End of Season Sale ಗಾಗಿ 5 ಸಾವಿರ ಮಂದಿಗೆ ಉದ್ಯೋಗ
ಬೆಂಗಳೂರು, ಜೂನ್ 19: ಫ್ಲಿಪ್ ಕಾರ್ಟ್ ಒಡೆತನ ಬೆಂಗಳೂರು ಮೂಲದ ಮಿಂತ್ರಾ ಸಂಸ್ಥೆ ಕೊವಿಡ್ 19 ಬಿಕ್ಕಟ್ಟಿನ ನಡುವೆ 5 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುತ್ತಿದೆ. End of Reason Sale ಗಾಗಿ 5 ಸಾವಿರ ಮಂದಿ ನೇಮಿಸಿಕೊಂಡಿರುವುದಾಗಿ ಸಂಸ್ಥೆ ಪ್ರಕಟಿಸಿದೆ.
Recommended Video
ಫ್ಯೂಚರ್ ಗ್ರೂಪ್, ಸ್ನಾಪ್ ಡೀಲ್, ಅಬೋಫ್ ಗೆ ಪೈಪೋಟಿ ನೀಡಲು ಜಬಾಂಗ್ ಸಂಸ್ಥೆಯನ್ನು ಜುಲೈ 2016ರಲ್ಲಿ ಫ್ಲಿಪ್ ಕಾರ್ಟ್ ಒಡೆತನದ ಮಿಂತ್ರಾ ಸಂಸ್ಥೆಯು 70 ಮಿಲಿಯನ್ ಡಾಲರ್ ಮೌಲ್ಯಕ್ಕೆ ಖರೀದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಆನ್ ಲೈನ್ ಫ್ಯಾಷನ್ ಲೈಫ್ ಸ್ಟೈಲ್ ಸ್ಟೋರ್ ಮಿಂತ್ರಾ ಈಗ 12ನೇ ಆವೃತ್ತಿಯ ಎಂಡ್ ಆಫ್ ರೀಸನ್ ಸೇಲ್ ಗಾಗಿ ಸಿದ್ಧತೆ ನಡೆಸಿದೆ ಜೂನ್ 19ರಿಂದ ಜೂನ್ 22ರ ತನಕ ಈ ರಿಯಾಯಿತಿ ದರದ ಮಾರಾಟ ನಡೆಯಲಿದೆ. ಆದರೆ, ಈ ಬಾರಿ ಮಿಂತ್ರಾದ ಸಿಬ್ಬಂದಿ ಎಲ್ಲರೂ ವರ್ಕ್ ಫ್ರಂ ಹೋಂ ಮೂಲಕ ಕಾರ್ಯ ನಿರ್ವಹಿಸುತ್ತಿರುವುದು ವಿಶೇಷ. ವರ್ಚ್ಯುವಲ್ ಸೇಲ್, ಹೆಚ್ಚುವರಿ ಸಿಬ್ಬಂದಿ ಈ ಬಾರಿ ಸಾಧ್ಯವಾಗಿದೆ ಎಂದು ಸಿಇಒ ಅಮರ್ ನಗರಂ ತಿಳಿಸಿದಾರೆ.

ಸಿಬ್ಬಂದಿಗಳನ್ನು ಹುರಿದುಂಬಿಸಲು ವರ್ಚುವಲ್ ಟೌನ್ ಹಾಲ್, ಬಂದ್ ಲಗೋರಿ ಮುಂತಾದ ಕಾರ್ಯಕ್ರಮ ರೂಪಿಸಿ ವರ್ಚುವಲ್ 3ಡಿ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.












Click it and Unblock the Notifications