ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್‌ನಿಂದ ಫ್ಲಿಪ್‌ಕಾರ್ಟ್ ಹೋಲ್ ಸೇಲ್ ಶುರು: 5 ಅಂಶಗಳು ಇಲ್ಲಿವೆ

|
Google Oneindia Kannada News

ನವದೆಹಲಿ, ಜುಲೈ 23: ಫ್ಲಿಪ್‌ಕಾರ್ಟ್ ಸಮೂಹವು ಇಂದು ಭಾರತದ ಸಗಟು(ಹೋಲ್ ಸೇಲ್) ವ್ಯವಸ್ಥೆಗೆ ಪ್ರವೇಶಿಸಿದ್ದೇವೆ ಎಂದು ಘೋಷಿಸಿದೆ.

Recommended Video

ಹೊಸ Oneplus ವಿಶೇಷತೆಗಳು Oneplus Nord , ಕೈಗೆಟಕುವ ಬೆಲೆಯಲ್ಲಿ ಬೆಸ್ಟ್ ಫೋನ್ | Oneindia Kannada

ಫ್ಲಿಪ್‌ಕಾರ್ಟ್ ಕಂಪನಿಯು ಈಗಷ್ಟೇ ವಾಲ್‌ಮಾರ್ಟ್‌ ಇಂಡಿಯಾದಲ್ಲಿ ಶೇ. 100ರಷ್ಟು ಪಾಲನ್ನು ಪಡೆದುಕೊಂಡಿದೆ. ಇದು ಉತ್ತಮ ಬೆಲೆ ನಗದು ಮತ್ತು ಸಾಗಿಸುವ ವ್ಯವಹಾರವನ್ನು ನಿರ್ವಹಿಸುತ್ತದೆ. ಹೊಸ ಹೆಜ್ಜೆಯನ್ನಿಟ್ಟಿರುವ ಫ್ಲಿಪ್‌ಕಾರ್ಟ್ ಎಂಎಸ್‌ಎಂಇಗಳನ್ನು ಒಳಗೊಂಡಿರುವ ದೇಶದ ಹೋಲ್ ಸೇಲ್ ವ್ಯವಸ್ಥೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

Flipkart Wholesale:5 Things To know

ಫ್ಲಿಪ್‌ಕಾರ್ಟ್ ಹೋಲ್ ಸೇಲ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಐದು ವಿಷಯಗಳು ಇಲ್ಲಿವೆ

ಫ್ಲಿಪ್‌ಕಾರ್ಟ್ ಹೋಲ್ ಸೇಲ್ 2020 ರ ಆಗಸ್ಟ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದ್ದು, ಕಿರಾಣಿ ಮತ್ತು ಫ್ಯಾಷನ್ ವಿಭಾಗಗಳಿಗೆ ಪ್ರಾಯೋಗಿಕ ಸೇವೆಗಳನ್ನು ಒದಗಿಸುತ್ತದೆ. ಇದರ ನೇತೃತ್ವವನ್ನು ಫ್ಲಿಪ್‌ಕಾರ್ಟ್‌ನ ಅನುಭವಿ ಆದರ್ಶ್ ಮೆನನ್ ವಹಿಸಲಿದ್ದಾರೆ.

ತನ್ನ ಇಕ್ವಿಟಿ ಸ್ವತ್ತನ್ನು ಹೆಚ್ಚಿಸಿಕೊಂಡ ಫ್ಲಿಪ್‌ಕಾರ್ಟ್‌: 24.9 ಬಿಲಿಯನ್ ಡಾಲರ್‌ ಮೌಲ್ಯತನ್ನ ಇಕ್ವಿಟಿ ಸ್ವತ್ತನ್ನು ಹೆಚ್ಚಿಸಿಕೊಂಡ ಫ್ಲಿಪ್‌ಕಾರ್ಟ್‌: 24.9 ಬಿಲಿಯನ್ ಡಾಲರ್‌ ಮೌಲ್ಯ

ವಾಲ್ಮಾರ್ಟ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಮೀರ್ ಅಗರ್ವಾಲ್ ಅವರು ಸುಗಮ ಸ್ಥಿತ್ಯಂತರವನ್ನು ಖಚಿತಪಡಿಸಿಕೊಳ್ಳಲು ಕಂಪನಿಯೊಂದಿಗೆ ಉಳಿಯುತ್ತಾರೆ, ಆ ನಂತರ ಅವರು ವಾಲ್ಮಾರ್ಟ್‌ನೊಂದಿಗೆ ಮತ್ತೊಂದು ಹುದ್ದೆಗೆ ತೆರಳುತ್ತಾರೆ.

ಕಿರಾಣಿ ಅಂಗಡಿಗಳು ಮತ್ತು ಎಂಎಸ್‌ಎಂಇಗಳು ಈ ಹೊಸ ಸಾಹಸದ ಅವಿಭಾಜ್ಯ ಅಂಗವೆಂದು ಫ್ಲಿಪ್‌ಕಾರ್ಟ್ ಹೇಳಿಕೊಂಡಿದೆ. ವಿವಿಧ ವ್ಯವಹಾರ ಪ್ರಕ್ರಿಯೆಗಳನ್ನು ಸುಲಭಗೊಳಿಸಲು ತಂತ್ರಜ್ಞಾನದಿಂದ ನಡೆಸಲ್ಪಡುವ ಮಹತ್ವದ ಮೌಲ್ಯವನ್ನು ಸಣ್ಣ ಉದ್ಯಮಗಳಿಗೆ ಒದಗಿಸಲು ಕಂಪನಿ ಯೋಜಿಸಿದೆ.

ಹೊಸ ಪ್ಲಾಟ್‌ಫಾರ್ಮ್ ವ್ಯವಹಾರಗಳನ್ನು ಬಳಸುವುದರಿಂದ ಕಿರಾಣಿ, ಸಾಮಾನ್ಯ ಸರಕು ಅಥವಾ ಫ್ಯಾಷನ್ ವಿಭಾಗಗಳನ್ನು ಪ್ರವೇಶಿಸಬಹುದು. ಆಕರ್ಷಕ ಯೋಜನೆಗಳು ಮತ್ತು ಪ್ರೋತ್ಸಾಹಕಗಳನ್ನು ಒದಗಿಸಲು ಕಂಪನಿಯು ಯೋಜಿಸಿದ್ದು, ಇದು ಸ್ಟಾಕ್ ಆಯ್ಕೆಗಾಗಿ ಡೇಟಾ-ಚಾಲಿತ ಶಿಫಾರಸುಗಳೊಂದಿಗೆ ಪೂರಕವಾಗಿದೆ. ಹೆಚ್ಚಿನ ದಕ್ಷತೆಯನ್ನು ಒದಗಿಸಲು ಕಂಪನಿಯ ವ್ಯವಸ್ಥಾಪನಾ ನೆಟ್‌ವರ್ಕ್ ಮೂಲಕ ಉತ್ಪನ್ನಗಳನ್ನು ತಲುಪಿಸಲಾಗುತ್ತದೆ. ಫ್ಲಿಪ್‌ಕಾರ್ಟ್ ಸಮೂಹದ ಪ್ರಸ್ತುತ ಪೂರೈಕೆ ಸರಪಳಿ ಮೂಲಸೌಕರ್ಯವನ್ನು ಕಿರಾನಾ ಮತ್ತು ಎಂಎಸ್‌ಎಂಇಗಳನ್ನು ತಲುಪಲು ಬಳಸಲಾಗುತ್ತದೆ.

English summary
Flipkart group aquires walmart india and today announced that they will be entering the wholesale ecosystem of India and the Launch flipkart wholesale next month
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X