• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫ್ಲಿಪ್‌ಕಾರ್ಟ್‌ನಿಂದ 2ಗುಡ್ ಲೋಕಲ್ ಯೋಜನೆ ಆರಂಭ : ಆಫ್‌ಲೈನ್ ರಿಟೇಲ್ ಉತ್ಪನ್ನಗಳು, ಆನ್‌ಲೈನ್‌ನಲ್ಲಿ ಲಭ್ಯ

|

ಬೆಂಗಳೂರು, ಡಿಸೆಂಬರ್ 4: ಸಾಂಪ್ರದಾಯಿಕ ರೀಟೇಲ್ ವ್ಯವಹಾರಗಳಿಗೂ ಇ-ಕಾಮರ್ಸ್ ನ ಪ್ರಯೋಜನಗಳನ್ನು ವಿಸ್ತರಣೆ ಮಾಡುವ ಉದ್ದೇಶದಿಂದ ಫ್ಲಿಪ್ ಕಾರ್ಟ್ ನ ಸ್ವತಂತ್ರ ಮೌಲ್ಯ-ಚಾಲಿತ ಪ್ಲಾಟ್ ಫಾರ್ಮ್ ಆಗಿರುವ 2ಗುಡ್ ಒಂದು ಹೊಸ ಯೋಜನೆಯನ್ನು ಘೋಷಿಸಿದೆ. 2ಗುಡ್ ಲೋಕಲ್ ಎಂಬ ಹೆಸರಿನ ಈ ಹೊಸ ಯೋಜನೆಯ ಉದ್ದೇಶ ಭಾರತದ ಜನಪ್ರಿಯ ಶಾಪಿಂಗ್ ಸೆಂಟರ್ ಗಳನ್ನು ಆನ್ ಲೈನ್ ವ್ಯವಹಾರದ ವ್ಯಾಪ್ತಿಗೆ ತರುವುದಾಗಿದೆ.

ಈ ಹೊಸ ಮಾದರಿ ಯೋಜನೆಯು ಆಫ್ ಲೈನ್ ಸ್ಟೋರ್ ಗಳು, ಬ್ರ್ಯಾಂಡ್ ಗಳು ಮತ್ತು ಶಾಪಿಂಗ್ ತಾಣಗಳು ತಂತ್ರಜ್ಞಾನ ಮತ್ತು ಸಾಮಾಜಿಕ ವಾಣಿಜ್ಯದ ಹೈಬ್ರೀಡ್ ರೀಟೇಲ್ ಮಾದರಿಯನ್ನು ಬಳಸಿಕೊಂಡು ಭಾರತದಾದ್ಯಂತದ ಗ್ರಾಹಕರನ್ನು ತಲುಪುವಂತೆ ಮಾಡಲಿದೆ. 2ಗುಡ್ ಲೋಕಲ್ ಸ್ಥಳೀಯ ಸ್ಟೋರ್ ಗಳಿಗೆ (ಒಂದೇ ಬ್ರ್ಯಾಂಡ್ ಅಥವಾ ಬಹು ಬ್ರ್ಯಾಂಡ್ ಸ್ಟೋರ್ ಗಳು ಮತ್ತು ಇತರೆ ಶಾಪಿಂಗ್ ತಾಣಗಳು) ಮತ್ತು ರೀಟೇಲರ್ ಗಳಿಗೆ ತಮ್ಮ ಡಿಜಿಟಲ್ ವ್ಯವಹಾರವನ್ನು ವಿಸ್ತರಣೆ ಮಾಡಿಕೊಂಡು ತಮ್ಮ ಗ್ರಾಹಕರೊಂದಿಗೆ ಮತ್ತಷ್ಟು ಸಮರ್ಪಕವಾಗಿ ಸಂಪರ್ಕ ಸಾಧಿಸಲು ಇದು ಅವಕಾಶ ಮಾಡಿಕೊಡಲಿದೆ.

ಬೆಂಗಳೂರು ಮೂಲದ ಕಂಪನಿ ಸ್ಕ್ಯಾಪಿಕ್ ಅನ್ನು ಸ್ವಾಧೀನಪಡಿಸಿಕೊಂಡ ಫ್ಲಿಪ್‌ಕಾರ್ಟ್‌

ಆಕರ್ಷಕವಾದ 2ಗುಡ್ ಲೋಕಲ್ ತನ್ನ ಪಾಲುದಾರ ಸ್ಟೋರ್ ಗಳ ಇತ್ತೀಚಿನ ಉತ್ಪನ್ನಗಳು ಮತ್ತು ಸಂಗ್ರಹಗಳನ್ನು ಪ್ರದರ್ಶಿಸಲು ಮತ್ತು ಅವುಗಳನ್ನು ಆನ್ ಲೈನ್ ಬಳಕೆದಾರರಿಗೆ ನೀಡಲು ಸಾಧ್ಯವಾಗುತ್ತದೆ. 2ಗುಡ್ ಲೋಕಲ್ ಕ್ಯಾಟಲಾಗಿಂಗ್, ಗ್ರಾಹಕ ತೃಪ್ತಿ, ಜಾಹೀರಾತು ಮತ್ತು ಮಾರುಕಟ್ಟೆ ಸೇರಿದಂತೆ ಹಲವಾರು ಪ್ರಮುಖ ಕ್ಷೇತ್ರಗಳ ವಿಚಾರದಲ್ಲಿ ಸ್ಟೋರ್ ಗಳಿಗೆ ನೆರವಾಗುತ್ತದೆ. ಇದಲ್ಲದೇ, ಇದು ಸ್ಟೋರ್ ಗಳಿಗೆ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚುವರಿ ಜಾಲವನ್ನು ಒದಗಿಸುತ್ತದೆ ಮತ್ತು ಹೊಸ ಗ್ರಾಹಕರನ್ನು ಪಡೆಯಲು ನೆರವಾಗುತ್ತದೆ.

ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಗ್ರಾಹಕರು ಮನೆಯಲ್ಲೇ ಇರುತ್ತಿದ್ದಾರೆ ಮತ್ತು ಸುರಕ್ಷಿತವಾಗಿ ಹಾಗೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 2ಗುಡ್ ಲೋಕಲ್ ಅವರ ಅಗತ್ಯಗಳು ಮತ್ತು ನೆಚ್ಚಿನ ಉತ್ಪನ್ನಗಳನ್ನು ತಮ್ಮ ನಿಗದಿತ ಸ್ಟೋರ್ ಗಳಿಂದ ವರ್ಚುವಲ್ ಆಗಿ ಖರೀದಿ ಮಾಡಲು ಅವಕಾಶ ಕಲ್ಪಿಸುತ್ತದೆ. ಅಂದರೆ, ಗ್ರಾಹಕರು ವರ್ಚುವಲ್ ಆಗಿ ತಮ್ಮ ಮನೆಗೆ ಉತ್ಪನ್ನಗಳನ್ನು ತರಿಸಿಕೊಳ್ಳಲು ಅವಕಾಶವನ್ನು ಕಲ್ಪಿಸುತ್ತದೆ.

ಚಿಲ್ಲರೆ ಉದ್ಯಮದಲ್ಲಿ ಇ-ಕಾಮರ್ಸ್ ಗಮನಾರ್ಹವಾದ ಕ್ರಾಂತಿಯನ್ನು ಉಂಟು ಮಾಡಿದೆ. ಗ್ರಾಹಕರಿಗೆ ಸ್ಟೋರ್ ಗಳ ಸಂಪರ್ಕವಿಲ್ಲದೇ ಶಾಪಿಂಗ್ ಅನುಭವ, ಮನೆ ಬಾಗಿಲಿಗೆ ಡೆಲಿವರಿ, ಸುಲಭ ಬಿಲ್ಲಿಂಗ್, ಆಪರ್ ಮತ್ತು ಕ್ಯುರೇಟೆಡ್ ಆಯ್ಕೆಯನ್ನು ಆರಿಸಿಕೊಳ್ಳುವ ಸಮಯದಲ್ಲಿ ಸಣ್ಣ ಬ್ರ್ಯಾಂಡ್ ಗಳು ಮತ್ತು ಸ್ಥಳೀಯ ವ್ಯಾಪಾರಿಗಳನ್ನು ತಲುಪಲು ಇದು ಅವಕಾಶ ಕಲ್ಪಿಸಿಕೊಡುತ್ತದೆ. ಪ್ರಸ್ತುತ 2ಗುಡ್ ಲೋಕಲ್ ಆ್ಯಪ್ ಮತ್ತು ಎಂ- ಸೈಟ್ ನಲ್ಲಿ ಲಭ್ಯವಿದೆ.

2ಗುಡ್ ಪ್ರಸ್ತುತ 600 ಕ್ಕೂ ಹೆಚ್ಚು ವಿಭಾಗಗಳಲ್ಲಿ ಸೇವೆಯನ್ನು ನೀಡುತ್ತಿದೆ ಮತ್ತು ಹೊಸ ಮತ್ತು ನವೀಕೃತ ಉತ್ಪನ್ನಗಳ ಕೊಡುಗೆಗಳನ್ನು ನೀಡುತ್ತಿದೆ. ಈ ಪ್ಲಾಟ್ ಫಾರ್ಮ್ ದೇಶಾದ್ಯಂತ 15,000 ಕ್ಕೂ ಹೆಚ್ಚು ಪಿನ್ ಕೋಡ್ ಗಳಲ್ಲಿ 10 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಹೊಂದಿದೆ.

English summary
Leading Digital commerce platform flipkart 2Gud Local Plan, Its aim tom reach offline products in online market
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X