6.3 ಲಕ್ಷ ಪಿಂಚಣಿದಾರರಿಗೆ ನೆಮ್ಮದಿ ಸುದ್ದಿ ಕೊಟ್ಟ EPFO

ನವದೆಹಲಿ, ಏಪ್ರಿಲ್ 29: ಪಿಂಚಣಿದಾರರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ ಒ) ಶುಭ ಸುದ್ದಿ ನೀಡಿದೆ. ಮೇ 1ರಿಂದ ಮುಂಗಡ ಮೊತ್ತ (Restored Pension)ವನ್ನು ನೀಡುವುದಾಗಿ ಘೋಷಿಸಿದೆ.

ಒಂದೇ ಕಂತಿನಲ್ಲಿ ಪಿಂಚಣಿ ಮೊತ್ತವನ್ನು ನೀಡಲಾಗುತ್ತಿದ್ದು, 15 ವರ್ಷಗಳ ಬಳೀಕ್ ಪೂರ್ಣ ಪ್ರಮಾಣದಲ್ಲಿ ಪ್ರತಿ ತಿಂಗಳ ಪಿಂಚಣಿ ಪಡೆದುಕೊಳ್ಳಬಹುದು.

ಪಿಂಚಣಿಯ ಒಂದು ಭಾಗವನ್ನು ಪಿಂಚಣಿದಾರರಿಗೆ ಮುಂಚಿತವಾಗಿ ನೀಡಲಾಗುತ್ತದೆ. ನಂತರ ತಿಂಗಳ ಪಿಂಚಣಿಯ ಮೂರನೇ ಒಂದು ಭಾಗವನ್ನು ಮುಂದಿನ 15 ವರ್ಷಗಳವರೆಗೆ ಕಡಿತಗೊಳಿಸಲಾಗುತ್ತದೆ. 15 ವರ್ಷಗಳ ನಂತರ ಪಿಂಚಣಿದಾರರು ಪೂರ್ಣ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

EPFO To Distribute Restored Pension From May

ಮುಂಗಡ ಪಿಂಚಣಿಯ ಸೌಲಭ್ಯ ಬಳಸುವ ಹಾಗೂ ನಿವೃತ್ತಿಯ ಸಮಯದಲ್ಲಿ ತಮ್ಮ ಪಿಂಚಣಿಯ ಸ್ವಲ್ಪ ಭಾಗವನ್ನು ಕಡಿಮೆ ಮಾಡಿದವರಿಗೆ ಮಾತ್ರ ಈ ಹೊಸ ನಿಯಮ ಅನ್ವಯವಾಗಲಿದೆ. 2008ರ ಸೆಪ್ಟೆಂಬರ್ 26ಕ್ಕೂ ಮುನ್ನ ನಿವೃತ್ತರಾದವರಿಗೆ ಲಾಭ ಸಿಗಲಿದೆ.

ಹಾಲಿ ನಿಯಮದಂತೆ ಇಪಿಎಸ್ -95 ಸದಸ್ಯರಿಗೆ ಪಿಂಚಣಿಯ ಮೂರನೇ ಒಂದು ಭಾಗವನ್ನು 10 ವರ್ಷಗಳವರೆಗೆ ಹಿಂಪಡೆಯಲು ಅವಕಾಶವಿತ್ತು. ಇದನ್ನು ಈಗ 15 ವರ್ಷಗಳವರೆಗೆ ವಿಸ್ತರಿಸಲಾಗಿದೆ. ಇದರ ಲಾಭ 6.3 ಲಕ್ಷ ಪಿಂಚಣಿದಾರರಿಗೆ ಸಿಗಲಿದೆ.

ಜನವರಿ 1, 2004 ಹಾಗೂ ಅದಕ್ಕಿಂತ ಮೊದಲು ಕೇಂದ್ರ ಸರ್ಕಾರಿ ನೌಕರಿಗೆ ನೇಮಕವಾಗಿರುವ ಅಥವಾ ಆ ದಿನಾಂಕದ ನಂತರ ಹುದ್ದೆಗೆ ಸೇರಿರುವ ನೌಕರರಿಗೆ ಹಳೆ ಪಿಂಚಣಿ ಯೋಜನೆ ಲಾಭ ಸಿಗಲಿದೆ. 01.01.2004 ನಂತರದ ಅಪಾಯಿಂಟ್ಮೆಂಟ್ ಲೆಟರ್ ಪಡೆದವರಿಗೂ ಲಾಭ ಸಿಗಲಿದೆ ಎಂದು ಮೋದಿ ಸರ್ಕಾರ ಇತ್ತೀಚೆಗೆ ಘೋಷಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+