ದಾರೆ. ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯ ಪ್ರಕಟಣೆಯ ನಂತರ ಈ ಬೆಳವಣಿಗೆ ಸಂಭವಿಸಿದೆ. 'ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ'ಯ ಕುರಿತು ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯು ಆರೋಪಿಸಿದೆ. ಅದಾನಿ ಈಗ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಮೆಕ್ಸಿಕೋದ ಕಾರ್ಲೋಸ್ ಸ್ಲಿಮ್, ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಮತ್ತು ಮಾಜಿ ಮೈಕ್ರೋಸಾಫ್ಟ್ ಸಿಇಒ ಸ್ಟೀವ್ ಬಾಲ್ಮರ್ ಅವರಿಗಿಂತ ಕೆಳಗೆ ಕುಸಿದಿದ್ದಾರೆ.

 ಹಿಂಡೆನ್‌ಬರ್ಗ್ ವರದಿಯಿಂದ ಅನಾಹುತ

ಹಿಂಡೆನ್‌ಬರ್ಗ್ ವರದಿಯಿಂದ ಅನಾಹುತ

ಅಲ್ಪ-ಮಾರಾಟಗಾರ ಕಂಪನಿ ಹಿಂಡೆನ್‌ಬರ್ಗ್ ರಿಸರ್ಚ್‌ನಿಂದ ಬಿಡುಗಡೆಯಾದ ವರದಿ ಇಷ್ಟೆಲ್ಲಾ ಅನುಹುತಕ್ಕೆ ಕಾರಣವಾಗಿದೆ. ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿರುವ ಅದಾನಿ ಅವರು ತಮ್ಮ ಪ್ರಮುಖ ಸಂಸ್ಥೆಗಳಿಂದ $ 2.5 ಶತಕೋಟಿ ಈಕ್ವಿಟಿ ಮಾರಾಟವನ್ನು ಪೂರ್ಣಗೊಳಿಸಲು ಯತ್ನಿಸುತ್ತಿದ್ದಾರೆ. ಅದಾನಿ ಗ್ರೂಪ್ ಷೇರುಗಳಲ್ಲಿನ ಮಾರಾಟದಲ್ಲಿ ಮಂಗಳವಾರವೂ ಕುಸಿತ ಮುಂದುವರೆದಿದ್ದರಿಂದ ಈಕ್ವಿಟಿ ಮಾರಾಟವನ್ನು ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗಿಲ್ಲ.

 ಅದಾನಿ ಟೋಟಲ್ ಗ್ಯಾಸ್‌ನಲ್ಲಿ ಭಾರೀ ನಷ್ಟ

ಅದಾನಿ ಟೋಟಲ್ ಗ್ಯಾಸ್‌ನಲ್ಲಿ ಭಾರೀ ನಷ್ಟ

ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ದೈನಂದಿನ ಮಿತಿಯಲ್ಲಿ ಶೇ 10 ರಷ್ಟು ಕುಸಿದಿದೆ. ಇದು ಅದಾನಿ ಗ್ರೂಪ್‌ನ ಹೆಚ್ಚಿನ ಷೇರುಗಳಲ್ಲಿ ನಷ್ಟವನ್ನು ಉಂಟುಮಾಡಿದೆ. ಫ್ಲ್ಯಾಗ್‌ಶಿಪ್ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಮುಂಬೈನಲ್ಲಿ ಆರಂಭಿಕ ವಹಿವಾಟಿನಲ್ಲಿ ಸುಮಾರು ಶೇ 2 ರಷ್ಟು ಏರಿಕೆಯಾಗಿದೆ. ಆದರೆ ಅದರ ಫಾಲೋ-ಆನ್ ಷೇರು ಮಾರಾಟಕ್ಕೆ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ಇತ್ತು. ಹತ್ತಾರು ಸಂಘಟಿತ ಕಂಪನಿಗಳು ಸುಮಾರು $75 ಶತಕೋಟಿಯಷ್ಟು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿವೆ. ಈಕ್ವಿಟಿ ಕೊಡುಗೆಯ ಒಟ್ಟಾರೆ ಚಂದಾದಾರಿಕೆಯು ಸೋಮವಾರದ ಅಂತ್ಯದ ವೇಳೆಗೆ ಕೇವಲ ಶೇ 3 ರಷ್ಟಿತ್ತು. ಅಬುಧಾಬಿಯ ರಾಜಮನೆತನದ ಪ್ರಮುಖ ಸದಸ್ಯರಿಂದ ನಿಯಂತ್ರಿಸಲ್ಪಡುವ ಇಂಟರ್‌ನ್ಯಾಶನಲ್ ಹೋಲ್ಡಿಂಗ್ ಕಂ IHC ಯಿಂದ $400 ಮಿಲಿಯನ್ ಹೂಡಿಕೆಯ ನಂತರವೂ ಪ್ರಸ್ತುತ ನಿಯಮಗಳ ಅಡಿಯಲ್ಲಿ ಸಾಕಷ್ಟು ಬೇಡಿಕೆಯಿದೆಯೇ ಎಂಬ ಬಗ್ಗೆ ಷೇರು ಮಾರಾಟದ ನಂತರ ಕೆಲವು ವಿಶ್ಲೇಷಕರು ಸಂಶಯ ವ್ಯಕ್ತಪಡಿಸಿದ್ದಾರೆ.

 ಹಿಂಡೆನ್‌ಬರ್ಗ್‌ ಆರೋಪ ತಳ್ಳಿಹಾಕಿದ ಅದಾನಿ

ಹಿಂಡೆನ್‌ಬರ್ಗ್‌ ಆರೋಪ ತಳ್ಳಿಹಾಕಿದ ಅದಾನಿ

ಗೌತಮ್ ಅದಾನಿಯವರ ಹಲವಾರು ಕಂಪನಿಗಳು ಕಾನೂನಿನ ವಿರುದ್ಧವಾಗಿ ನಡೆದುಕೊಂಡಿವೆ ಎಂದು ಹಿಂಡೆನ್‌ಬರ್ಗ್‌ ಆರೋಪಿಸಿದೆ. ತನ್ನ ಅಭಿಪ್ರಾಯವನ್ನು ಸಾಬೀತುಪಡಿಸಲು ಕೆಲವು ಉದಾಹರಣೆಗಳನ್ನು ಹಿಂಡೆನ್‌ಬರ್ಗ್‌ ನೀಡಿದೆ. ವಜ್ರ ವ್ಯಾಪಾರ ಹಗರಣದಲ್ಲಿ ಗೌತಮ್ ಅದಾನಿ ಅವರ ಸೋದರ ಮಾವ ಸಮೀರ್ ವೋರಾ ಅವರನ್ನು ಒಳಗೊಂಡಿರುವ ಕಂದಾಯ ಗುಪ್ತಚರ ಇಲಾಖೆ (ಡಿಆರ್‌ಐ) ತನಿಖೆಯು ಅವುಗಳಲ್ಲಿ ಪ್ರಮುಖವಾಗಿದೆ. ಹಿಂಡೆನ್‌ಬರ್ಗ್‌ ಆರೋಪಗಳನ್ನು ತಳ್ಳಿಹಾಕಿರುವ ಅದಾನಿ ಗ್ರೂಪ್‌, ಇದು ಭಾರತದ ಮೇಲಿನ ವ್ಯವಸ್ಥಿತ ದಾಳಿ ಎಂದು ಹೇಳಿದೆ. ತಮ್ಮ ಕಂಪನಿಗಳು ಯಾವುದೇ ಸ್ಟಾಕ್‌ ಮ್ಯಾನುಪುಲೇಶನ್‌ ಹಾಗೂ ಮನಿ ಲಾಂಡರಿಂಗ್‌ ಮಾಡಿಲ್ಲವೆಂದು ಅದಾನಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಹಿಂಡೆನ್‌ಬರ್ಗ್‌, ರಾಷ್ಟ್ರೀಯತೆಯನ್ನು ಬಳಸಿಕೊಂಡು ವಂಚನೆಗಳನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ನಮ್ಮ ಆರೋಪಗಳು ನಿಜವಾಗಿವೆ. ನಾನು ಕಾನೂನನ್ನು ಎದುರಿಸಲು ಸಿದ್ದರಿದ್ದೇವೆ ಎಂದು ತಿಳಿಸಿದೆ.

English summary
Gautam Adani is out of the list of top 10 richest people in the world. If share prices continue to fall, they will soon be relegated to Asia's rich list
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X