ನಾಲ್ಕು ಹಂತದ ಜಿಎಸ್ ಟಿ ದರ ನಿಗದಿ: ಅರುಣ್ ಜೇಟ್ಲಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ನವದೆಹಲಿ, ನವೆಂಬರ್ 3: ಕೇಂದ್ರ ಸರಕಾರದ ಬಹು ನಿರೀಕ್ಷಿತವಾಗಿದ್ದ ಜಿಎಸ್ ಟಿ ದರವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಘೋಷಿಸಿದ್ದಾರೆ. ನಾಲ್ಕು ಬಗೆಯ ಜಿಎಸ್ ಟಿ ದರವನ್ನು ವಿಧಿಸಲಿದ್ದು, ಶೇ 5, ಶೇ 12, ಶೇ 18 ಹಾಗೂ ಶೇ 28ರಷ್ಟು ದರ ನಿಗದಿ ಮಾಡಲಾಗಿದೆ.

ಗ್ರಾಹಕ ಸಂವೇದಿ ಸೂಚ್ಯಂಕದಲ್ಲಿರುವ(CPI) ಶೇ 50ರಷ್ಟು ವಸ್ತುಗಳು ಶೂನ್ಯ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತವೆ. ಅದರಲ್ಲಿ ಜನಸಾಮಾನ್ಯರು ಬಳಸುವ ಆಹಾರಧಾನ್ಯಗಳು ಒಳಗೊಂಡಿವೆ. ಇನ್ನು ಶೇ 5ರ ದರವನ್ನು ಸಾಮಾನ್ಯ ಜನರು ಸಾಮೂಹಿಕವಾಗಿ ಬಳಸುವ ವಸ್ತುಗಳ ಮೇಲೆ ಹಾಕಲಾಗಿದೆ ಎಂದು ಸಚಿವರು ಹೇಳಿದರು.[ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]

Arun jailtly

ಯಾವ ವಸ್ತುಗಳಿಗೆ ಶೇ 30-31ರಷ್ಟು (ಅಬಕಾರಿ ಸುಂಕ ಹಾಗೂ ವ್ಯಾಟ್) ತೆರಿಗೆ ಆಗುತ್ತಿತ್ತೋ ಅವುಗಳಿಗೀಗ ಶೇ 28ರಷ್ಟು ತೆರಿಗೆ ಬೀಳುತ್ತದೆ. ಹೆಚ್ಚಿನ ತೆರಿಗೆ ದರದಿಂದ ಸಂಗ್ರಹವಾಗುವ ಆದಾಯವನ್ನು ಶೇ 5ರಷ್ಟು ಹಾಗೂ ಶೇ 18ರಷ್ಟು ತೆರಿಗೆ ಬೀಳುವ ಜನ ಸಾಮಾನ್ಯರು ಬಳಸುವ ವಸ್ತುಗಳಿಗೆ ವಿನಿಯೋಗಿಸಲಾಗುವುದು ಎಂದರು.

ಐಷಾರಾಮಿ ಕಾರು, ತಂಬಾಕು ಇತರ ವಸ್ತುಗಳಿಗೆ ಕ್ಲೀನ್ ಎನರ್ಜಿ ಸೆಸ್ ಜತೆಗೆ ಸೆಸ್ ಹಾಕಲಾಗಿದ್ದು, ಆದಾಯದಲ್ಲಿ ನಷ್ಟವಾಗುವ ರಾಜ್ಯಗಳಿಗೆ ಪರಿಹಾರವಾಗಿ ನೀಡಲಾಗುವುದು. ಈ ರೀತಿಯ ಪರಿಹಾರ ರೂಪದ ಸೆಸ್ ಮುಂದಿನ ಐದು ವರ್ಷಗಳ ಕಾಲ ಇರುತ್ತದೆ. ಜಿಎಸ್ ಟಿ ಜಾರಿಯಾದ ಮೊದಲ ವರ್ಷ ರಾಜ್ಯಗಳ ಆದಾಯದಲ್ಲಿ ಆಗುವ ನಷ್ಟವನ್ನು ಸರಿದೂಗಿಸಲು 50 ಸಾವಿರ ಕೋಟಿ ಪಾವತಿಸಬೇಕಾಗುತ್ತದೆ ಎಂದು ಜೇಟ್ಲಿ ಹೇಳಿದರು.[ಜಿಎಸ್ಟಿ ಮಸೂದೆಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ಸಿನಿಂದ ಬೆಂಬಲ]

ಶೇ 5, ಶೇ 12, ಶೇ 18 ಹಾಗೂ ಶೇ 28ರಷ್ಟು ದರ ನಿಗದಿ ಮಾಡಿದ್ದು, ಅತಿ ಹೆಚ್ಚು ದರವು ಗ್ರಾಹಕ ಬಳಕೆ ವಸ್ತುಗಳು ಹಾಗೂ ಎಫ್ ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಗಳಿಗೆ ಆಗುತ್ತದೆ.ಮುಂದಿನ ವರ್ಷದ ಏಪ್ರಿಲ್ 1ರಿಂದ ದೇಶದಾದ್ಯಂತ ಜಿಎಸ್ ಟಿ ಜಾರಿಯಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
We have been able to finalise GST rate structure at 5, 12, 18 and 28 per cent, said Finance Minister Arun Jaitley on Thursday in New Delhi.
Please Wait while comments are loading...