ಏನಿದು ಆಧಾರ್ ಆಧಾರಿತ ಪೇಮೆಂಟ್ App? ಹೇಗೆ ಕಾರ್ಯ ನಿರ್ವಹಿಸುತ್ತೆ?
ಬೆಂಗಳೂರು, ಡಿಸೆಂಬರ್ 25: ಕೇಂದ್ರ ಸರ್ಕಾರದ ದೇಶದ ಜನತೆಗೆ ಕ್ರಿಸ್ಮಸ್ ಉಡುಗೊರೆ ರೂಪವಾಗಿ ಆಧಾರ್ ಆಧಾರಿತ ಪೇಮೆಂಟ್ ಅಪ್ಲಿಕೇಷನ್ ಹೊರತಂದಿದೆ. ಡಿಜಿಟಲ್ ಇಂಡಿಯಾದ ಭಾಗವಾಗಿರುವ ಈ ಆಂಡ್ರಾಯ್ಡ್ ಆಧಾರಿತ ಆಪ್ ಮೂಲಕ ಸುಲಭವಾಗಿ ಇ ಪೇಮೆಂಟ್ ಮಾಡಬಹುದು.
ಡೆಬಿಟ್/ಕ್ರೆಡಿಟ್ ಕಾರ್ಡ್ಗಳ ಮೂಲಕ ವ್ಯವಹರಿಸುವುದಕ್ಕೆ ಬದಲಾಗಿ ಅತ್ಯಂತ ಸುಲಭವಾಗಿ ನೂತನ ಅಪ್ಲಿಕೇಷನ್ ಬಳಸಬಹುದಾಗಿದೆ. ನಗದು ರಹಿತ ವ್ಯವಹಾರ ಜಾರಿಗೊಳಿಸಲು ಈ ಅಪ್ಲಿಕೇಷನ್ ಹೊರ ತರಲಾಗಿದೆ. ಪೇಟಿಎಂ, ಫ್ರೀಚಾರ್ಚ್ ಮುಂತಾದ ಮೊಬೈಲ್ ವ್ಯಾಲೆಟ್ ಗಳಿಗೆ ಸಮನಾಗಿ ಆಧಾರ್ ಪೇಮೆಂಟ್ ಅಪ್ಲಿಕೇಷನ್ ಬಳಸಬಹುದಾಗಿದೆ.
ಆಂಡ್ರಾಯ್ಡ್ ಫೋನ್ ನಲ್ಲಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಯುಎಡಿಎಐ, ಭಾರತದ ರಾಷ್ಟ್ರೀಯ ಪಾವತಿ ಸಹಕಾರ ಸಂಘ ಮತ್ತು ಐಡಿಎಫ್ಸಿ ಬ್ಯಾಂಕ್ ಈ ಅಪ್ಲಿಕೇಷನ್ ರೂಪಿಸಿದೆ.

ಹೇಗೆ ಕಾರ್ಯ ನಿರ್ವಹಿಸಲಿದೆ?: ಮೊದಲಿಗೆ ಈ ಅಪ್ಲಿಕೇಷನ್ ಬಳಸಲು ನಿಮ್ಮ ಬ್ಯಾಂಕ್ ಖಾತೆಯನ್ನು ನಿಮ್ಮ ಆಧಾರ್ ಸಂಖ್ಯೆ ಜತೆ ಜೋಡಣೆ ಮಾಡಬೇಕು. ಇನ್ನೊಂದೆಡೆ ಮಾರಾಟಗಾರರು ಈ ಅಪ್ಲಿಕೇಷನ್(Merchant App) ಬಳಸಬಹುದಾಗಿದೆ.
ಈ ಮೂಲಕ ಮಾಸ್ಟರ್, ವೀಸಾ ಕಾರ್ಡ್ ಮೂಲಕ ಹಣ ಪಾವತಿ ಮಾಡಲು ಕೊಡಬೇಕಿದ್ದ ಶುಲ್ಕಕ್ಕೆ ಕಡಿವಾಣ ಬೀಳಲಿದೆ.ಮಾರಾಟಗಾರರು ಈ ಅಪ್ಲಿಕೇಷನ್ ಜತೆಗೆ ಬಯೋಮೆಟ್ರಿಕ್ ಸ್ಕ್ಯಾನರ್ ಕೂಡಾ ಹೊಂದಿರಬೇಕು. ಅಪ್ಲಿಕೇಷನ್ ಹಾಗೂ ಸ್ಕ್ಯಾನರ್ ಎರಡನ್ನು ಹೊಂದಿಸಿದ ಬಳಿಕ ಅಪ್ಲಿಕೇಷನ್ ಸುಲಭವಾಗಿ ಬಳಸಬಹುದಾಗಿದೆ.
ಗ್ರಾಹಕರು ಏನು ಮಾಡ್ಬೇಕು?: ಯಾವುದಾದರೂ ವಸ್ತು ಖರೀದಿ ಮಾಡುವಾಗ ಮಾರಾಟಗಾರರ ಬಳಿ ಆಧಾರ್ ಮರ್ಚೆಂಟ್ ಅಪ್ಲಿಕೇಷನ್ ಇದೆಯೇ ಎಂದು ಪ್ರಶ್ನಿಸಬೇಕು. ಅಪ್ಲಿಕೇಷನ್ ಇದ್ದರೆ, ನಿಮ್ಮ ಆಧಾರ್ ವಿವರಗಳನ್ನು ಅವರೊಂದಿಗೆ ಹಂಚಿಕೊಳ್ಳಬೇಕು. ನಂತರ ಆಧಾರ್ ಜತೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರ ಲಭ್ಯವಾಗುತ್ತದೆ. ಬೇಕಾದ ಬ್ಯಾಂಕ್ ಬಳಸಿ ವ್ಯವಹರಿಸಬೇಕು. ಇದರ ಜತೆಗೆ ಬಯೋಮೆಟ್ರಿಕ್ ಸ್ಕ್ಯಾನರ್ ಮೂಲಕ ವ್ಯವಹಾರವನ್ನು ಸುರಕ್ಷಿತಗೊಳಿಸಲಾಗುತ್ತದೆ.
ಎರಡು ಖಾತೆಗಳಿದ್ದರೆ ಏನು ಮಾಡುವುದು?: ಗ್ರಾಹಕರು ಒಂದೇ ಬ್ಯಾಂಕಿನಲ್ಲಿ ಎರಡು ಖಾತೆಗಳನ್ನು ಹೊಂದಿದ್ದರೆ, ಎರಡು ಖಾತೆಗಳಿಗೂ ಆಧಾರ್ ಲಿಂಕ್ ಮಾಡಬೇಕಾಗುತ್ತದೆ. ಈ ರೀತಿ ಆಧಾರ್ ಜೋಡಣೆಯುಳ್ಳ ಬ್ಯಾಂಕ್ ಖಾತೆ ಮೂಲಕ ಸುಲಭವಾಗಿ ಯಾವುದೇ ಕುಗ್ರಾಮದಲ್ಲಿ ಬೇಕಾದರೂ ವ್ಯವಹರಿಸಬಹುದು ಎಂದು ಯುಐಎಡಿಐ ಹೇಳಿದೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications