ಫ್ಲಿಪ್ ಕಾರ್ಟ್ ನಲ್ಲಿ ಲೈಫ್ ವಿಂಡ್ 3 ಮತ್ತು ಫ್ಲೇಮ್ 8!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 13: ಎರಡು ಲೈಫ್ ಮಾಡೆಲ್ ಗಳಾದ, ವಿಂಡ್ 3 ಮತ್ತು ಫ್ಲೇಮ್ 8 ಆಗಿ ತನ್ನ ಪೋರ್ಟಲ್ ನಲ್ಲಿ ಲಭ್ಯ ಇರಲಿದೆ ಎಂದು ಫ್ಲಿಪ್ ಕಾರ್ಟ್ ಘೋಷಿಸಿದೆ.

15-30 ವಯೋಮಾನದ ಗ್ರಾಹಕರನ್ನು ಗುರಿಯಾಗಿಸಿರುವ ರಿಲಯನ್ಸ್ ಲೈಫ್ ವಿಂಡ್ 3 ಮತ್ತು ಫ್ಲೇಮ್ 8 ಬಜೆಟ್ ಫೋನ್ ಗಳಾಗಿವೆ. ಇವೆರಡರಲ್ಲಿ ಲೈಫ್ ವಿಂಡ್ 3, ಒಂದು ಪ್ರೀಮಿಯಂ ಆವೃತ್ತಿಯಾಗಿದ್ದು, 16 ಜಿಬಿಯಷ್ಟು ಹೆಚ್ಚಿನ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಮತ್ತು 2,920 ಎಂಎಎಚ್ ಬ್ಯಾಟರಿಯೊಂದಿಗೆ ದೀರ್ಘ ಬ್ಯಾಟರಿ ಬಾಳ್ವಿಕೆ ಹೊಂದಿದೆ. ಇದೊಂದು ಡ್ಯುಯಲ್ ಸಿಮ್ ಫೋನ್ ಆಗಿದ್ದು, ಸ್ನಾಪ್‍ಡ್ರಾಗನ್ ಪ್ರೊಸೆಸರ್ ಹೊಂದಿದೆ. [ಲೈಫ್ ವಿಂಡ್ 4 ಡಿಜಿಟಲ್ ಸರೌಂಡ್ ಸೌಂಡ್ ಫೋನ್]

ಇದರ ಜತೆಗೆ, 8ಎಂಪಿ ಕ್ಯಾಮರಾ ಹಿಂಭಾಗದಲ್ಲಿ ಮತ್ತು 2ಎಂಪಿ ಕ್ಯಾಮರಾ ಮುಂಭಾಗದಲ್ಲಿದೆ ಮತ್ತು 5.5 ಎಚ್ಡಿ ಡಿಸ್ ಪ್ಲೇಯ ಸ್ಕ್ರೀನ್ ಇದೆ. ಈ ಫೋನ್‍ನ ಬೆಲೆ 6,999 ರೂ. ಆಗಿದೆ.

ಇನ್ನೊಂದೆಡೆ, ಲೈಫ್ ಫ್ಲೇಮ್ 8 4.5 ಡಿಸ್‍ಪ್ಲೇ ಹಾಗೂ 8 ಜಿಬಿ ಎಕ್ಸ್‍ಪಾಂಡೇಬಲ್ ಇಂಟರ್ನಲ್ ಸ್ಟೋರೇಜ್ ಸಾಮಥ್ರ್ಯ ಹೊಂದಿದೆ. ಈ ಫೋನ್ ಕೂಡಾ ಡ್ಯುಯಲ್ ಸಿಮ್ ಹೊಂದಬಹುದಾಗಿದ್ದು, 2100 ಎಂಎಎಚ್ ಬ್ಯಾಟರಿಯ ಬೆಂಬಲ ಹೊಂದಿದೆ. ಸ್ನಾಪ್‍ಡ್ರಾಗನ್ 210 ಪ್ರೊಸೆಸರ್ ಇರುವ ಈ ಫೋನ್ ಹಿಂಭಾಗದಲ್ಲ್ಲಿ 8 ಎಂಪಿ ಮತ್ತು ಮುಂಭಾಗದಲ್ಲ್ಲಿ 5 ಎಂಪಿ ಕ್ಯಾಮರಾ ಹೊಂದಿದೆ. ಈ ಫೋನ್ ಬೆಲೆ 4,199 ರೂ. ಆಗಿದೆ.

ಅಜಯ್ ಯಾದವ್, ಉಪಾಧ್ಯಕ್ಷರು

ಅಜಯ್ ಯಾದವ್, ಉಪಾಧ್ಯಕ್ಷರು

ಮೊಬೈಲ್ಸ್, ಫ್ಲಿಪ್‍ಕಾರ್ಟ್, ಫ್ಲಿಪ್‍ಕಾರ್ಟ್, ಭಾರತದಲ್ಲಿನ ಅತಿದೊಡ್ಡ ಸ್ಮಾರ್ಟ್‍ಫೋನ್ ಮಾರಾಟಗಾರನಾಗಿದ್ದು, ದೇಶದ ಶೇ.60ರಷ್ಟು ಎಲ್‍ಟಿಇ ಡಿವೈಶ್ ಗಳ ಮಾರಾಟದ ಪಾಲು ಹೊಂದುವ ಮೂಲಕ ಪ್ರಸ್ತುತ 4ಜಿ ಅಳವಡಿಕೆಯೊಂದಿಗೆ ಮುಂಚೂಣಿಯಲ್ಲಿದೆ.

ಕೈಗೆಟಕುವ ವಿಭಾಗದಲ್ಲಿ ಹ್ಯಾಂಡ್ ಸೆಟ್ ಗಳ ಬಿಡುಗಡೆ

ಕೈಗೆಟಕುವ ವಿಭಾಗದಲ್ಲಿ ಹ್ಯಾಂಡ್ ಸೆಟ್ ಗಳ ಬಿಡುಗಡೆ

ಇದರೊಂದಿಗೆ ರಿಲಯನ್ಸ್ ಜತೆಗೆ ಕಂಪನಿಯ ಸಹಭಾಗಿತ್ವವು ಭಾರತದಲ್ಲಿನ 4ಜಿ ಸ್ವೀಕಾರ್ಹತೆಯತ್ತ ಬ್ರಾಂಡ್ ಬದ್ಧತೆಯ ಆಂದೋಲನದ ಮಾನ್ಯತೆಯಾಗಿದೆ. ರಿಲಯನ್ಸ್ ಜಿಯೋ (4ಜಿ) ಚಾಲನೆಯು ಈ ವರ್ಷದ ಅತಿ ನೀರೀಕ್ಷೆಯ ಬಿಡುಗಡೆಯಾಗಿರಲಿದೆ. ಕೈಗೆಟಕುವ ವಿಭಾಗದಲ್ಲಿ ಹ್ಯಾಂಡ್ ಸೆಟ್ ಗಳ ಬಿಡುಗಡೆಯೊಂದಿಗೆ, 4ಜಿ ಅಲೆ ದೇಶಕ್ಕೆ ಅಪ್ಪಳಿಸಿದೆ' ಎಂದು ಹೇಳಿದರು.

ಫ್ಲಿಪ್‍ಕಾರ್ಟ್ ಈಗ ಜಿಯೋ ಪ್ರಿವ್ಯೂ ಆಫರ್

ಫ್ಲಿಪ್‍ಕಾರ್ಟ್ ಈಗ ಜಿಯೋ ಪ್ರಿವ್ಯೂ ಆಫರ್

ಈ 2 ಸ್ಮಾರ್ಟ್‍ಫೋನ್ ಗಳ ಬಿಡುಗಡೆಯೊಂದಿಗೆ, ಫ್ಲಿಪ್‍ಕಾರ್ಟ್ ಈಗ ಜಿಯೋ ಪ್ರಿವ್ಯೂ ಆಫರ್ ಅನ್ನು ತನ್ನ ಗ್ರಾಹಕರಿಗೆ ಈ ಹ್ಯಾಂಡ್ ಸೆಟ್ ಗಳ ಮೂಲಕ ವಿಶಿಷ್ಟವಾಗಿ ನೀಡಲು ಸಾಧ್ಯವಾಗಿದೆ. ಮೊದಲ ಮೂರು ತಿಂಗಳ ಕಾಲ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, ಅನಿಯಮಿತ ಟಾಕ್ ಟೈಮ್ ಮತ್ತು ಡಾಟಾ ಯೂಸೇಜ್ ನೊಂದಿಗೆ ಗ್ರಾಹಕರು ಜಿಯೋ 4ಜಿ ಅನುಭವವನ್ನು ಪಡೆಯಬಹುದಾಗಿದೆ.

LYF ಸ್ಮಾರ್ಟ್ ಫೋನ್ ಬಗ್ಗೆ

LYF ಸ್ಮಾರ್ಟ್ ಫೋನ್ ಬಗ್ಗೆ

LYF ಸ್ಮಾರ್ಟ್ ಫೋನ್ + ರಿಲಯನ್ಸ್ ರಿಟೇಲ್ ನ ನೈಜ 4ಜಿ ಶ್ರೇಣಿಯ ಉಪಕರಣಗಳಾಗಿದ್ದು, ಭಾರತದ ಗ್ರಾಹಕರಿಗೆ ಅತ್ಯಾಧುನಿಕ 4ಜಿ ತಂತ್ರಜ್ಞಾನ ನೀಡುವಂತೆ ವಿನ್ಯಾಸಿಸಲ್ಪಟ್ಟಿವೆ. ಲೈಫ್ ನ ಸಂಪೂರ್ಣ ಶ್ರೇಣಿ ನೈಜ 4ಜಿ ಅನುಭವ ನೀಡುವಂತಹ ವೋಲ್ಟೆ(VoLTE) ಶಕ್ತಿ ಹೊಂದಿದೆ. ಇದುವರೆಗೆ ಯಾವುದೇ ನಿದರ್ಶನ ಇರದಂಥ, ಬೆಲೆಗೆ ತಕ್ಕ ನಿರೀಕ್ಷೆಗೂ ಮೀರಿದ ತಂತ್ರಜ್ಞಾನ ಕ್ರಾಂತಿಯನ್ನು ಈ ಉಪಕರಣಗಳು ಹೊಂದಿವೆ

ನಾಲ್ಕು ಸರಣಿಯಲ್ಲಿ ಲಭ್ಯ ಇರಲಿವೆ

ನಾಲ್ಕು ಸರಣಿಯಲ್ಲಿ ಲಭ್ಯ ಇರಲಿವೆ

ಎಚ್ಡಿ ಧ್ವನಿ, ವೋಲ್ಟೆ ಮತ್ತು ವೈ-ಫೈ ಆಧಾರಿತ ವೀಡಿಯೊ ಕರೆಗಳು, ಮಲ್ಟಿಪಾರ್ಟಿ ಆಡಿಯೋ ಮತ್ತು ವೀಡಿಯೊ ಕಾನ್ಫೆರೆನ್ಸಿಂಗ್, ಅತಿಶೀಘ್ರದಲ್ಲಿ ಡೌನ್‍ಲೋಡ್ ಹಾಗೂ ವಾಯ್ಸ್ ಮತ್ತು ವೀಡಿಯೊ ಕರೆಗಳ ಮಧ್ಯ ತಡೆರಹಿತ ಬದಲಾವಣೆ ಮುಂತಾದ ಉತ್ಕೃಷ್ಟ ತಂತ್ರಜ್ಞಾನದ ಸೌಲಭ್ಯಗಳು ಗ್ರಾಹಕರನ್ನು ಈ ಬ್ರಾಂಡ್ ನ ಜೊತೆಗಿರುವಂತೆ ಮಾಡುತ್ತದೆ. LYF ಶ್ರೇಣಿಯ ಸ್ಮಾರ್ಟ್ ಫೋನ್ ಗಳು ಅರ್ಥ್, ವಾಟರ್, ವಿಂಡ್ ಹಾಗೂ ಫ್ಲೇಮ್ ಎಂಬ ನಾಲ್ಕು ಸರಣಿಯಲ್ಲಿ ಲಭ್ಯ ಇರಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Flipkart.com said on Friday that it has exclusively partnered with Reliance Jio Infocomm to sell two mobile handsets of from its LYF line—WIND 3 and FLAME 8— a move that could help India’s largest e-commerce platform strengthen its star category—smartphones.
Please Wait while comments are loading...