ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಬಸಿ ಗ್ರೂಪ್‍ನಿಂದ ಶಾಲೆಗಳಿಗೆ ಮೂಲಸೌಕರ್ಯ ನೆರವು

|
Google Oneindia Kannada News

ಬೆಂಗಳೂರು, ನವೆಂಬರ್ 12: ಬೆಂಗಳೂರಿನಲ್ಲಿನ ಸರ್ಕಾರಿ ಶಾಲೆಗಳ ಸರ್ವತೋಮುಖ ಸುಧಾರಣೆಗಾಗಿ ಎಂಬಸಿ ಗ್ರೂಪ್, ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಸರ್ಕಾರದ 20 ಶಾಲೆಗಳಿಗೆ ಶೈಕ್ಷಣಿಕ ಸಂಪನ್ಮೂಲ, ಮೂಲಸೌಕರ್ಯಗಳ ಬೆಂಬಲ ಮತ್ತು ಸಮಗ್ರ ಸ್ವರೂಪದ ಆರೋಗ್ಯ ಕಾರ್ಯಕ್ರಮಗಳಿಗೆ ಎಂಬಸಿ ಗ್ರೂಪ್, ಎರಡು ವರ್ಷಗಳವರೆಗೆ 15 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುವುದನ್ನು ಈ ಒಪ್ಪಂದವು ಒಳಗೊಂಡಿದೆ.

2018ರಲ್ಲಿ ಮಾಡಿಕೊಂಡಿದ್ದ ಈ ಹಿಂದಿನ ಒಪ್ಪಂದವನ್ನು ನವೀಕರಿಸಿ, 2020ರ ಅಕ್ಟೋಬರ್ ನಿಂದ 2022ರ ಸೆಪ್ಟೆಂಬರ್ ವರೆಗಿನ ಮುಂದಿನ ಎರಡು ವರ್ಷಗಳ ಅವಧಿಗೆ ಈ ಒಪ್ಪಂದ ಜಾರಿಯಲ್ಲಿ ಇರಲಿದೆ.

Embassy Group To Provide Educational And Infrastructural Support To Government Schools

ಪಾಲುದಾರಿಕೆ ನವೀಕರಿಸುವುದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ, ''ಅವಕಾಶ ಮತ್ತು ಸೌಲಭ್ಯ ವಂಚಿತ ಮಕ್ಕಳಿಗೆ ಪಕ್ಷಪಾತರಹಿತ ನ್ಯಾಯೋಚಿತ ಶಿಕ್ಷಣ ಒದಗಿಸಲು ಕಾರ್ಪೊರೇಟ್ ಕಂಪನಿ ಎಂಬಸಿ ಗ್ರೂಪ್ ಸರ್ಕಾರದ ಜತೆ ಪಾಲುದಾರಿಕೆಗೆ ಮುಂದಾಗಿರುವುದು ನಿಜಕ್ಕೂ ಹೃದಯ ತುಂಬಿ ಬರುವ ಸಂಗತಿಯಾಗಿದೆ'' ಎಂದು ಬಣ್ಣಿಸಿದ್ದಾರೆ.

Embassy Group To Provide Educational And Infrastructural Support To Government Schools

Recommended Video

BJP ನ ಒಣಗಿದ ಮರಕ್ಕೆ ಹೋಲಿಸಿದ Digvijay singh!! | Oneindia Kannada

ಒಪ್ಪಂದದ ಅನ್ವಯ, ಎಂಬಸಿ ಗ್ರೂಪ್, ವಾರ್ಷಿಕ ಶೈಕ್ಷಣಿಕ ಕಿಟ್ ವಿತರಣೆ, ಗಣಿತ, ಕ್ರೀಡೆ, ಜೀವನ ಕೌಶಲ, ಇ-ತರಗತಿ, ವಿದ್ಯಾರ್ಥಿ ವೇತನ, ಶೈಕ್ಷಣಿಕ ಪ್ರವಾಸ, ಶಾಲೆ ನಂತರದ ಶೈಕ್ಷಣಿಕ ಬೆಂಬಲ, ಹಳೆ ವಿದ್ಯಾರ್ಥಿಗಳ ಕಾರ್ಯಕ್ರಮ, ಆರ್ಟ್ ಮತ್ತು ಕ್ರಾಫ್ಟ್ ಒಳಗೊಂಡ ಸಮಗ್ರ ಸ್ವರೂಪದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲಿದೆ. ಈ ದತ್ತು ತೆಗೆದುಕೊಂಡಿರುವ ಸರ್ಕಾರಿ ಶಾಲೆಗಳಿಗೆ ಹೊಸ ಶಾಲಾ ಕಟ್ಟಡ, ಕಟ್ಟಡ ದುರಸ್ತಿ, ನವೀಕರಣ ಮತ್ತು ದಿನನಿತ್ಯದ ನಿರ್ವಹಣೆಯನ್ನೂ ನೋಡಿಕೊಳ್ಳಲಿದೆ.

Embassy Group To Provide Educational And Infrastructural Support To Government Schools

ಕೋವಿಡ್-19 ಪಿಡುಗಿನ ಸಂದರ್ಭದಲ್ಲಿ ಎಂಬಸಿ ಗ್ರೂಪ್, ತಾನು ದತ್ತು ತೆಗೆದುಕೊಂಡಿರುವ ಸರ್ಕಾರಿ ಶಾಲೆಗಳಲ್ಲಿ ಸರಣಿಯೋಪಾದಿಯಲ್ಲಿ ಪರಿಹಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಎಂಬಸಿ ಗ್ರೂಪ್ ಮತ್ತು ಅದರ ಪಾಲುದಾರರು ಬೆಂಗಳೂರಿನಲ್ಲಿನ 34 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ 8,400 ಆರೋಗ್ಯ ಕಿಟ್‍ಗಳನ್ನು ವಿತರಿಸಿದ್ದರು. ನಿಯಮಿತ ಆರೋಗ್ಯ ಕಿಟ್‍ಗೆ ಹೆಚ್ಚುವರಿಯಾಗಿ ಮರು ಬಳಕೆಯ ಮುಖಗವಸುಗಳು, ಕೋವಿಡ್-19 ಹಾಗೂ ಇತರ ಸಾಮಾನ್ಯ ಸ್ವರೂಪದ ಕಾಯಿಲೆಗಳ ವಿರುದ್ಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಮಹತ್ವ ತಿಳಿಹೇಳುವ ಭಿತ್ತಿಪತ್ರಗಳನ್ನೂ ವಿತರಿಸಲಾಗಿತ್ತು. ಲಾಕ್‍ಡೌನ್ ಸಮಯದಿಂದ ಹಿಡಿದು ಇಲ್ಲಿಯವರೆಗೆ ಎಂಬಸಿ ಗ್ರೂಪ್, 3.77 ಲಕ್ಷಕ್ಕೂ ಹೆಚ್ಚು ಊಟದಷ್ಟು ದವಸ ಧಾನ್ಯಗಳ ಪಡಿತರವನ್ನು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ವಿತರಿಸಿದೆ.

English summary
Embassy Group has renewed a Memorandum of Understanding with the Government of Karnataka, Department of Education for the all-around improvement of Government Schools in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X