ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲ್ಯಾಪ್ ಟಾಪ್ ಬದಲಾಗಿ ಕಲ್ಲು ಕಳಿಸಿದ ಫ್ಲಿಪ್ ಕಾರ್ಟ್!

|
Google Oneindia Kannada News

ಬೆಂಗಳೂರು, ಜೂ, 16: ಕಚೇರಿಗೆ ಲ್ಯಾಪ್ ಟಾಪ್ ಬೇಕು ಎಂದು ಆನ್ ಲೈನ್ ಮಾರ್ಕೆಟಿಂಗ್ ಮೊರೆ ಹೋಗಿ ಫ್ಲಿಪ್ ಕಾರ್ಟ್ ನಲ್ಲಿ ಆರ್ಡರ್ ಮಾಡಿದರೆ ಬಂದಿದ್ದು ಕಲ್ಲಿನ ತುಂಡುಗಳು!

flipkart

ಹೌದು...ಫ್ಲಿಪ್ ಕಾರ್ಟ್ ಮತ್ತೆ ಸುದ್ದಿಯಲ್ಲಿದೆ ಅದು ಬೇಡದ ಕಾರಣಕ್ಕೆ. ಲ್ಯಾಪ್ ಟಾಪ್ ಬದಲಾಗಿ ಕಲ್ಲು ಕಳಿಸಿ ಗ್ರಾಹಕರ ಆಕ್ರೋಶಕ್ಕೆ ಗುರಿಯಾಗಿದೆ.ಕಂಪನಿ ವಿರುದ್ಧ ದೂರು ದಾಖಲಾಗಿದ್ದು 24 ಗಂಟೆ ಅವಧಿಯಲ್ಲಿ ಎರಡು ಸಾರಿ ಕಲ್ಲು ಕಳಿಸಿದೆ ಎಂದು ಹೇಳಲಾಗಿದೆ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಲೆ ಇದೆ.[ಮೊಬೈಲ್ ಬದಲು ಮರದ ತುಂಡು ಮನೆಗೆ ಬಂತು!]

ಮೂರು ಲ್ಯಾಪ್ ಟಾಪ್ ಗಳನ್ನು ಆರ್ಡರ್ ಮಾಡಿದ್ದೇವು. ಅದಕ್ಕೆ ಬದಲಾಗಿ ನಮ್ಮ ಕಚೇರಿಗೆ ಬಂದಿದ್ದು ಕಲ್ಲು ಎಂದು ಬಾಕ್ಸ್ ಸಮೇತ ಇರುವ ಫೋಟೋವನ್ನು ಹಾಕಿ ಟ್ವೀಟ್ ಮಾಡಲಾಗಿದೆ.

ಮೊಬೈಲ್ ಆರ್ಡರ್ ಮಾಡಿದ್ದ ತೇಲಂಗಾಣದ ಗ್ರಾಹಕರೊಬ್ಬಗೆ ಫ್ಲಿಪ್ ಕಾರ್ಟ್ ಇತ್ತೀಚೆಗೆ ಮಾವಿನ ಹಣ್ಣುಗಳನ್ನು ಕಳಿಸಿ ಕೊಟ್ಟಿತ್ತು. ಈಗಲೂ ಅವರು ರೀಫಂಡ್ ಗಾಗಿ ಹೋರಾಟ ಮಾಡುತ್ತಿದ್ದಾರೆ.[ಫ್ಲಿಪ್ ಕಾರ್ಟಿಗೆ ಸಾವಿರ ಕೋಟಿ ದಂಡ! ಸುಳ್ಳೇ ಸುಳ್ಳು]

ಗ್ರಾಹರ ಸೇವಾ ಕೇಂದ್ರಕ್ಕೆ ಕರೆ ಮಾಡಿದರೆ, ಇದು ನಮ್ಮ ವ್ಯಾಪ್ತಿಯಲ್ಲಿ ಇಲ್ಲ. ನಿಮ್ಮ ಕ್ಯಾನ್ಸಲ್ ಪ್ರಕ್ರಿಯೆಯನ್ನು ರದ್ದು ಮಾಡಲಾಗುತ್ತಿದೆ ಎಂಬ ಉತ್ತರ ಬಂದಿತ್ತು.

ಇದರಿಂದ ನೊಂದ ಗ್ರಾಹಕ ಅನಿವಾರ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಗತಿಯನ್ನು ಫೋಟೊ ಸಮೇತ ಬಹಿರಂಗ ಮಾಡಿದ್ದಾರೆ. ಕಂಪನಿ ಮುಂದೆ ಯಾವ ಪರಿಹಾರ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

English summary
Once again Flipkart made headlines, but for wrong reasons. This time the company has been accused of sending stones instead of laptops. Complaints have been lodged against the company saying that Flipkart has sent stones twice within twenty four hours. The incident has been highlighted on micro-blogging site Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X