20ನೇ ದಿನವೂ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ
ನವದೆಹಲಿ, ಜೂನ್ 26: ಸರ್ಕಾರಿ ಸ್ವಾಮ್ಯದ ಪ್ರಮುಖ ಮೂರು ತೈಲ ಕಂಪನಿಗಳು ಜೂನ್ 7ರಿಂದ ಪ್ರತಿದಿನದಂದು ತೈಲ ಬೆಲೆಯನ್ನುಪರಿಷ್ಕರಿಸುತ್ತಾ ಬಂದಿವೆ. ಅದರಂತೆ ಸತತವಾಗಿ 20ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಶುಕ್ರವಾರದಂದು ಡೀಸೆಲ್ ದರಲ್ಲಿ 17 ಪೈಸೆ ಪ್ರತಿ ಲೀಟರ್ ನಂತೆ ಹೆಚ್ಚಳ, ಹಾಗೂ ಪೆಟ್ರೋಲ್ ದರದಲ್ಲಿ 21 ಪೈಸೆ ಏರಿಕೆಯಾಗಿದೆ.
ಶುಕ್ರವಾರ (ಜೂನ್ 26) ದಂದು ದೆಹಲಿಯಲ್ಲಿ ಡೀಸೆಲ್ ದರ ಪ್ರತಿ ಲೀಟರ್ ಗೆ 80.19 ರು ಇದ್ದರೆ, ಪೆಟ್ರೋಲ್ ದರ ಪ್ರತಿ ಲೀಟರ್ ಗೆ 80.13ರು ನಷ್ಟಿದೆ. ಒಟ್ಟಾರೆ 20ದಿನಗಳಲ್ಲಿ ಒಂದು ದಿನ ಮಾತ್ರ ಪೆಟ್ರೋಲ್ ದರ ವ್ಯತ್ಯಾಸ ಕಂಡು ಬಂದಿರಲಿಲ್ಲ, ಡೀಸೆಲ್ ಬೆಲೆ ಪ್ರತಿದಿನವೂ ತುಸು ಏರಿಕೆ ಕಂಡಿದೆ. ಒಟ್ಟಾರೆ ಪೆಟ್ರೋಲ್ ಬೆಲೆ 10.80 ರು ಹಾಗೂ ಡೀಸೆಲ್ ದರದಲ್ಲಿ 9.31 ರು ನಷ್ಟು ಏರಿಕೆ ಕಾಣಲಾಗಿದೆ.
ಜೂನ್ 7ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪರಿಷ್ಕರಿಸುತ್ತಾ ಬಂದಿವೆ.
ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೊಮ್ಮೆ ಏರಿಕೆಯಾಗಿದೆ ಏಕೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರ, ಅಮೆರಿಕ-ಚೀನಾ ನಡುವಿನ ವಹಿವಾಟು ಆರಂಭದ ಮಾತುಕತೆ, ಕೊರೊನಾವೈರಸ್ ಆರ್ಥಿಕ ಹೊಡೆತ, ಭಾರತದಲ್ಲಿ ತೈಲದ ಮೇಲೆ ಹೆಚ್ಚಿದ ಅಬಕಾರಿ ಸುಂಕ ಎಲ್ಲವೂ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ.

ದೆಹಲಿಯಲ್ಲಿ ಡೀಸೆಲ್ ಬೆಲೆ ಹೆಚ್ಚಳಕ್ಕೆ ಕಾರಣ?
ಮೊದಲೆ ಹೇಳಿದಂತೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳಕ್ಕೆ ಆಯಾ ಆಯಾ ರಾಜ್ಯಗಳ ಹೆಚ್ಚುವರಿ ವ್ಯಾಟ್ ಕೂಡಾ ಕಾರಣವಾಗುತ್ತದೆ. ಇದರಿಂದಲೇ ರಾಜ್ಯದಿಂದ ರಾಜ್ಯಕ್ಕೆ ಹೋಲಿಸಿದರೆ ತೈಲ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ. ಇದೇ ರೀತಿ ದೆಹಲಿಯಲ್ಲಿ ಬುಧವಾರದಂದು ಪೆಟ್ರೋಲ್ ಗಿಂತಲೂ ಡೀಸೆಲ್ ಬೆಲೆ ಹೆಚ್ಚಳ ಕಾಣಿಸಿದ್ದಕ್ಕೂ ವ್ಯಾಟ್ ಕಾರಣ ಎಂದು ಇಂಡಿಯನ್ ಆಯಿಲ್ ಕಾರ್ಪ್ ಮುಖ್ಯಸ್ಥ ಸಂಜೀವ್ ಸಿಂಗ್ ಹೇಳಿದ್ದಾರೆ. ದೆಹಲಿ ಸರ್ಕಾರವು ಪೆಟ್ರೋಲ್ ಮೇಲಿನ ವ್ಯಾಟ್ ಶೇ 27 ರಿಂದ 30ರಷ್ಟು ಹಾಗೂ ಡೀಸೆಲ್ ಮೇಲಿನ ವ್ಯಾಟ್ ಶೇ 16.75 ರಿಂದ ಶೇ 30ಕ್ಕೇರಿಸಿದೆ.

ಬೆಂಗಳೂರಿನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 26: 82.74 (22 ಪೈಸೆ ಏರಿಕೆ)
ಜೂನ್ 25: 82.52 (17 ಪೈಸೆ)
ಜೂನ್ 24: 82.35 (--)
ಜೂನ್ 23: 82.35 (20 ಪೈಸೆ)
ಜೂನ್ 22: 82.15 (34 ಪೈಸೆ)
ಡೀಸೆಲ್ (ಪ್ರತಿ ಲೀಟರ್)
ಜೂನ್ 26: 76.25 (16 ಪೈಸೆ ಏರಿಕೆ)
ಜೂನ್ 25: 76.09 (13 ಪೈಸೆ)
ಜೂನ್ 24: 75.51 (--)
ಜೂನ್ 23: 75.51 (53 ಪೈಸೆ)
ಜೂನ್ 22: 74.98 (55 ಪೈಸೆ)
ಜೂನ್ 21: 74.43 (57 ಪೈಸೆ)
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಮೀರಿಸಿದ ಡೀಸೆಲ್ ದರ

ನವದೆಹಲಿಯಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 26: 80.13 (21ಪೈಸೆ ಏರಿಕೆ)
ಜೂನ್ 25: 79.92 (16 ಪೈಸೆ)
ಜೂನ್ 24: 79.76 (---)
ಜೂನ್ 23: 79.76 (20 ಪೈಸೆ)
ಜೂನ್ 22: 79.56 (33 ಪೈಸೆ)
ಡೀಸೆಲ್ (ಪ್ರತಿ ಲೀಟರ್)
ಜೂನ್ 26: 80.19 (17 ಪೈಸೆ ಏರಿಕೆ)
ಜೂನ್ 25: 80.02 (14ಪೈಸೆ)
ಜೂನ್ 24: 79.88 (48 ಪೈಸೆ)
ಜೂನ್ 23: 79.40 (55 ಪೈಸೆ)
ಜೂನ್ 22: 78.85 (58 ಪೈಸೆ)

ಮುಂಬೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 26: 86.91 (21ಪೈಸೆ ಏರಿಕೆ)
ಜೂನ್ 25: 86.70 (16 ಪೈಸೆ)
ಜೂನ್ 24: 86.54 (--)
ಜೂನ್ 23: 86.54 (18 ಪೈಸೆ ಏರಿಕೆ)
ಜೂನ್ 22: 86.36 (32 ಪೈಸೆ)
ಡೀಸೆಲ್ (ಪ್ರತಿ ಲೀಟರ್)
ಜೂನ್ 26: 78.51 (17 ಪೈಸೆ ಏರಿಕೆ)
ಜೂನ್ 25: 78.34 (12 ಪೈಸೆ)
ಜೂನ್ 24: 77.76 (46 ಪೈಸೆ)
ಜೂನ್ 23: 77.76 (52 ಪೈಸೆ)
ಜೂನ್ 22: 77.24 (55 ಪೈಸೆ)

ಚೆನ್ನೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 26: 83.37 (0.19 ಪೈಸೆ ಏರಿಕೆ)
ಜೂನ್ 25: 83.18 (0.07 ಪೈಸೆ ಏರಿಕೆ)
ಜೂನ್ 24: 83.11 (0.07 ಪೈಸೆ)
ಜೂನ್ 23: 83.04 (17 ಪೈಸೆ)
ಜೂನ್ 22: 82.87 (29 ಪೈಸೆ)
ಡೀಸೆಲ್ (ಪ್ರತಿ ಲೀಟರ್)
ಜೂನ್ 26: 77.44 (0.15 ಪೈಸೆ ಏರಿಕೆ)
ಜೂನ್ 25: 77.29 (0.05 ಪೈಸೆ)
ಜೂನ್ 24: 77.24 (47 ಪೈಸೆ)
ಜೂನ್ 23: 76.77 (47 ಪೈಸೆ)
ಜೂನ್ 22: 76.30 (50 ಪೈಸೆ)