ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಲಕನಿಗೆ ಹಣ ಕೊಟ್ಟು ಉಬರ್‌ ಕ್ಯಾಬ್‌ನಿಂದ ಇಳಿರಿ

|
Google Oneindia Kannada News

ಬೆಂಗಳೂರು, ಸೆ.02: ಟ್ಯಾಕ್ಸಿ ಸೇವೆಯಲ್ಲಿನ ಗೊಂದಲಗಳನ್ನು ನಿವಾರಣೆ ಮಾಡಲು ಮುಂದಾಗಿರುವ ಉಬರ್ ಹೊಸ ಕ್ರಮಕ್ಕೆ ಮುಂದಾಗಿದೆ. ನವದೆಹಲಿ ಮತ್ತು ಬೆಂಗಳೂರಿನಲ್ಲಿ ನಗದು ಪಾವತಿ ಪದ್ಧತಿ ಜಾರಿಗೆ ಮುಂದಾಗಿದೆ.

ಆನ್ ಲೈನ್ ಪಾವತಿ ಪ್ರಕ್ರಿಯೆ ಕೆಲವರಿಗೆ ಗೊಂದಲ ಸೃಷ್ಟಿ ಮಾಡುತ್ತಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಯತ್ನಿಸಿದ ಉಬರ್ ಬೆಂಗಳೂರು ಮತ್ತು ರಾಜಧಾನಿ ನವದೆಹಲಿಯ ನಾಗರಿಕರಿಗೂ ಕೊಡುಗೆ ನೀಡಿದೆ.[ಬೆಂಗಳೂರು: ಟ್ಯಾಕ್ಸಿ ಫಾರ್ ಶ್ಯೂರ್ ಬಾಡಿಗೆ ಭಾರೀ ಇಳಿಕೆ]

taxi

ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ವಿಭಾಗದ ಮುಖ್ಯಸ್ಥ ಭವಿಕ್ ರಾಥೋಡ್ ಸೆಪ್ಟೆಂಬರ್ 2 ರಿಂದ ಕ್ಯಾಶ್ ಪೇಮೆಂಟ್ ಪದ್ಧತಿ ಜಾರಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ನಿಮ್ಮ ಪ್ರಯಾಣ ಮುಗಿದ ನಂತರ ಸರಿಯಾದ ಮೊತ್ತವನ್ನು ನೀಡಿ ಕ್ಯಾಬ್ ನಿಂದ ಇಳಿಯಬಹುದು ಎಂದು ತಿಳಿಸಿದ್ದಾರೆ.[ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

ಕಳೆದ ಮೇ ತಿಂಗಳಿನಲ್ಲೇ ಉಬರ್ ಕ್ಯಾಶ್ ಪೇಮೆಂಟ್ ಪದ್ಧತಿಯನ್ನು ಹೈದ್ರಾಬಾದ್ ನಲ್ಲಿ ಜಾರಿ ಮಾಡಿತ್ತು. ನಂತರ ಯೋಜನೆಯನ್ನು ಅಹಮದಾಬಾದ್, ಚಂಡಿಘಡ, ಜೈಪುರ ಮತ್ತು ಕೊಚ್ಚಿಗೂ ವಿಸ್ತರಣೆ ಮಾಡಿತ್ತು. ದೇಶದ 22 ಪ್ರಮುಖ ನಗರಗಳಲ್ಲಿ ಉಬರ್ ಕ್ಯಾಶ್ ಪೇಮೆಂಟ್ ಸೇವೆ ಒದಗಿಸುತ್ತಿದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ಸಹ ಉಬರ್ ಬುಕ್ ಮಾಡಬಹುದು.

English summary
In an attempt to make a hassle-free experience for riders, the US-Based Taxi aggregator Uber has rolled out cash payment services in Bengaluru and New Delhi. Bhavik Rathod, GM, Uber Bangalore said that riders will be able to make direct payment with cash starting from today (Wednesday, Sept 2).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X