ವೊಡಾಫೋನ್ ಇಂಟರ್ ನೆಟ್: 1 ಜಿಬಿ ರೀಚಾರ್ಜ್ ಗೆ 10 ಜಿಬಿ ಡೇಟಾ

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 27: ರಿಲಯನ್ಸ್ ಜಿಯೋ ಉಚಿತ ಆಫರ್ ಸ್ಪರ್ಧೆ ಎದುರಿಸಲು ವೊಡಾಫೋನ್ ಹೊಸ ಯೋಜನೆ ಪರಿಚಯಿಸಿದೆ. ಒಂದು ಜಿ.ಬಿ. ಡೇಟಾ ಪ್ಲಾನ್ ನ ದರಕ್ಕೆ 10 ಜಿ.ಬಿ 4ಜಿ ಮೊಬೈಲ್ ಇಂಟರ್ ನೆಟ್ ಸೇವೆ ಒದಗಿಸಲಿದೆ. ಈ ಯೋಜನೆ ಅಡಿ ಹೊಸ ಸ್ಮಾರ್ಟ್ ಫೋನ್ ಇರುವ ವೊಡಾಫೋನ್ ಗ್ರಾಹಕರು 1 ಜಿ.ಬಿ ಪ್ಲಾನ್ ರೀಚಾರ್ಜ್ ಮಾಡಿಸಿದರೆ ಹೆಚ್ಚುವರಿಯಾಗಿ 9 ಜಿ.ಬಿ. ಡೇಟಾ ದೊರೆಯಲಿದೆ.

ವೊಡಾಫೋನ್ ಎಲ್ಲೆಲ್ಲಿ ಸ್ವಂತವಾಗಿ 3ಜಿ, 4ಜಿ ಸೇವೆಯನ್ನು ಒದಗಿಸುತ್ತದೋ ಅಲ್ಲಿ ಈ ಯೋಜನೆಯು ಅನ್ವಯವಾಗುತ್ತದೆ. ಪ್ರೀ ಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರು ಇದರ ಲಾಭ ಪಡೆಯಬಹುದು, ಡಿಸೆಂಬರ್ 31ರವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ. ಅಂದ ಹಾಗೆ, ರಿಲಯನ್ಸ್ ಜಿಯೋ ಅನಿಯಮಿತ ಉಚಿತ ಕರೆಗಳು ಹಾಗೂ ಅನಿಯಮಿತ 4ಜಿ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಡಿಸೆಂಬರ್ 31ರ ವರೆಗೆ ಒದಗಿಸುವುದಾಗಿ ಈಗಾಗಲೇ ಘೋಷಿಸಿದೆ.[ಜಿಯೋ ಎಫೆಕ್ಟ್ : ಉಚಿತ ಕರೆ ಆಫರ್ ನೀಡಿದ ಬಿಎಸ್ಎನ್ಎಲ್]

Free 4g data plan from Vodafone

ಗ್ರಾಹಕರು 4ಜಿ ಮೊಬೈಲ್ ಹ್ಯಾಂಡ್ ಸೆಟ್ ಗಳಿಗೆ ಬದಲಾಗಲು ಇದು ಸಕಾರಣ. ಈ ಮೂಲಕ ವೊಡಾಫೋನ್ ನ ಸೂಪರ್ ನೆಟ್ ಅನುಭವವನ್ನು ಸಂಪೂರ್ಣವಾಗಿ ಪಡೆಯಲು ಗ್ರಾಹಕರಿಗೆ ಒಂದು ಅವಕಾಶ ಎಂದು ವೊಡಾಫೋನ್ ಇಂಡಿಯಾದ ವಾಣಿಜ್ಯ ವಿಭಾಗದ ನಿರ್ದೇಶಕ ಸಂದೀಪ್ ಕಟಾರಿಯಾ ತಿಳಿಸಿದ್ದಾರೆ.

ಈ ಯೋಜನೆ ಅಡಿ ವೊಡಾಪೋನ್ ಪ್ಲೇನಲ್ಲಿರುವ ಟಿ.ವಿ, ಸಿನಿಮಾ ಹಾಗೂ ಸಂಗೀತಕ್ಕೆ ಉಚಿತವಾಗಿ ಚಂದಾದಾರರಾಗಬಹುದು. ಅಂದಹಾಗೆ ಈ ಯೋಜನೆ ಕಳೆದ ಆರು ತಿಂಗಳಲ್ಲಿ ವೊಡಾಫೋನ್ ನೆಟ್ ವರ್ಕ್ ಬಳಸದ 4ಜಿ ಮೊಬೈಲ್ ಹ್ಯಾಂಡ್ ಸೆಟ್ ಗಳಿಗೆ ಅನ್ವಯಿಸುತ್ತದೆ. ದೆಹಲಿ, ಮುಂಬೈ, ಕೋಲ್ಕತ್ತಾ ಗ್ರಾಹಕರು ಒಂದು ಜಿ.ಬಿ ಅಥವಾ ಅದಕ್ಕಿಂತ ಹೆಚ್ಚಿನ ಡೇಟಾಗೆ ಒಂಬತ್ತು ಜಿ.ಬಿ. ಹೆಚ್ಚುವರಿ ಡೇಟಾ ಉಚಿತವಾಗಿ ಪಡೆಯುತ್ತಾರೆ.[ರಿಲಯನ್ಸ್ ಜಿಯೋ ಲೋಕಾರ್ಪಣೆ: ಗ್ರಾಹಕರಿಗೆ ವಾಯ್ಸ್ ಕಾಲ್ ಉಚಿತ]

ಆದರೆ, ಉತ್ತರಪ್ರದೇಶ, ಹರಿಯಾಣ, ಕರ್ನಾಟಕ, ಗುಜರಾತ್, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಅಸ್ಸಾಂ, ಈಶಾನ್ಯ ರಾಜ್ಯಗಳು ಹಾಗೂ ರಾಜಸ್ತಾನದ ಗ್ರಾಹಕರು 4ಜಿ ಮೊಬೈಲ್ ಫೋನ್ ಇದ್ದರೆ ಹೆಚ್ಚುವರಿ 9 ಜಿ.ಬಿ. 3ಜಿ ಡೇಟಾ ಪಡೆಯುತ್ತಾರೆ. ಅದು ರಾತ್ರಿ ಹನ್ನೆರಡರಿಂದ ಬೆಳಗ್ಗೆ ಆರರವರೆಗೆ ಮಾತ್ರ ಬಳಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vodafone announced a free data plan offering 10 GB 4G mobile services at the price of 1 GB plan but with various conditions. Under the offer, customer with a new smartphone with get an additional 9 GB of 4G mobile broadband usage when recharges the 1 GB plan.
Please Wait while comments are loading...