ಪರಿಶುದ್ಧ ತೆಂಗಿನ ಎಣ್ಣೆ ಮಾರುಕಟ್ಟೆಗೆ ಪರಿಚಯಿಸಿದ ನಟಿ ಶೋಭನಾ
ಬೆಂಗಳೂರು, ಜನವರಿ 08: ಕಳೆದ ಆರು ದಶಕಗಳಿಂದ ಮಂಜೀಲಾಸ್ "ಡಬಲ್ ಹಾರ್ಸ್' ಆಹಾರ ಉತ್ಪನ್ನಗಳ ಪೂರೈಕೆ ವಿಚಾರದಲ್ಲಿ ಅತ್ಯಂತ ಪೌಷ್ಟಿಕಾಂಶಭರಿತ ಹಾಗೂ ಗುಣಮಟ್ಟದ ಪದಾರ್ಥಗಳ ಬಳಕೆ ಮೂಲಕ ಅತ್ಯಂತ ಜನಪ್ರಿಯ ಹೆಸರು ಗಳಿಸಿದೆ. ಈ ಮೂಲಕವೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಪ್ರಮುಖ ಸಂಸ್ಥೆಯಾಗಿ ಹೆಸರು ಮಾಡಿದೆ.
ಡಬಲ್ ಹಾರ್ಸ್ (ಡಿಎಚ್)ನ ಯಾವುದೇ ಆಹಾರ ಉತ್ಪನ್ನವೂ ಹೊರಬರುವುದು ಅತ್ಯಂತ ರುಚಿಕರವಾಗಿ, ಆರೋಗ್ಯಕರವಾಗಿ ಹಾಗೂ ಸರಳ ಲಭ್ಯತೆಗೆ ಅನುವು ಮಾಡಿಕೊಡುವ ರೀತಿಯೇ ಆಗಿರುತ್ತದೆ.
ಇದೀಗ ಡಬಲ್ ಹಾರ್ಸ್ ತಮ್ಮ ಉತ್ಪನ್ನಗಳ ಸರಣಿಗೆ ಇನ್ನೆರಡು ಪ್ರಮುಖ ಉತ್ಪನ್ನವನ್ನು ಸೇರ್ಪಡೆ ಮಾಡುತ್ತಿದೆ. ಡಬಲ್ ಹಾರ್ಸ್ "ತೆಂಗಿನಹಾಲು 200 ಮಿ.ಲೀ. ಹಾಗೂ ಶುದ್ಧ ತೆಂಗಿನ ಎಣ್ಣೆ 250 ಮಿ.ಲೀ.' ಮಾರುಕಟ್ಟೆಗೆ ಬಂದಿದೆ.
ತೆಂಗಿನಹಾಲು ಅತ್ಯಂತ ಉತ್ಕೃಷ್ಟ ಪೌಷ್ಟಿಕ ಪೇಯವಾಗಿದ್ದು, ತೆಂಗಿನಕಾಯಿಯ ತಿರುಳು (ತೆಂಗಿನ ಕಾಯಿಯ ಒಳಗೆ ಸಿಗುವ ಬಿಳಿಯದಾದ ತಿರುಳು) ಬಳಸಿ ಸಿದ್ಧಪಡಿಸಲಾಗುತ್ತದೆ. ತೆಂಗಿನ ಹಾಲು ಒಂದು ವಿನೂತನ ಪೇಯವಾಗಿದೆ. ಹಾಗೂ ಅಲ್ಲದೇ ಇದು ವ್ಯಕ್ತಿಯ ಕೂದಲು, ಚರ್ಮಕ್ಕೆ ಅತ್ಯಂತ ಉತ್ತಮ ರೀತಿಯ ಪೋಷಣೆ ಮಾಡುತ್ತದೆ.

ಡಬಲ್ ಹಾರ್ಸ್ ಸಂಸ್ಥೆ ಎರಡು ಉತ್ಪನ್ನ ಬಿಡುಗಡೆ
ಬೆಂಗಳೂರಿನ ಶಾಂಗ್ರಿ-ಲಾ ಹೋಟೆಲ್‍ನಲ್ಲಿ ಇಂದು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಪದ್ಮಶ್ರೀ ಪುರಸ್ಕೃತ ನಟಿ ಹಾಗೂ ಡಬಲ್ ಹಾರ್ಸ್ ಸಂಸ್ಥೆಯ ಉತ್ಪನ್ನ ರಾಯಬಾರಿ ಕುಮಾರಿ ಶೋಭನಾ ಅವರು ಉತ್ಪನ್ನವನ್ನು ಅಧಿಕೃತವಾಗಿ ಅನಾವರಣಗೊಳಿಸಿದರು. ಮಂಜೀಲಾಸ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ಮಿ. ವಿನೋದ್ ಮಂಜೀಲಾ, ನಿರ್ದೇಶಕ ಮಿ. ಜೋಯ್ ರಾಂಜಿ, ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಮಿ. ಸುನೀಲ್ ಪಿ. ಕೃಷ್ಣನ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಹೊಸ ಉತ್ಪನ್ನವು ಇಂದಿನಿಂದಲೇ ದೇಶ ಹಾಗೂ ವಿದೇಶಗಳ ಎಲ್ಲಾ ಜನಪ್ರಿಯ ಸೂಪರ್‍ಮಾರ್ಕೆಟ್‍ಗಳಲ್ಲಿ, ಹೈಪರ್ ಮಾರ್ಕೆಟ್, ಚಿಲ್ಲರೆ ಮಳಿಗೆಗಳಲ್ಲಿ ದೊರೆಯಲಿದೆ ಎಂದು ತಿಳಿಸಲಾಯಿತು.

ಕರ್ನಾಟಕದ ಪ್ರಮುಖ ನಗರಗಳಲ್ಲಿ ಲಭ್ಯ
ತನ್ನ ವಿಸ್ತರಣೆಯ ಮಾರುಕಟ್ಟೆಯಲ್ಲಿ ಕರ್ನಾಟಕವನ್ನು ಡಬಲ್ ಹಾರ್ಸ್ ಸಂಸ್ಥೆ ಅತ್ಯಂತ ಪ್ರಮುಖವಾಗಿ ಪರಿಗಣಿಸಿದೆ. ರಾಜ್ಯದ ಬೆಂಗಳೂರು, ಮೈಸೂರು ಹಾಗೂ ಮಂಗಳೂರು ಭಾಗದ ಎಲ್ಲಾ ಸೂಪರ್ ಮಾರ್ಕೆಟ್‍ಗಳಲ್ಲಿ, ಹೈಪರ್ ಮಾರ್ಕೆಟ್, ಚಿಲ್ಲರೆ ಮಳಿಗೆ ಹಾಗೂ ದಿನಸಿ ಮಳಿಗೆಗಳಿಗೆ ಸಂಸ್ಥೆಯ ಎಲ್ಲಾ ಉತ್ಪನ್ನಗಳು ತಲುಪುತ್ತಿವೆ. ಉತ್ತರ ಕರ್ನಾಟಕದ ಕೆಲ ಭಾಗವನ್ನು ಹೊರತುಪಡಿಸಿದರೆ ಬಹುತೇಕ ರಾಜ್ಯದಲ್ಲಿ ತನ್ನ ಲಭ್ಯತೆಯನ್ನು ಪ್ರದರ್ಶಿಸಿದೆ. ಡಿಎಚ್‍ನ ಎಲ್ಲಾ ಉತ್ಪನ್ನಗಳಿಗೆ ರಾಜ್ಯದ ಗ್ರಾಹಕರಿಂದ ನಿರೀಕ್ಷೆಗೂ ಮೀರಿದ ಬೇಡಿಕೆ ವ್ಯಕ್ತವಾಗುತ್ತಿದೆ.

ಡಬಲ್ ಹಾರ್ಸ್ ನ ತೆಂಗಿನ ಹಾಲು
ಡಬಲ್ ಹಾರ್ಸ್‍ನ ಅತ್ಯಂತ ಉತ್ಕೃಷ್ಟ ತೆಂಗಿನಕಾಯಿ ಉತ್ಪನ್ನಗಳು ಸೂಕ್ತವಾದ ರೈತರಿಂದ ಕರೀದಿಸಿದ ಉತ್ಪನ್ನದಿಂದ ಪದಾರ್ಥಗಳನ್ನು ಸಿದ್ಧಪಡಿಸಿ ನೀಡುವ ಕಾರ್ಯ ಮಾಡುತ್ತಿದೆ. ಮಾದರಿ ಅನ್ನಿಸುವ ಯಂತ್ರೋಪಕರಣದ ಮೂಲಕ ಅತ್ಯಂತ ತಾಜಾ ಹಾಗೂ ಶುದ್ಧ ತೆಂಗಿನ ಹಾಲು ಸಿದ್ಧಪಡಿಸಿ ಗ್ರಾಹಕರಿಗೆ ನೀಡುವ ಕಾರ್ಯ ಮಾಡುತ್ತಿದೆ. ತೆರೆಯದೇ ಇಟ್ಟರೆ ದೀರ್ಘಕಾಲ ಬಾಳಿಕೆ ಬರುವ ವಿಶಿಷ್ಟ ಸೌಕರ್ಯವನ್ನು ಇದು ಹೊಂದಿದ್ದು, ಉತ್ತಮ ಹಾಗೂ ತಾಜಾ ಗುಣಮಟ್ಟವನ್ನು ಹೊಂದಿದೆ.
ತೆಂಗಿನ ಹಾಲಿನ ಬಳಕೆ ಬಹುತೇಕ ಎಲ್ಲಾ ವಿಧದ ಆಹಾರ ತಯಾರಿಕೆ ಸಂದರ್ಭದಲ್ಲಿಯೂ ಬಳಕೆ ಮಾಡಲಾಗುತ್ತದೆ.
ಕೇರಳ ಹಾಗೂ ಇತರೆ ಭಾಗದಲ್ಲಿ ಕೂಡ ಇದು ಯಥೇಚ್ಛವಾಗಿ ಬಳಕೆಯಾಗುತ್ತದೆ. ಇದು ಆರೋಗ್ಯಕರ ಹಾಗೂ ರುಚಿಯುಳ್ಳ ಮತ್ತು ಬಳಕೆಗೆ ಸೂಕ್ತ ಅನ್ನಿಸುವ ಉತ್ಪನ್ನವಾಗಿದೆ. ಗ್ರಾಹಕರು ಇದರ ಬಳಕೆಗೆ ಹೆಚ್ಚು ಸಮಯ ಹಾಗೂ ಹಣವನ್ನು ವ್ಯಯಿಸುವ ಅಗತ್ಯವೂ ಇಲ್ಲ. ಮುಂದಿನ ದಿನಗಳಲ್ಲಿ ತೆಂಗಿನ ಹಾಲಿಗೆ ಗ್ರಾಹಕರಿಂದ ಹೆಚ್ಚು ಬೇಡಿಕೆ ಬರಲಿದೆ ಎನ್ನುವುದು ಸಂಸ್ಥೆಯ ನಿರೀಕ್ಷೆಯಾಗಿದೆ.

ನೈಸರ್ಗಿಕ ತೆಂಗಿನ ಎಣ್ಣೆ
ನೈಜ ತೆಂಗಿನ ಎಣ್ಣೆ ಒಂದು ಹೊಸದಾದ ಮೌಲ್ಯಯುತ ತೆಂಗಿನ ಎಣ್ಣೆ ಆರೋಗ್ಯಕರ ಆಹಾರ ಮಾರುಕಟ್ಟೆಯ ವಿಭಾಗದ ಅವತರಣಿಕೆಯಾಗಿದೆ. ಡಬಲ್ ಹಾರ್ಸ್ ಹೆಚ್ಚುವರಿ ನೈಜ ತೆಂಗಿನ ಎಣ್ಣೆಯು ಶೇ.100ರಷ್ಟು ನೈಸರ್ಗಿಕ ತೆಂಗಿನ ಎಣ್ಣೆಯಾಗಿದೆ. ತಣ್ಣನೆಯ ಒತ್ತಡ ತಂತ್ರಜ್ಞಾನ ಬಳಸಿ ಅತ್ಯಂತ ನೈಜ ತೆಂಗಿನ ಕಾಯಿಯ ತಿರುಳು ತೆಗೆದು ಸಿದ್ಧಪಡಿಸಲಾಗಿದೆ. ಇದು ತೆಂಗಿನ ಎಣ್ಣೆಯಲ್ಲಿ ಮೈಕ್ರೋನ್ಯೂಟ್ರೀಷಿಯನ್‍ಗಳು ಹಾಳಾಗದಂತೆ ತಡೆಯುವ ಹೊಸ ತಂತ್ರಜ್ಞಾನವಾಗಿದೆ.
ಗಾಯವನ್ನು ಗುಣಪಡಿಸುವುದು, ಡರ್ಮಟೈಟಿಸ್ ಹಾಗೂ ಸೋಂಕುಗಳಿಂದ ಪರಿಹಾರ ಪಡೆಯಲು ಸಾಧ್ಯ. ಉತ್ತಮ ಜೀರ್ಣಶಕ್ತಿಯನ್ನು ಕೂಡ ಹೊಂದಬಹುದಾಗಿದೆ. ಅಲ್ಲದೇ ಈ ಉತ್ಪನ್ನವು ಚರ್ಮ ಹಾಗೂ ಕೂದಲಿನ ಪೋಷಣೆಗೂ ಸಹಕಾರಿ. ಅಡುಗೆ ಮಾಡುವ ಹಾಗೂ ಇತರೆ ಸಂದರ್ಭದ ಬಳಕೆಗೂ ಇದು ಯೋಗ್ಯವಾಗಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications