'ಮಲ್ಯ ಅವರ ಪಾಸ್ ಪೋರ್ಟ್ ಮೊದ್ಲು ಕಿತ್ಕೊಳ್ಳಿ'

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 13: ಉದ್ಯಮಿ ವಿಜಯ್ ಮಲ್ಯ ಅವರಿಗೆ ಜಾರಿ ನಿರ್ದೇಶನಾಲಯದ ಕಡೆಯಿಂದ ಒಂದು ಸ್ಪಷ್ಟ ಸಂದೇಶ ಬುಧವಾರ ಸಂಜೆ ಹೊರ ಬಂದಿದೆ. ಮನಿಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ಅವರ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವಂತೆ ವಿದೇಶಾಂಗ ಸಚಿವಾಲಯಕ್ಕೆ ಜಾರಿ ನಿರ್ದೇಶನಾಲಯ ಮನವಿ ಸಲ್ಲಿಸಿದೆ.

ಸುಮಾರು 9 ಸಾವಿರ ಕೋಟಿ ರು.ಗೂ ಅಧಿಕ ಸಾಲ ಹೊತ್ತುಕೊಂಡಿರುವ ಮಲ್ಯ ಅವರಿಗೆ ಈಗ ಐಡಿಬಿಐ ಬ್ಯಾಂಕಿನ 900 ಕೋಟಿ ರು ಸಾಲ ವಂಚನೆ ಮುಳುವಾಗುವ ಲಕ್ಷಣಗಳು ಕಂಡು ಬಂದಿದೆ. [ವಿಜಯ್ ಮಲ್ಯ ವಿರುದ್ಧ ಅರೆಸ್ಟ್ ವಾರೆಂಟ್ ಗೆ ಕೋರಿಕೆ]

ಈ ಹಿಂದೆ ಅನೇಕ ಬಾರಿ ರೆಡ್ ಕಾರ್ನರ್, ಜಾಮೀನು ರಹಿತ ವಾರೆಂಟ್, ನೋಟಿಸುಗಳು ಜಾರಿಯಾದರೂ ಮಲ್ಯ ಅವರ ಪಾಸ್ ಪೋರ್ಟ್ ಜಪ್ತಿ ಮಾಡಲು ಆಗಿರಲಿಲ್ಲ. ಸದ್ಯ ವಿದೇಶದಲ್ಲಿರುವ ಮಲ್ಯ ಅವರ ಸಂಪರ್ಕ ಕೂಡಾ ಸಾಧ್ಯವಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ನೋಟಿಸ್, ಸಮನ್ಸ್ ನಿಂದ ಮಲ್ಯರನ್ನು ಕಟ್ಟಿ ಹಾಕಲು ಸಾಧ್ಯವೇ ಎಂಬ ಪ್ರಶ್ನೆ ಮತ್ತೆ ಎದ್ದಿದೆ.

ED seeks revocation of Mallya’s passport

ಜಾರಿ ನಿರ್ದೇಶನಾಲಯದ ಮನವಿ: ಪಾಸ್ ಪೋರ್ಟ್ ಕಾಯ್ದೆ 1967ರಂತೆ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಗೆ ಸೂಚನೆ ನೀಡುವಂತೆ ವಿದೇಶಾಂಗ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ.[ವಿಜಯ್ ಮಲ್ಯ ಭಾರತದಲ್ಲಿಲ್ಲ, ಲಂಡನ್ನಿಗೆ ಪರಾರಿ!]

ಪಾಸ್ ಪೋರ್ಟ್ ಕಾಯ್ದೆ 1967ರ ಸೆಕ್ಷನ್ 10 (3) ಇ ಅನ್ವಯ ಪ್ರಯಾಣಿಕರೊಬ್ಬರ ಮೇಲೆ ಕ್ರಿಮಿನಲ್ ಮೊಕದ್ದಮೆ ನಡೆಯುತ್ತಿದ್ದು, ಅವರ ವಿರುದ್ಧ ಅರೆಸ್ಟ್ ವಾರೆಂಟ್ ಗಾಗಿ ಅರ್ಜಿ ಸಲ್ಲಿಕೆಯಾಗಿದ್ದರೆ, ಅವರ ಪಾಸ್ ಪೋರ್ಟ್ ಹಾಗೂ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಏರ್ ಪೋರ್ಟ್ ನ ಅಧಿಕಾರಿಗಳು ವಶಪಡಿಸಿಕೊಳ್ಳಬಹುದು.

ಉದ್ಯಮಿ ವಿಜಯ್ ಮಲ್ಯ ಅವರು ಯಾವುದೇ ಕಾರಣಕ್ಕೂ ದೇಶ ಬಿಡಬಾರರು ಅವರ ಪಾಸ್ ಪೋರ್ಟ್ ಜಪ್ತಿ ಮಾಡಬೇಕು ಎಂದು ಎಸ್ಬಿಐ ನೇತೃತ್ವ ಸಾಲ ವಸೂಲಾತಿ ನ್ಯಾಯಾಧಿಕರಣ (DRT) ಮಂಗಳವಾರ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದನ್ನು ಇಲ್ಲಿ ಸ್ಮರಿಸಬಹುದು.

ಯುನೈಟೆಡ್ ಸ್ಪಿರೀಟ್ ಚೇರ್ಮನ್ ಸ್ಥಾನ ತೊರೆದು ಲಂಡನ್ ಗೆ ಹಾರಿರುವ ಮಲ್ಯ ಅವರಿಗೆ ಡಿಯಾಜಿಯೋ ಸಂಸ್ಥೆ ಸುಮಾರು 515 ಕೋಟಿ ರು ನೀಡಲು ಮುಂದಾಗಿತ್ತು. ಆದರೆ, ಈ ಮೊತ್ತ ಮಲ್ಯ ಕೈ ಸೇರದಂತೆ ತಾತ್ಕಾಲಿಕವಾಗಿ ಜಪ್ತಿ ಮಾಡಲು ಡಿಆರ್ ಟಿ ಆದೇಶಿಸಿದೆ. ಜೊತೆಗೆ ಜಾರಿ ನಿರ್ದೇಶನಾಲಯದಿಂದ ಹಣ ದುರಪಯೋಗ ಕೇಸು ದಾಖಲಾಗಿದೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In further trouble for liquor baron Vijay Mallya, the Enforcement Directorate (ED) has sought revocation of his passport in connection with its money laundering probe in the Rs. 900 crore IDBI bank loan fraud case.
Please Wait while comments are loading...