ಸುಂದರ್ ಪಿಚೈ- ಗೂಗಲ್ ಸಿಇಒ ಬಗ್ಗೆ ಒಂದಿಷ್ಟು
ಬೆಂಗಳೂರು, ಆಗಸ್ಟ್ 11: ಇಂಡೋ ಅಮೆರಿಕನ್ ಸುಂದರ್ ಪಿಚೈ ಅವರು ನಿರೀಕ್ಷೆಯಂತೆ ಗೂಗಲ್ ನ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ಆಲ್ಫಾಬೆಟ್ ಕಂಪನಿಯ ಭಾಗವಾಗಿ ಗೂಗಲ್ ಕಾರ್ಯನಿರ್ವಹಿಸಲಿದೆ. ಸುಂದರ್ ಪಿಚೈ ಕುರಿತ ಕೆಲ ಮಾಹಿತಿ ಇಲ್ಲಿದೆ.
ಗೂಗಲ್ ಈಗ ರೀ ಬ್ರ್ಯಾಂಡ್ ಆಗಿದ್ದು, ಆಲ್ಫಾಬೆಟ್ (http://abc.xyz) ಮುಖ್ಯ ಸಂಸ್ಥೆಯಾಗಿದ್ದು ಇದಕ್ಕೆ ಲ್ಯಾರಿ ಪೇಜ್ ಸಿಇಒ ಆಗಿದ್ದಾರೆ. ಸೆರ್ಗೆ ಅವರು ಮುಖ್ಯಸ್ಥರಾಗಿರುತ್ತಾರೆ. ಆಲ್ಫಾಬೆಟ್ ನಲ್ಲಿ ಕ್ಯಾಲಿಕೋ, ನೆಸ್ಟ್, ಫೈಬರ್, ಎಕ್ಸ್ ಲ್ಯಾಬ್, ಲೈಫ್ ಸೈನ್ಸ್, ಇನ್ವೆಸ್ಟ್ ಮೆಂಟ್ ವಿಭಾಗ ಎಲ್ಲವೂ ಸೇರಿರುತ್ತದೆ.[ಚೆನ್ನೈ ಮೂಲದ ಸುಂದರ್ ಗೂಗಲ್ ನೂತನ ಸಿಇಒ]
ಉಳಿದಂತೆ, ಗೂಗಲ್ ನ ಮುಖ್ಯ ವಹಿವಾಟುಗಳಾದ ಸರ್ಚ್, ಆಡ್ಸ್, ಮ್ಯಾಪ್ಸ್, ಆಪ್ಸ್, ಯೂಟ್ಯೂಬ್ ಹಾಗೂ ಆಂಡ್ರಾಯ್ಡ್ ಹಾಗೂ ಸಂಬಂಧಿತ ತಾಂತ್ರಿಕ ಮೂಲ ಸೌಕರ್ಯಗಳ ನಿರ್ವಹಣೆ, ಜವಾಬ್ದಾರಿ ಈಗ ಸುಂದರ್ ಪಿಚೈ ಅವರಿಗೆ ವಹಿಸಲಾಗಿದೆ.

ಸುಂದರ್ ಪಿಚೈ ಅವರ ಬಗ್ಗೆ ಕೆಲ ಮಾಹಿತಿ ಇಲ್ಲಿದೆ:
* ಸುಂದರ್ ಪಿಚೈ ಅವರು ಭಾರತದ ತಮಿಳುನಾಡಿನ ಚೆನ್ನೈನಲ್ಲಿ 1972ರಲ್ಲಿ ಜನಿಸಿದರು. ಇಂದಿಗೂ ಭಾರತೀಯ ಪೌರತ್ವ ಉಳಿಸಿಕೊಂಡಿದ್ದಾರೆ.
* ಸುಂದರ್ ಪಿಚೈ ಅವರ ಪೂರ್ತಿ ಹೆಸರು ಪಿಚೈ ಸುಂದರಾಜನ್, ಜನಪ್ರಿಯ ಹೆಸರು ಸುಂದರ್ ಪಿಚೈ.
* 2004ರಲ್ಲಿ ಗೂಗಲ್ ಸೇರಿದ ಸುಂದರ್ ಅವರು ಮೊದಲಿಗೆ ಪ್ರಾಡೆಕ್ಟ್ ಹಾಗೂ ಇನ್ನೋವೇಷನ್ ಅಧಿಕಾರಿಯಾಗಿದ್ದರು.
* ಪೆನ್ನಿಸಿಲ್ವೆನಿಯಾದ ವಿಶ್ವವಿದ್ಯಾಲಯದಿಂದ ಸೈಬಲ್ ಸ್ಕಾಲರ್ ಎನಿಸಿಕೊಂಡಿದ್ದಾರೆ.
* ಖರಗ್ ಪುರದ ಐಐಟಿಯಿಂದ ಮೆಟರ್ಲರ್ಜಿ ವಿಷಯದಲ್ಲಿ ಪದವಿ ಪಡೆದುಕೊಂಡ ಪಿಚೈ ಅವರು ಆ ಬ್ಯಾಚಿನ ಬೆಳ್ಳಿ ಪದಕ ವಿಜೇತರಾಗಿದ್ದಾರೆ.
* ಅಮೆರಿಕದ ವಾರ್ಟನ್ ವಿಶ್ವವಿದ್ಯಾಲಯ ಹಾಗೂ ಸ್ಟಾನ್ ಫರ್ಡ್ ವಿಶ್ವವಿದ್ಯಾಲಯಿಂದ ಕ್ರಮವಾಗಿ ಎಂಬಿಎ ಹಾಗೂ ಎಂಎಸ್ ಪಡೆದುಕೊಂಡಿದ್ದಾರೆ.
* ಸದ್ಯ ಗೂಗಲ್ ನ ಆಪ್ಸ್, ಕ್ರೋಮ್ ಹಾಗೂ ಆಂಡ್ರಾಯ್ಡ್ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.
* ಗೂಗಲ್ ಡ್ರೈವ್, ಜೀಮೇಲ್ ಅಪ್ಲಿಕೇಷನ್, ಗೂಗಲ್ ವಿಡಿಯೋ ಕೊಡೆಕ್ ಎಲ್ಲದರ ಸೃಷ್ಟಿಗೆ ಬಹುತೇಕ ಸುಂದರ್ ಪಿಚೈ ಅವರೇ ಕಾರಣ.
* ಆದರೆ, ಪಿಚೈ ಅವರನ್ನು ಗೂಗಲ್ ನ ಕ್ರೋಮ್ ಆಪರೇಟಿಂಗ್ ಸಿಸ್ಟಮ್ ಹಾಗೂ ಆಂಡ್ರಾಯ್ಡ್ ಅಪ್ಲಿಕೇಷನ್ ನಿರ್ಮಾತೃವಾಗೇ ಗುರುತಿಸಲಾಗಿದೆ.
* ಟ್ವಿಟ್ಟರ್ ಸಂಸ್ಥೆ 2011ರಲ್ಲಿ ಪಿಚೈ ಅವರನ್ನು ತಮ್ಮ ಸಂಸ್ಥೆಗೆ ಸೇರಿಸಿಕೊಳ್ಳಲು ಯತ್ನಿಸಿತ್ತು. ಅದರೆ, ಗೂಗಲ್ ಅವರಿಗೆ 50 ಮಿಲಿಯನ್ ಡಾಲರ್ ಹೆಚ್ಚಿಗೆ ಮೊತ್ತ ನೀಡಿ ಗೂಗಲ್ ನಲ್ಲೇ ಉಳಿಸಿಕೊಂಡಿತ್ತು.
( ಒನ್ ಇಂಡಿಯಾ ಸುದ್ದಿ)












Click it and Unblock the Notifications