ಕಾಗೆ ಹಾರಿಸಿದ್ದಲ್ಲ: ಟ್ವಿಟ್ಟರ್ ಖರೀದಿಗೆ ಮಸ್ಕ್ ಗಂಭೀರ ಯತ್ನ

ನವದೆಹಲಿ, ಏ. 22: ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾಗಿರುವ ಎಲಾನ್ ಮಸ್ಕ್ (Elon Musk) ಅವರು ಟ್ವಿಟ್ಟರ್ ಖರೀದಿ ಮಾಡುವ ಪ್ರಸ್ತಾಪವನ್ನ ಅದೇ ಸೋಷಿಯಲ್ ಮೀಡಿಯಾದ ವೇದಿಕೆಯಲ್ಲಿ ಮುಂದಿಟ್ಟಾಗ ಎಲ್ಲರೂ ಚಕಿತರಾಗಿದ್ದರು. ಅದೇ ವೇಳೆ ಇದು ಮಸ್ಕ್ ಹಾಗೆ ಸುಮ್ಮನೆ ತಮಾಷೆಗೆ ಹೇಳಿದ್ದಿರಬಹುದು ಎಂದು ಕೆಲವರು ಭಾವಿಸಿದ್ದರು. ಮಸ್ಕ್ ಮಾತನ್ನ ಸೀರಿಯಸ್ಸಾಗಿ ತೆಗೆದುಕೊಳ್ಳಬೇಕಿಲ್ಲ. ಅವರು ಖರೀದಿ ಮಾಡುತ್ತೇನೆ ಎಂದರೆ ಸುಮ್ಮನೆ ಗೊಂದಲ ಸೃಷ್ಟಿಸುವ ಉದ್ದೇಶ ಇರುತ್ತದೆಯೇ ಹೊರತು ಖರೀದಿಸುವ ಮನಸು ಇರುವುದಿಲ್ಲ ಎಂಬ ಅನಿಸಿಕೆಗಳು ವ್ಯಕ್ತವಾಗಿದ್ದುಂಟು. ಇವೆಲ್ಲಕ್ಕೂ ಉತ್ತರ ನೀಡಲೋ ಎಂಬಂತೆ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿಗೆ 46.5 ಬಿಲಿಯನ್ ಡಾಲರ್ ಹಣವನ್ನು ಹೊಂದಿಸಿ ಸಿದ್ಧ ಮಾಡಿಟ್ಟುಕೊಂಡು ಆ ಕಂಪನಿಯ ಷೇರುದಾರರ ಬಳಿ ನೇರವಾಗಿ ಆಫರ್ ಮುಂದಿಡುವ ಯೋಜನೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅಮೆರಿಕದ ಪ್ರಾಧಿಕಾರದ ಅನುಮತಿಗೆ ಅರ್ಜಿಯನ್ನೂ ಗುಜರಾಯಿಸಿದ್ದಾರೆ.

ಇಲಾನ್ ಮಸ್ಕ್ ಸುಮ್ಮನೆ ಕಲ್ಲು ಹೊಡೆಯುತ್ತಿರಬಹುದು ಎಂದು ಭಾವಿಸಿದ್ದವರಿಗೆ ಅವರು ಸೀರಿಯಸ್ಸಾಗಿರುವುದು ಖಾತ್ರಿಯಾಗಿದೆ. ಟೆಸ್ಲಾ ಸೇರಿದಂತೆ ಹಲವು ದೊಡ್ಡ ಕಂಪನಿಗಳ ಮಾಲೀಕರಾದ ಮಸ್ಕ್ ಅವರು ಟ್ವಿಟ್ಟರ್ ಖರೀದಿಗೆ ಹೂಡಬೇಕೆಂದಿರುವ 46.5 ಬಿಲಿಯನ್ ಡಾಲರ್ ಹಣದ ಪೈಕಿ 33.5 ಬಿಲಿಯನ್ ಡಾಲರ್ ಹಣವನ್ನು ತಾವೇ ಖುದ್ದಾಗಿ ಹೊಂದಿಸಿದ್ದಾರೆ. ತಮ್ಮ ಟೆಸ್ಲಾ ಕಂಪನಿಯ ಷೇರುಗಳ ಮೇಲೆ ಸಾಲ ಮಾಡಿ ಒಂದಷ್ಟು ಹಣ ಹೊಂದಿಸಿದ್ದಾರೆ. ಹಾಗೆಯೇ, ಮಾರ್ಗನ್ ಸ್ಟಾನ್ಲೀ ಎಂಬ ಖಾಸಗಿ ಹೂಡಿಕೆ ಸಂಸ್ಥೆ 13 ಬಿಲಿಯನ್ ಡಾಲರ್ ಹಣದ ಸಾಲ ಕೊಡಲು ಸಿದ್ಧವಾಗಿದೆ.

ಕುತೂಹವೆಂದರೆ ಎಲಾನ್ ಮಸ್ಕ್ ಅವರು ಈಗಲೂ ಟ್ವಿಟ್ಟರ್ ಕಂಪನಿಯ ಪ್ರಮುಖ ಷೇರುದಾರರಾಗಿದ್ದಾರೆ. ಶೇ. 9.1 ರಷ್ಟು ಪಾಲು ಹೊಂದಿರುವ ಅವರು ಎರಡನೇ ಅತಿದೊಡ್ಡ ಷೇರುದಾರರು. ಸೋಷಿಯಲ್ ಮೀಡಿಯಾ ಕಂಪನಿಯಾದ ಟ್ವಿಟ್ಟರ್‌ನ ಕೆಲ ನೀತಿಗಳ ಬಗ್ಗೆ ಎಲಾನ್ ಮಸ್ಕ್ ಅಸಮಾಧಾನ ಹೊಂದಿದ್ದು ಅದನ್ನು ಟ್ವಿಟ್ಟರ್ ವೇದಿಕೆಯಲ್ಲೇ ಹಲವು ಬಾರಿ ಟೀಕೆ ಮಾಡಿದ್ದಾರೆ. ಸ್ವತಂತ್ರ ಅಭಿಪ್ರಾಯಗಳಿಗೆ ಟ್ವಿಟ್ಟರ್‌ನಲ್ಲಿ ಸ್ವಾತಂತ್ರ್ಯ ಇಲ್ಲ. ಇದು ಬದಲಾಗಬೇಕು. ನಾನು ಟ್ವಿಟ್ಟರ್‌ನಲ್ಲಿ ಭಾರೀ ಬದಲಾವಣೆ ತರಬಲ್ಲೆ ಎಂದು ಹೇಳುತ್ತಲೇ 43 ಬಿಲಿಯನ್ ಡಾಲರ್ ಹಣ ಕೊಟ್ಟು ಖರೀದಿಸುವ ಭರ್ಜರಿ ಆಫರ್ ಕೊಟ್ಟಿದ್ದರು.

Elon Musk Serious in His Offer of Buying Twitter

ಮಸ್ಕ್ ಆಫರ್ ಕೊಟ್ಟರೂ ಷೇರುಪೇಟೆಯಲ್ಲಿ ಟ್ವಿಟ್ಟರ್ ಷೇರುಮೌಲ್ಯ ಶೇ. 1ರಷ್ಟೂ ಹೆಚ್ಚಾಗಲಿಲ್ಲ. ಆಗಲೇ ಜನರು ಮಸ್ಕ್ ಆಫರ್ ಅನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಖಾತ್ರಿಯಾಗಿತ್ತು. ಈಗ ಟ್ವಿಟ್ಟರ್ ಖರೀದಿಗೆ ಮಸ್ಕ್ ಗಂಭೀರರಾಗಿದ್ದಾರೆ ಎಂಬುದು ಖಾತ್ರಿ ಆಗುತ್ತಿದ್ದಂತೆಯೇ ಷೇರುಮೌಲ್ಯ ಶೇ. 4ಕ್ಕಿಂತ ಹೆಚ್ಚಾಗಿದೆ.

ಇದೀಗ ಮಸ್ಕ್ ಮುಂದಿಟ್ಟಿರುವ ಆಫರ್ ಅನ್ನು ಟ್ವಿಟ್ಟರ್ ಗಂಭೀರವಾಗಿ ಪರಿಗಣಿಸಿ ಒಂದು ನಿರ್ಧಾರಕ್ಕೆ ಬರಲೇಬೇಕಿದೆ. ಹೌದು ಅಥವಾ ಇಲ್ಲ ಎಂದು ಸ್ಪಷ್ಟಪಡಿಸಲೇಬೇಕಿದೆ.

Elon Musk Serious in His Offer of Buying Twitter

"ಈ ಹಿಂದೆ ತಿಳಿಸಿದ ಹಾಗೆ ಮಿಸ್ಟರ್ ಮಸ್ಕ್ ಅವರ ಆಫರ್ ಅನ್ನು ಬಹಳ ವಿಸ್ತೃತವಾಗಿ ಪರಿಶೀಲಿಸಲು ಸಂಸ್ಥೆ ಬದ್ಧವಾಗಿದೆ. ಕಂಪನಿ ಮತ್ತು ಷೇರುದಾರರ ಹಿತಾಸಕ್ತಿ ದೃಷ್ಟಿಯಿಂದ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ" ಎಂದು ಟ್ವಿಟ್ಟರ್‌ನ ಪ್ರತಿನಿಧಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Elon Musk Serious in His Offer of Buying Twitter

ಟ್ವಿಟ್ಟರ್ ಅನ್ನು ಖಾಸಗಿಗೆ ತರುವ ಮಸ್ಕ್ ಉದ್ದೇಶ:
ಟ್ವಿಟ್ಟರ್‌ನಲ್ಲಿ ಅಗತ್ಯ ಬದಲಾವಣೆಗಳನ್ನ ತರಬೇಕೆಂದರೆ ಆ ಸಂಸ್ಥೆಯನ್ನ ಖಾಸಗಿಗೆ ತರುವ ಅವಶ್ಯಕತೆ ಇದೆ. 2013ರಿಂದಲೇ ಟ್ವಿಟ್ಟರ್ ಸ್ಟಾಕ್ ಮಾರ್ಕೆಟ್‌ನಲ್ಲಿ ಲಿಸ್ಟ್ ಆಗಿದೆ. ಆಗ 1.8 ಬಿಲಿಯನ್ ಹಣ ಹೊಂದಿಸಲು ಟ್ವಿಟ್ಟರ್ ಪಬ್ಲಿಕ್ ಲಿಸ್ಟಿಂಗ್ ಆಗಿತ್ತು. ಈಗ ಟ್ವಿಟ್ಟರ್ ಅನ್ನು ಪ್ರೈವೇಟ್ ಆಗಿ ಮಾಡಿದರೆ ಅದು ಖಾಸಗಿಯವರ ಒಡೆತನದಲ್ಲಿರುತ್ತದೆ. ಹಾಗೆಯೇ ಸ್ಟಾಕ್ ಎಕ್ಸ್‌ಚೇಂಜ್ ಪ್ರಾಧಿಕಾರದವರಿಗೆ ಅದರ ಹಣಕಾಸು ಮಾಹಿತಿ ಒಪ್ಪಿಸುವ ಅಗತ್ಯ ಇರುವುದಿಲ್ಲ. ಅಥವಾ ಅದರ ನಿಬಂಧನೆಗಳಿಗೆ ಒಳಪಡುವ ಕಟ್ಟುಪಾಡೂ ಇರುವುದಿಲ್ಲ. ಟ್ವಿಟ್ಟರ್ ಸಂಪೂರ್ಣವಾಗಿ ಖಾಸಗಿ ಸ್ವತ್ತಾಗುತ್ತದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+