ಫೇಸ್ ಬುಕ್ ಇಂಡಿಯಾದಿಂದ ಹೊಸ ಎಂಡಿಗಾಗಿ ಹುಡುಕಾಟ
ಬೆಂಗಳೂರು, ಅಕ್ಟೋಬರ್ 10: ಫೇಸ್ ಬುಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಉಮಂಗ್ ಬೇಡಿ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಈ ಬಗ್ಗೆ ಫೇಸ್ ಬುಕ್ ಅಧಿಕೃತ ಪ್ರಕಟಣೆಯನ್ನು ಮಂಗಳವಾರ ಹೊರಡಿಸಿದ್ದು ಹೊಸ ಎಂಡಿಯ ಹುಡುಕಾಟದಲ್ಲಿ ತೊಡಗಿದೆ.
'ಉಮಂಗ್ ಬೇಡಿ ಅವರು ನಮ್ಮ ಸಂಸ್ಥೆ ತೊರೆಯುತ್ತಿದ್ದಾರೆ. ಸಂಸ್ಥೆಯಲ್ಲಿ ಅವರು ಕಾರ್ಯನಿರ್ವಹಿಸಿದ ಅವಧಿ ತೃಪ್ತಿಕರವಾಗಿದ್ದು, ಬಲಿಷ್ಠವಾದ ತಂಡವೊಂದನ್ನು ಕಟ್ಟಿಕೊಟ್ಟಿದ್ದಾರೆ. ಅವರಿಗೆ ಶುಭ ಹಾರೈಸುತ್ತೇವೆ' ಎಂದು ಫೇಸ್ ಬುಕ್ ಹೇಳಿದೆ.

ಸಂದೀಪ್ ಭೂಷಣ್ ಅವರು ಮಧ್ಯಂತರ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯುಕ್ತರಾಗಿದ್ದಾರೆ. 2016ರಲ್ಲಿ ಕೃತಿಕಾ ರೆಡ್ಡಿ ಅವರ ಬದಲಿಗೆ ಫೇಸ್ ಬುಕ್ ನ ಜವಾಬ್ದಾರಿ ಹೊತ್ತುಕೊಂಡಿದ್ದ ಬೇಡಿ ಅವರು ಸಂಸ್ಥೆಯ ವಿಸ್ತರಣೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು.












Click it and Unblock the Notifications