ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇವಾ ವಲಯದ ಮೇಲೆ ಎಫ್ ಡಿಐ ಹೂಡಿಕೆ ಗಣನೀಯ ಇಳಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್. 04: ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಸೇರಿದಂತೆ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ವಿಶೇಷ ಸವಲತ್ತು ನೀಡಿದ್ದರೂ ದೇಶದ ಸೇವಾ ವಲಯದ ಮೇಲೆ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಪ್ರಮಾಣ ಶೇ 14ರಷ್ಟು ಕಡಿಮೆಯಾಗಿದೆ.

2014-15ನೇ ಹಣಕಾಸು ವರ್ಷದ ಏಪ್ರಿಲ್‌-ಜೂನ್ ಅವಧಿಯಲ್ಲಿ 4,421 ಕೋಟಿ ರು. ವಿದೇಶಿ ಬಂಡವಾಳ ಹರಿದು ಬಂದಿತ್ತು. ಆದರೆ ಈ ಬಾರಿ ಇದೇ ಅವಧಿಯಲ್ಲಿ 4,036 ಕೋಟಿ ರು. ಆಗಿದೆ ಎಂದು ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ (ಡಿಐಪಿಪಿ) ಅಂಕಿ-ಅಂಶ ನೀಡಿದೆ.[ಮೇಕ್ ಇನ್ ಇಂಡಿಯಾ ಲೋಗೋ ಕದ್ದಿದ್ದಲ್ಲ: ಮೋದಿ ಸರ್ಕಾರ]

fdi

ಬ್ಯಾಂಕಿಂಗ್‌, ವಿಮೆ, ಹೊರಗುತ್ತಿಗೆ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಗಳನ್ನು ಸೇವಾ ವಲಯ ಒಳಗೊಂಡಿದೆ. ಸೇವಾ ವಲಯ ದೇಶದ ಒಟ್ಟು ಜಿಡಿಪಿ ಪ್ರಗತಿಯಲ್ಲಿ ಶೇ. 60ರಷ್ಟು ಕೊಡುಗೆ ನೀಡುತ್ತಿವೆ. ಜೆಡಿಪಿ ದರ ಸಹ ಇಳಿಮುಖವಾಗುತ್ತಿದ್ದು ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.

ಇದರೊಂದಿಗೆ ನಿರ್ಮಾಣ, ದೂರಸಂಪರ್ಕ ಮತ್ತು ಫಾರ್ಮಾ ವಲಯದಲ್ಲಿಯೂ ಎಫ್‌ಡಿಐ ಇಳಿಕೆಯಾಗಿದೆ. ಆದರೆ ಕಂಪ್ಯೂಟರ್, ಪಾದರಕ್ಷೆ, ಹಾರ್ಡ್‌ವೇರ್‌, ಟ್ರೇಡಿಂಗ್‌, ಆಟೊಮೊಬೈಲ್‌ ಮತ್ತು ಇಂಧನ ವಲಯಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ. ಷೇರು ಮಾರುಕಟ್ಟೆಯಲ್ಲಿನ ಏರಿಳಿತ ಮತ್ತು ಕೆಲ ಕಂಪನಿಗಳ ತ್ರೈಮಾಸಿಕ ವರದಿಯಲ್ಲಿ ಕಂಡು ಬಂದ ನಷ್ಟ ವಿದೇಶಿ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.

English summary
Foreign Direct Investment (FDI) in services sector witnessed about 14 per cent decline in the first quarter of the current financial year. Other sectors that recorded decline in foreign investment during the first three months of the fiscal include construction development, telecommunication, pharmaceuticals and metallurgical industries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X