ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ನ್ಯಾಪ್‌ಡೀಲ್ ಮತ್ತು ಶಾಪರ್ ಸ್ಟಾಪ್ ನಡುವೆ ಒಪ್ಪಂದ

|
Google Oneindia Kannada News

ನವದೆಹಲಿ, ಆಗಸ್ಟ್. 07: ಇ ಕಾಮರ್ಸ್ ದಿಗ್ಗಜ ಸ್ನ್ಯಾಪ್ ಡೀಲ್ ರಿಟೈಲ್ ಮಾರುಕಟ್ಟೆಯ ಶಾಪರ್ ಸ್ಟಾಪ್ ಜತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

ಶಾಪರ್ ಸ್ಟಾಪ್ ಭಾರತದ 35 ಮಹಾನಗರಗಳಲ್ಲಿ 74 ಮಳಿಗೆಗಳನ್ನು ಹೊಂದಿದೆ. ಯೋಜನೆಯನ್ನು ಮೊದಲಿಗೆ ಉತ್ತರ ಭಾರತದಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗುವುದು. ನಂತರ ದೇಶಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

E-commerce giant Snapdeal ties up with Shoppers Stop

ಗ್ರಾಹಕರಿಗೆ ಅಂತಿಮವಾಗಿ ಬೇಕಾಗಿರುವುದು ಉತ್ತಮ ದರ್ಜೆಯ ವಸ್ತುಗಳು. ಅದು ಆನ್ ಲೈನ್ ನಲ್ಲಿ ದೊರೆಯುತ್ತದೆಯೋ ಅಥವಾ ಆಫ್ ಲೈನ್ ನಲ್ಲಿ ಸಿಗುತ್ತದೆಯೋ ಎಂಬುದು ಅವರಿಗೆ ಬೇಕಾಗಿಲ್ಲ ಎಂದು ಸ್ನ್ಯಾಪ್ ಡೀಲ್ ಸಿಇಒ ಕುನಾಲ್ ಭಾಲ್ ಹೇಳಿದ್ದಾರೆ.[ಎಚ್‌ಡಿಎಫ್‌ಸಿ ಮತ್ತು ಸ್ನ್ಯಾಪ್‌ಡೀಲ್ ನಡುವೆ ಮಹತ್ವದ ಒಪ್ಪಂದ]

ಸ್ನ್ಯಾಪ್ ಡೀಲ್ ನಲ್ಲಿ ನೀವು ಆರ್ಡರ್ ಮಾಡಿದ ವಸ್ತು ಹತ್ತಿರದ ಶಾಪರ್ ಸ್ಟಾಪ್ ಮಳಿಗೆಯಿಂದಲೇ ಸರಬರಾಜಾಗುತ್ತದೆ. ಈ ಬಗೆಯ ಸಣ್ಣ ಆದರೆ ಬಹುಮುಖ್ಯವಾದ ವ್ಯಾಪಾರ ವಹಿವಾಟಿಗೆ ಮುಂದಿನ ಮೂರು ವರ್ಷದಲ್ಲಿ ಸ್ನ್ಯಾಪ್ ಡೀಲ್ 60 ಕೋಟಿ ರೂ. ವ್ಯಯಿಸಲಿದೆ. ಇದು ನಮ್ಮ ವ್ಯವಹಾರದ ಬೆಳವಣಿಗೆಗೂ ಕಾರಣವಾಗಲಿದೆ ಎಂದು ಶಾಪರ್ ಸ್ಟಾಪ್ ಎಂಡಿ ಗೋವಿಂದ್ ಶೀರ್ಖಂಡೆ ಹೇಳಿದ್ದಾರೆ.

ಇತ್ತೀಚೆಗಷ್ಟೇ ಭಾರತದ ಎರಡನೇ ಅತಿದೊಡ್ಡ ಬ್ಯಾಂಕಿಂಗ್ ದಿಗ್ಗಜ ಎಚ್ ಡಿಎಫ್ ಸಿ ಮತ್ತು ಆನ್ ಲೈನ್ ಮಾರ್ಕೆಟಿಂಗ್ ಮುಂದಾಳು ಸ್ನ್ಯಾಪ್ ಡೀಲ್ ಜಂಟಿಯಾಗಿ ಇ -ಕಾಮರ್ಸ್ ಕ್ರೆಡಿಟ್ ಕಾರ್ಡ್ ವೊಂದನ್ನು ಬಿಡುಗಡೆ ಮಾಡಿದ್ದವು.

English summary
Leading e-commerce gaint Snapdeal has entered into a strategic partnership with retailer Shoppers Stop to launch a digital marketplace through a flagship Shoppers Stop store on Snapdeal. The partnership will leverage Shoppers Stop’s product range and brand and Snapdeal’s reach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X