ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ದರ ಪಟ್ಟಿ

ನವದೆಹಲಿ, ಅಕ್ಟೋಬರ್ 07: ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಇಳಿಕೆ ಮಾಡಿದರೂ ಇಂಧನ ದರದ ಮೇಲೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಭಾನುವಾರವೂ ಕೂಡಾ ಬೆಲೆ ಏರಿಕೆ ಮುಂದುವರಿದಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ದೇಶದೆಲ್ಲೆಡೆ ಮುಂದುವರಿದಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 14ಪೈಸೆ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 29 ಪೈಸೆ ಏರಿಕೆಯಾಗಿದೆ.

ಶನಿವಾರದಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 30 ಪೈಸೆ ಹಾಗೂ ಡೀಸೆಲ್ ಬೆಲೆ 20 ಪೈಸೆ ಏರಿಕೆಯಾಗಿತ್ತು. ಭಾನುವಾರ ಬೆಳಗ್ಗೆ ಏರಿಕೆಯಾದ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ದರ 81.82 ರು ಪ್ರತಿ ಲೀಟರ್ ಹಾಗೂ ಡೀಸೆಲ್ ದರ 73.53 ರು ಪ್ರತಿ ಲೀಟರ್ ಆಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ 14 ಪೈಸೆ, ಡೀಸೆಲ್ 29 ಪೈಸೆ ಏರಿಕೆಯಾಗಿದೆ. ಭಾನುವಾರದ ದರ ಪ್ರತಿ ಲೀ.ಪೆಟ್ರೋಲ್​ ಗೆ 82.46 ರು ಹಾಗೂ ಡೀಸೆಲ್ 73.90 ರೂ.ಆಗಿದೆ.

Fuel Prices continue to surge, Check prices on October 07

ಸರಾಸರಿ ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ 19.48 ರು ನಷ್ಟು ಅಬಕಾರಿ ಸುಂಕವಿದ್ದರೆ, ಡೀಸೆಲ್ ಮೇಲೆ 15.33ರಷ್ಟು ಸುಂಕವಿದೆ. ಈ ಸುಂಕ ತಗ್ಗಿಸುವಂತೆ ಕೇಂದ್ರ ಸರ್ಕಾರದ ಮೇಲೆ ಭಾರಿ ಒತ್ತಡ ಹಾಕಲಾಗಿತ್ತು. ಕೊನೆಗೂ ಒತ್ತಡಕ್ಕೆ ಮಣಿದು, ಬೆಲೆ ಇಳಿಸಿತ್ತು. ಅಬಕಾರಿ ಸುಂಕ ಇಳಿಕೆ ಮಾಡಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 2.50 ರು ತಗ್ಗಿತ್ತು.

ಸರಾಸರಿ ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ 19.48 ರು ನಷ್ಟು ಅಬಕಾರಿ ಸುಂಕವಿದ್ದರೆ, ಡೀಸೆಲ್ ಮೇಲೆ 15.33ರಷ್ಟು ಸುಂಕವಿದೆ. ಈ ಸುಂಕ ತಗ್ಗಿಸುವಂತೆ ಕೇಂದ್ರ ಸರ್ಕಾರದ ಮೇಲೆ ಭಾರಿ ಒತ್ತಡ ಹಾಕಲಾಗಿತ್ತು. ಕೊನೆಗೂ ಒತ್ತಡಕ್ಕೆ ಮಣಿದು, ಬೆಲೆ ಇಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+