• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫ್ಲಿಪ್ ಕಾರ್ಟಿನಿಂದ 'ಬಿಗ್ ಬಿಲಿಯನ್‌ ಡೇ' ನಂತರ ಬಿಗ್ ಬಿಲಿಯನ್ ಸೇಲ್

By Mahesh
|

ಬೆಂಗಳೂರು, ಸೆ.29: 'ಬಿಗ್ ಬಿಲಿಯನ್‌ ಡೇ' ಮೂಲಕ ಇ-ಕಾಮರ್ಸ್ ಮಾರುಕಟ್ಟೆಯಲ್ಲೇ ಹೊಸ ಇತಿಹಾಸ ಸೃಷ್ಟಿಸಿದ ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್ ಸಂಸ್ಥೆ ಈಗ 'ಬಿಗ್ ಬಿಲಿಯನ್ ಸೇಲ್' ನಡೆಸಲು ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ.

ಕಳೆದ ವರ್ಷ ಅಕ್ಟೋಬರ್ 6 ರಂದು ಫ್ಲಿಫ್ ಕಾರ್ಟ್ ನ ಬಿಗ್ ಬಿಲಿಯನ್ ಡೇಗೆ ಗ್ರಾಹಕರು ನೀಡಿದ ಉತ್ತಮ ಪ್ರತಿಕ್ರಿಯೆಯಿಂದಾಗಿ ಒಂದೇ ದಿನದಲ್ಲಿ ಸುಮಾರು 600 ಕೋಟಿ ರುಗೂ ಅಧಿಕ ಮೊತ್ತವನ್ನು ಫ್ಲಿಫ್ ಕಾರ್ಟ್ ಸಂಸ್ಥೆ ಬಾಚಿಕೊಂಡಿತ್ತು.

ಬಿಗ್ ಬಿಲಿಯನ್ ಡೇ ಪರ ವಿರುದ್ಧ ಅನೇಕ ಸುದ್ದಿಗಳು ಹರಿದಾಡಿತ್ತು ಕೂಡಾ. ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿಐ) ನಿಯಮಗಳನ್ನು ಉಲ್ಲಂಘಿಸಿದ ಆರೋಪ, ಆನ್ ಲೈನ್ ಶಾಪಿಂಗ್ ನಿಂದ ಇತರೆ ಮಾರಾಟಗಾರರಿಗೆ ತೊಂದರೆ ಸೇರಿದಂತೆ ಗ್ರಾಹಕರಿಂದ ಅನೇಕ ದೂರುಗಳು ಕೂಡಾ ಬಂದಿತ್ತು. [ಫ್ಲಿಪ್ ಕಾರ್ಟ್ 'ಬಿಗ್ ಡೇ' ಆವತ್ತು ಆಗಿದ್ದೇನು?]

ಅದರೆ, ಆನ್ ಲೈನ್ ಶಾಪಿಂಗ್ ಮಾಡುವ ಪರಿಣತರಿಗೆ ಬಿಗ್ ಬಿಲಿಯನ್ ಡೇ ಸಕತ್ ಕಿಕ್ ನೀಡಿತ್ತು. ಯಾವ ಸಾಮಾಗ್ರಿ, ಸಾಧನ ಖರೀದಿಸಲು ಮುಂದಾದರೂ ಭರಪೂರ ರಿಯಾಯಿತಿ ಸಿಗುತ್ತಿತ್ತು. ಈಗ ಇದೇ ರೀತಿಯ ಡಿಸ್ಕೌಂಟ್ ಉತ್ಸವ, ಸಂಭ್ರಮವನ್ನು ಅಕ್ಟೋಬರ್ 13 ರಿಂದ 17ರ ತನಕ ನಡೆಯಲಿದೆ. [ಮಿಂಟ್ರಾ ಹಾದಿ ತುಳಿದ ಫ್ಲಿಪ್ ಕಾರ್ಟ್, 'ನೋ ವೆಬ್ ಸರ್ವೀಸ್']

ಅಪ್ಲಿಕೇಷನ್ ನಲ್ಲಿ ಮಾತ್ರ: ಮಿಂಟ್ರಾ ಹಾದಿ ತುಳಿದ ಫ್ಲಿಪ್ ಕಾರ್ಟ್ ವೆಬ್ ಸರ್ವೀಸ್ ನಿಲ್ಲಿಸಿ ಅಪ್ಲಿಕೇಷನ್ ಮೂಲಕ ಮಾತ್ರ ಮಾರಾಟಕ್ಕೆ ಮುಂದಾಗಿದೆ. ಸರಿ ಸುಮಾರು 70 ಉತ್ಪನ್ನಗಳು ಈ ಬಾರಿ ಮಾರಾಟಕ್ಕೆ ಲಭ್ಯವಿರುತ್ತದೆ. ಸುಮಾರು 100 ಮಿಲಿಯನ್ ಡಾಲರ್ ಟಾರ್ಗೆಟ್ ಇಟ್ಟುಕೊಂಡಿದೆ.[ಮಿಂಟ್ರಾ ಕೈವಶವಾದ ಬೆಂಗಳೂರಿನ ಪುಟ್ಟ ಕಂಪನಿ]

ಫ್ಲಿಪ್ ಕಾರ್ಟ್ ಅಪ್ಲಿಕೇಷನ್ ಮೂಲಕ ಹೆಚ್ಚಿನ ಆಫರ್ ಗಳು ಗ್ರಾಹಕರಿಗೆ ಸಿಗಲಿವೆ. ಗೃಹೋಪಯೋಗಿ ಸಾಮಾಗ್ರಿಗಳು, ಮಿಕ್ಸರ್, ಗ್ರೈಂಡರ್, ಏರ್ ಕಂಡಿಷನರ್, ಒವನ್, ಅಡುಗೆ ಪರಿಕರ, ಶೂ, ಕ್ರೀಡಾ ಉತ್ಪನ್ನ, ಮಹಿಳೆಯರಿಗೆ ಹ್ಯಾಂಡ್ ಬ್ಯಾಗ್, ಸೀರೆ, ಟಾಪ್ಸ್, ಫುಟ್ ವೇರ್ ಹೀಗೆ 70ಕ್ಕೂ ಅಧಿಕ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಸಿದ್ಧವಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After Big Billion Day now Flipkart plans ‘Big Billion Sale’: The “Big Billion Sale” is the second edition of the discount sale and will be held from October 13-17. Unlike the previous version, this year’s sale will be a five-day long event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more