• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಿಂಟ್ರಾ ಕೈವಶವಾದ ಬೆಂಗಳೂರಿನ ಪುಟ್ಟ ಕಂಪನಿ

By Mahesh
|

ಬೆಂಗಳೂರು, ಮೇ.8: ಅಮೆಜಾನ್.ಕಾಂಗೆ ಪೈಪೋಟಿ ನೀಡಲು ಮುಂದಾಗಿರುವ ಫ್ಲಿಪ್ ಕಾರ್ಟ್ ಪ್ಲಸ್ ಮಿಂಟ್ರಾ.ಕಾಂ ಈಗ ಸ್ಟಾರ್ ಅಪ್ ಕಂಪನಿಗಳತ್ತ ಮುಖ ಮಾಡಿದೆ. ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸುವ ಕಂಪನಿ ನೇಟಿವ್5 ಪ್ರತಿಭೆಗಳನ್ನು ಆನ್ ಲೈನ್ ಫ್ಯಾಷನ್ ಇ ರೀಟೈಲರ್ ಕಂಪನಿ ಮಿಂಟ್ರಾ.ಕಾಂ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಜನಪ್ರಿಯ ಇ ರೀಟೈಲರ್ ಸಂಸ್ಥೆ ಮಿಂಟ್ರಾ.ಕಾಂ ಅನ್ನು ಫ್ಲಿಪ್ ಕಾರ್ಟ್ .ಕಾಂ ಖರೀದಿಸುವ ಮೂಲಕ ಅಮೆಜಾನ್ ಇಂಡಿಯಾ ಸಂಸ್ಥೆಗೆ ಭಾರಿ ಪೆಟ್ಟು ನೀಡುವ ಉತ್ಸಾಹದಲ್ಲಿದೆ.

ಬೆಂಗಳೂರು ಮೂಲದ ನೇಟಿವ್ 5 ಸಂಸ್ಥೆಯನ್ನು ಕುನಾಲ್ ಅಭಿಷೇಕ್, ಬರದಾ ಸಾಹು, ಶಾಮಿಕ್ ದತ್ತಾಂದ್ ಹಾಗೂ ಮನೀಷ್ ಪ್ರಿಯದರ್ಶಿನಿ ಅವರು 2012ರಲ್ಲಿ ಸ್ಥಾಪಿಸಿದರು. ಈ ವಿಲೀನದಿಂದ ನಮ್ಮ ತಂತ್ರಜ್ಞಾನ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ನೇಟಿವ್ 5 ಸಿಇಒ ಹಾಗೂ ಸಹ ಸ್ಥಾಪಕ ಕುನಾಲ್ ಅಭಿಷೇಕ್ ಹೇಳಿದ್ದಾರೆ.

ಕ್ಲೌಂಡ್ ತಂತ್ರಜ್ಞಾನ ಬಳಸಿ ಕ್ರಾಸ್ ಪ್ಲಾಟ್ ಫಾರ್ಮ್ ಅಪ್ಲಿಕೇಷನ್ ಡೆವಲಪ್ಮೆಂಟ್ ಮಾಡುವ ಮೂಲಕ ಗಮನ ಸೆಳೆದಿರುವ ನೆಟಿವ್ 5 ಸಂಸ್ಥೆಯ ಪ್ರತಿಭೆಗಳು ಈಗ ಮಿಂಟ್ರಾ.ಕಾಂಗೆ ಕಾರ್ಯನಿರ್ವಹಿಸಲಿದ್ದಾರೆ. ಮನೀಷ್ ಅವರನ್ನು ಬಿಟ್ಟು ಉಳಿದ ಎಲ್ಲಾ ಸ್ಥಾಪಕರು ಮಿಂಟ್ರಾ.ಕಾಂ ಸೇರುತ್ತಿದ್ದಾರೆ.

ಸ್ಯಾನ್ ಫ್ಯಾನ್ಸಿಕೋ ಮೂಲದ ಫಿಟಿಕ್ಯೂಟೆ ಸಂಸ್ಥೆಯನ್ನು ಖರೀದಿಸಿದ ಮೇಲೆ ನೇಟಿವ್ 5 ಸಂಸ್ಥೆಯನ್ನು ಮಿಂಟ್ರಾ.ಕಾಂ ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ತಂತ್ರಜ್ಞಾನ ವಿಭಾಗವನ್ನು ಬಲಗೊಳಿಸಿಕೊಂಡಿದೆ.

ಫ್ಲಿಪ್ ಕಾರ್ಟ್ ಪೈ.ಲಿ: ಬೆಂಗಳೂರು ಮೂಲದ ಆನ್ ಲೈನ್ ರೀಟೈಲರ್ ಸಂಸ್ಥೆಯಾಗಿದ್ದು, ನಾಸ್ಪರ್ಸ್ ಸಮೂಹ, ಅಸ್ಸೆಲ್ ಪಾರ್ಟ್ನರ್ಸ್, ಐಕಾನಿಕ್ ಕ್ಯಾಪಿಟಲ್, ಟೈಗರ್ ಗ್ಲೋಬಲ್ ಸೇರಿದಂತೆ 15ಕ್ಕೂ ಅಧಿಕ ಸಂಸ್ಥೆಗಳು ಹೂಡಿಕೆ ಮಾಡಿವೆ. ಫ್ಲಿಪ್ ಕಾರ್ಟ್ ಸಂಸ್ಥೆ ಮಾರುಕಟ್ಟೆ ಮೌಲ್ಯ 12 ಬಿಲಿಯನ್ ಡಾಲರ್ ದಾಟುತ್ತದೆ. ಮಿಂಟ್ರಾ,ಕಾಂ ಖರೀದಿಗೂ ಮುನ್ನ ಫ್ಲೈಟ್, ಲೆಟ್ಸ್ ಬೈ.ಕಾಂ, ಚಂಪಕ್.ಕಾಂ ಮುಂತಾದ ಆನ್ ಲೈನ್ ಶಾಪಿಂಗ್ ತಾಣಗಳನ್ನು ತನ್ನ ಬುಟ್ಟಿಗೆ ಫ್ಲಿಪ್ ಕಾರ್ಟ್ ಹಾಕಿಕೊಂಡಿದೆ.

'ಬಿಗ್ ಬಿಲಿಯನ್‌ ಡೇ' ಮೂಲಕ ಇ-ಕಾಮರ್ಸ್ ಮಾರುಕಟ್ಟೆಯಲ್ಲೇ ಹೊಸ ಇತಿಹಾಸ ಸೃಷ್ಟಿಸಿದ ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್ ಸಂಸ್ಥೆ ಎಲೆಕ್ಟ್ರಾನಿಕ್ಸ್‌, ಪುಸ್ತಕ, ಗೃಹಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಈಗ ಅಮೇಜಾನ್ ಮೇ ತಿಂಗಳಲ್ಲಿ ಭರ್ಜರಿ ಸೇಲ್ ಆಫರ್ ನೀಡುತ್ತಿದ್ದು, ಫ್ಲಿಪ್ ಕಾರ್ಟ್ ಹಾಗೂ ಮಿಂಟ್ರಾ.ಕಾಂ ಯಾವ ಕೊಡುಗೆ ನೀಡುವುದೋ ಕಾದು ನೋಡಬೇಕಿದೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Myntra, an e-commerce portal for fashion and lifestyle products, has acquired Bengaluru-based mobile app development platform company, Native5. This acquisition will strengthen and expand Myntra’s mobile technology team.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more