ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲೋನ್ ಮಸ್ಕ್ V/s ಟ್ವಿಟ್ಟರ್: ಟೆಸ್ಲಾ ಸಿಇಒ ವಿರುದ್ಧ ಫೆಡರಲ್ ತನಿಖೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 14: ಟ್ವಿಟ್ಟರ್‌ನ್ನು ಸ್ವಾಧೀನ ಮಾಡಿಕೊಳ್ಳುವ 44 ಬಿಲಿಯನ್ ಯುಎಸ್ ಡಾಲರ್ ಒಪ್ಪಂದದ ಕುರಿತು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಫೆಡರಲ್ ತನಿಖೆಯನ್ನು ಎದುರಿಸುತ್ತಿದ್ದಾರೆ ಎಂದು ಮೈಕ್ರೋಬ್ಲಾಗಿಂಗ್ ಸೈಟ್ ಗುರುವಾರ ನ್ಯಾಯಾಲಯದ ದಾಖಲೆಯಲ್ಲಿ ಉಲ್ಲೇಖಿಸಿದೆ.

ಟ್ವಿಟ್ಟರ್‌ನ ಸ್ವಾಧೀನಕ್ಕೆ ಸಂಬಂಧಿಸಿದಂತೆ ಮಸ್ಕ್ ನಡವಳಿಕೆಗಾಗಿ ಫೆಡರಲ್ ಅಧಿಕಾರಿಗಳು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾ ಕಂಪನಿಯ ಪರ ವಕೀಲರು ಡೆಲವೇರ್‌ನಲ್ಲಿ ನ್ಯಾಯಾಲಯದ ದಾಖಲೆಯಲ್ಲಿ ತಿಳಿಸಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಟ್ವಿಟರ್ ಖರೀದಿ ಒಪ್ಪಂದ ಪ್ರಕ್ರಿಯೆ ಮುಂದುವರಿಸಲು ಎಲಾನ್ ಮಸ್ಕ್ ನಿರ್ಧಾರಟ್ವಿಟರ್ ಖರೀದಿ ಒಪ್ಪಂದ ಪ್ರಕ್ರಿಯೆ ಮುಂದುವರಿಸಲು ಎಲಾನ್ ಮಸ್ಕ್ ನಿರ್ಧಾರ

"ಟ್ವಿಟ್ಟರ್ ಸ್ವಾಧೀನಕ್ಕೆ ಸಂಬಂಧಿಸಿದಂತೆ ಎಲೋನ್ ಮಸ್ಕ್ ಪ್ರಸ್ತುತ ಫೆಡರಲ್ ಅಧಿಕಾರಿಗಳಿಂದ ತನಿಖೆ ಎದುರಿಸುತ್ತಿದ್ದಾರೆ," ಎಂದು ಪಾಟರ್ ಆಂಡರ್ಸನ್ ಕರೂನ್ ಎಲ್ಎಲ್ಪಿ ವಕೀಲರು ಅಕ್ಟೋಬರ್ 6ರಂದು ದಾಖಲೆಯಲ್ಲಿ ಬರೆದಿದ್ದಾರೆ.

Elon Musk Vs Twitter: Musk under federal investigation over 44 billion dollar deal

ಕೋರ್ಟ್ ಎದುರು ಟ್ವಿಟ್ಟರ್ ವಕೀಲರ ವಾದ:

ಟ್ವಿಟ್ಟರ್ ಅನ್ನು ಪ್ರತಿನಿಧಿಸುವ ವಕೀಲರು, ಕೋರ್ಟ್ ಎದುರು ಹಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಹೀಗೆ ಚೆಂಡನ್ನು ಮುಚ್ಚಿಡುವ ಆಟವನ್ನೆಲ್ಲ ಕೊನೆಗೊಳಿಸಬೇಕು. ಈ ದಾವೆಗೆ ಸಂಬಂಧಿಸಿದ ವಿಷಯಗಳ ಮೇಲೆ ಪ್ರಮುಖ ದಾಖಲೆಗಳನ್ನು ಹೊಂದಿರುವುದಾಗಿ ಟ್ವಿಟರ್‌ನ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿಂದೆ ಟ್ವಿಟ್ಟರ್ ಕಂಪನಿಯು ಫೆಡರಲ್ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸುವುದಕ್ಕೆ ಮಸ್ಕ್ ಪರ ವಕೀಲರಿಗೆ ತಿಂಗಳುಗಳಟ್ಟಲೇ ಮನವಿ ಮಾಡಿಕೊಳ್ಳಲಾಗಿತ್ತು, ಆದರೆ ಈ ಪ್ರಯತ್ನದಲ್ಲಿ ಅವರು ವಿಫಲರಾಗಿದ್ದು ಈಗ ತನಿಖೆ ಎದುರಿಸಬೇಕಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ಮಸ್ಕ್ ಅಧಿಕಾರಿಗಳಿಗೆ ನೀಡಿರುವ ದಾಖಲೆಗಳನ್ನು ವಾಪಸ್ ಪಡೆಯುವುದಕ್ಕಾಗಿ ಕಂಪನಿಯು ನ್ಯಾಯಾಲಯದ ಎದುರು ಮನವಿ ಮಾಡಿಕೊಂಡಿದೆ.

ಟೆಸ್ಲಾ ಸಿಇಒ ಮತ್ತು ಟ್ವಿಟ್ಟರ್ ಖರೀದಿ ಹಿನ್ನೆಲೆ:

ಟೆಸ್ಲಾ ಸಿಇಒ ಏಪ್ರಿಲ್‌ನಲ್ಲಿ ಟ್ವಿಟ್ಟರ್ ಅನ್ನು ಖರೀದಿಸಲು ಒಪ್ಪಿಕೊಂಡರು. ಆದರೆ ಜುಲೈನಲ್ಲಿ, ನಕಲಿ ಮತ್ತು ಸ್ಪ್ಯಾಮ್ ಖಾತೆಗಳ ಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಸ್ಕ್ ಅಚ್ಚರಿಯ ಒಪ್ಪಂದವನ್ನು ಮುಕ್ತಾಯಗೊಳಿಸುತ್ತಿರುವುದಾಗಿ ಹೇಳಿದರು. ಆದಾಗ್ಯೂ, ಕಂಪನಿಯು ಇದನ್ನು ತಿರಸ್ಕರಿಸಿತು ಮತ್ತು ಒಪ್ಪಂದವನ್ನು ಜಾರಿಗೆ ತರಲು ಒತ್ತಾಯಿಸುವ ಪ್ರಯತ್ನಿಸಿತು.

ಎರಡೂ ಕಡೆಯಿಂದ ಅಕ್ಟೋಬರ್ 17ರಂದು ಡೆಲವೇರ್ ಚಾನ್ಸೆರಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹೋಗಲು ನಿರ್ಧರಿಸಿದ್ದರು, ಆದರೆ ಕಳೆದ ವಾರ ಮಸ್ಕ್ ಮತ್ತೆ ಕೋರ್ಸ್ ಅನ್ನು ಬದಲಾಯಿಸಿದರು. ಒಂದು ಷೇರಿಗೆ 54.20 ಡಾಲರ್ ಮೌಲ್ಯದಂತೆ ಒಪ್ಪಂದದ ಬೆಲೆಯಲ್ಲಿ ಟ್ವಿಟ್ಟರ್ ಅನ್ನು ಖರೀದಿಸುವುದಾಗಿ ಹೇಳಿದ್ದರು.

ಎಲೋನ್ ಮಸ್ಕ್ ಮಾಡಿದ್ದ ಟ್ವೀಟ್:

ಗುರುವಾರ 'ಬರ್ನ್ಟ್ ಹೇರ್' ಎಂದು ಹೆಸರಿಸಲಾದ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿದ ಎಲೋನ್ ಮಸ್ಕ್, ತಮ್ಮ 100 ಡಾಲರ್ ಸುಗಂಧ ದ್ರವ್ಯವನ್ನು ಖರೀದಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಇದರಿಂದ ಟ್ವಿಟ್ಟರ್ ಸ್ವಾಧೀನಕ್ಕೆ ಹಣವನ್ನು ನೀಡಬಹುದು. "ದಯವಿಟ್ಟು ನಮ್ಮ ಕಂಪನಿಯ ಸುಗಂಧ ದ್ರವ್ಯವನ್ನು ಖರೀದಿಸಿ, ಇದರಿಂದ ನಾನು ಟ್ವಿಟರ್ ಅನ್ನು ಖರೀದಿಸಬಹುದು" ಎಂದು ಮಸ್ಕ್ ಟ್ವೀಟ್ ಅನ್ನು ಮಾಡಿದ್ದರು.

English summary
Elon Musk Vs Twitter: Musk under federal investigation over 44 billion dollar deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X