ಗ್ರಾಹಕರೇ ಸಿದ್ಧರಾಗಿ! ಮತ್ತಷ್ಟು ಏರಲಿದೆ ದಿನಸಿ ಪದಾರ್ಥಗಳ ಬೆಲೆ!!

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 14: ಆಗಾಗ ಏರುತ್ತಲೇ ಇರುವ ತೈಲ ಬೆಲೆಯಿಂದಾಗಿ ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಕಳೆದ ತಿಂಗಳು ಜನವರಿಯಲ್ಲಿ ಏರಿಕೆಯಾಗಿದೆ.

ಸಗಟು ಮಾರಾಟ ದರವು ಶೇ. 3.39ರಿಂದ ಶೇ. 5.25 ವರೆಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳ ಬೆಲೆಯಲ್ಲೂ ಏರಿಕೆಯಾಗಿದೆ ಎಂದು ಹೇಳಲಾಗಿದೆ.

Fuel prices cause price hike for food ingredients

ಮುಂಬರುವ ದಿನಗಳಲ್ಲಿ ಇದಿನ್ನೂ ಹೆಚ್ಚಾಗುವ ಅಂದಾಜಿದ್ದು, ಆಹಾರ ಪದಾರ್ಥಗಳ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಸಗಟು ಮಾರಾಟ ದರ ಪಟ್ಟಿ (ವ್ಹೋಲ್ ಸೇಲ್ ಪ್ರೈಸ್ ಇಂಡೆಕ್ಸ್ - ಡಬ್ಲ್ಯೂಪಿಐ) ಪ್ರಕಾರ, 2015ರ ಡಿಸೆಂಬರ್ ನಲ್ಲಿ ಸಗಟು ಮಾರಾಟ ವಲಯದ ಹಣದುಬ್ಬರ ಪ್ರಮಾಣ ಶೇ. 1.07ರಷ್ಟಿತ್ತು.

ಆದರೆ, ಕಳೆದ ವರ್ಷದ ಡಿಸೆಂಬರ್ ನಲ್ಲಿ ಈ ಪ್ರಮಾಣ 3.39ಕ್ಕೇರಿತ್ತು. ಆದರೆ, ಇದೇ ವರ್ಷದ ಜನವರಿಯಲ್ಲಿ ಇದು ಕೊಂಚ ಇಳಿಕೆಯಾಗಿ ಶೇ. 3.15ಕ್ಕೆ ಇಳಿದಿದೆಯಾದರೂ, ಆಹಾರ ಪದಾರ್ಥಗಳ ಬೆಲೆ ಮಾತ್ರ ಇಳಿಕೆಯಾಗಿಲ್ಲ. ಪೆಟ್ರೋಲ್, ಡೀಸೆಲ್ ಗಳ ದರದಲ್ಲಿ ಕ್ರಮೇಣ ಏರಿಕೆಯಾಗುತ್ತಲೇ ಇರುವುದರಿಂದ ದಿನಸಿ ಪದಾರ್ಥಗಳ ಬೆಲೆಯೂ ಹಂತ ಹಂತವಾಗಿ ಏರುಮುಖದಲ್ಲೇ ಸಾಗಿದೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Wholesale prices in the country continued to rise in January, under pressure from rapidly increasing diesel and petrol prices.
Please Wait while comments are loading...