ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದೆಲ್ಲೆಡೆ ದುಬಾರಿ, ಪೆಟ್ರೋಲ್- ಡೀಸೆಲ್ ಗೆ ಬೆಂಕಿ ಹಚ್ಚಿದ ಬೆಲೆ

|
Google Oneindia Kannada News

Recommended Video

ಪೆಟ್ರೋಲ್ ಡೀಸೆಲ್ ಬೆಲೆ ದೇಶದೆಲ್ಲೆಡೆ ದುಬಾರಿ | Oneinida Kannada

ಡೀಸೆಲ್ ಬೆಲೆ ಆಗಸದೆತ್ತರಕ್ಕೆ ಚಿಮ್ಮಿದೆ. ದೆಹಲಿಯಲ್ಲಿ ಅಟ್ಟ ಹತ್ತಿ ಕೂತಿದೆ ಡೀಸೆಲ್ ಬೆಲೆ. ಕೋಲ್ಕತ್ತಾ ಹಾಗೂ ಚೆನ್ನೈನಲ್ಲಿ ಮೂರು ವರ್ಷದ ಗರಿಷ್ಠ ಮಟ್ಟದಲ್ಲಿದೆ. ಉತ್ತಮ ಬೇಡಿಕೆಯಿಂದ ಕಚ್ಚಾ ತೈಲ ಬೆಲ ದರದ ಏರಿಕೆ ಹಾಗೂ ಒಪೆಕ್ ಮತ್ತು ರಷ್ಯಾದಿಂದ ಉತ್ಪಾದನೆ ಕಡಿಮೆ ಮಾಡಿವೆ ಎಂಬುದು ಇಂದಿನ ಸ್ಥಿತಿಗೆ ಕಾರಣ.

ಮಂಗಳವಾರದಂದು ಸರಕಾರಿ ತೈಲ ಕಂಪನಿಗಳು ದೆಹಲಿಯಲ್ಲಿ ಡೀಸೆಲ್ ಅನ್ನು ಲೀಟರ್ ಗೆ 59.31 ರುಪಾಯಿಗೆ ಮಾರಾಟ ಮಾಡಿದ್ದರೆ, ಕೋಲ್ಕತ್ತಾದಲ್ಲಿ 61.97 ಹಾಗೂ ಚೆನ್ನೈನಲ್ಲಿ 62.48 ರುಪಾಯಿಗೆ ಮಾರಲಾಗಿದೆ. ಮೂರೂಕಾಲು ವರ್ಷದಲ್ಲೇ ಇದು ಗರಿಷ್ಠ ಮಟ್ಟವಾಗಿದೆ. ಇನ್ನು ಮುಂಬೈನಲ್ಲಿ 62.75 ಇದ್ದು, ಕಳೆದ ಅಕ್ಟೋಬರ್ 3 ನಂತರದ ಹೆಚ್ಚಿನ ದರ ಇದಾಗಿದೆ.

ಪೆಟ್ರೋಲ್ ಉತ್ಪನ್ನಕ್ಕೆ ಜಿಎಸ್ ಟಿ : ರಾಜ್ಯಗಳ ಮೇಲೆ ಗೂಬೆ ಕೂರಿಸಿದ ಜೇಟ್ಲಿಪೆಟ್ರೋಲ್ ಉತ್ಪನ್ನಕ್ಕೆ ಜಿಎಸ್ ಟಿ : ರಾಜ್ಯಗಳ ಮೇಲೆ ಗೂಬೆ ಕೂರಿಸಿದ ಜೇಟ್ಲಿ

ಅಂದಹಾಗೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ ಟಿ ಅಡಿಯಲ್ಲಿ ಇನ್ನೂ ತಂದಿಲ್ಲ. ಸ್ಥಳೀಯವಾಗಿ ಎಷ್ಟು ತೆರಿಗೆ ಹಾಕಲಾಗುತ್ತದೆ ಎಂಬ ಆಧಾರದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಬೇರೆ ದರಗಳಿವೆ. ಯಾವಾಗ ಅಮೆರಿಕದಲ್ಲಿ ರಿಫೈನರಿಗಳನ್ನು ಮುಚ್ಚಿದ ನಂತರ ಪೆಟ್ರೋಲ್- ಡೀಸೆಲ್ ದರಗಳು ಏರುಮುಖವಾದಾಗ ಕೇಂದ್ರ ಸರಕಾರ ಪ್ರತಿ ಲೀಟರ್ ಡೀಸೆಲ್ ಹಾಗೂ ಪೆಟ್ರೋಲ್ ಗೆ 2 ರುಪಾಯಿ ಅಬಕಾರಿ ಸುಂಕ ಇಳಿಕೆ ಮಾಡಿತು.

ಗ್ರಾಹಕರಿಗೆ ಲಾಭವಾಗಲಿಲ್ಲ

ಗ್ರಾಹಕರಿಗೆ ಲಾಭವಾಗಲಿಲ್ಲ

ಸದ್ಯದ ತೈಲ ಬೆಲೆ ಏರಿಕೆ ಕಾರಣದಿಂದ ಕೇಂದ್ರ ಸರಕಾರ ಇಳಿಸಿದ 2 ರುಪಾಯಿ ಸುಂಕದ ಲಾಭ ಗ್ರಾಹಕರಿಗೆ ಏನೇನೂ ಆಗಲಿಲ್ಲ. ಕೇಂದ್ರ ಸರಕಾರ ಮನವಿ ಮಾಡಿದ ಕಾರಣಕ್ಕೆ ಮಹಾರಾಷ್ಟ್ರ ಹಾಗೂ ಗುಜರಾತ್ ನಂಥ ರಾಜ್ಯಗಳು ಪೆಟ್ರೋಲ್ - ಡೀಸೆಲ್ ಮೇಲಿನ ಸ್ಥಳೀಯ ತೆರಿಗೆ, ವ್ಯಾಟ್ ಕಡಿಮೆ ಮಾಡಿದವು. ಆದ್ದರಿಂದ ಈ ರಾಜ್ಯಗಳಲ್ಲಿ ಬೆಲೆ ಏರಿಕೆ ಸ್ವಲ್ಪ ನಿಧಾನವಾಗಿದೆ.

ಗರಿಷ್ಠ ಮಟ್ಟಕ್ಕೆ ತಲುಪಿದೆ

ಗರಿಷ್ಠ ಮಟ್ಟಕ್ಕೆ ತಲುಪಿದೆ

ಕಳೆದ ನವೆಂಬರ್ ಹದಿನಾರರಿಂದ ಈಚೆಗೆ ಮಂಗಳವಾರದಂದು ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಗರಿಷ್ಠ ಮಟ್ಟ ತಲುಪಿದೆ. ಅಕ್ಟೋಬರ್ ನಿಂದ ಈಚೆಗೆ ಮುಂಬೈನಲ್ಲಿ ಮಂಗಳವಾರ ಗರಿಷ್ಠ ಮಟ್ಟ ತಲುಪಿತು. ಡೀಸೆಲ್ ದರ ಏರಿಕೆ ಅಂದರೆ ಸಂಚಾರ ವ್ಯವಸ್ಥೆಯಲ್ಲಿನ ದರ ಏರಿಕೆ, ಡೀಸೆಲ್ ನಿಂದ ಚಾಲನೆ ಆಗುವ ವಾಹನಗಳು- ಶಕ್ತಿಯ ಮೇಲೆ ಅವಲಂಬಿತರಾದ ಎಲ್ಲರಿಗೂ ಹೊಡೆತ.

ಆರು ತಿಂಗಳಿಂದ ಏರು ಮುಖ

ಆರು ತಿಂಗಳಿಂದ ಏರು ಮುಖ

ಕೇಂದ್ರ ಹಾಗೂ ರಾಜ್ಯ ಸರಕಾರದ ತೆರಿಗೆ ಯಾವ ಪ್ರಮಾಣದಲ್ಲಿದೆ ಅಂದರೆ, ಪೆಟ್ರೋಲ್- ಡೀಸೆಲ್ ನ ಚಿಲ್ಲರೆ ದರದ ಅರ್ಧದಷ್ಟು ಮೊತ್ತ ತೆರಿಗೆಯೇ ಇದೆ. ಕಳೆದ ಆರು ತಿಂಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರದ ಬೆಲೆ ಶೇ 42ರಷ್ಟು ಹೆಚ್ಚಳವಾಗಿ ಬ್ಯಾರಲ್ ಕಚ್ಚಾ ತೈಲದ ದರ 65 ಅಮೆರಿಕನ್ ಡಾಲರ್ ತಲುಪಿದೆ.

ಹೆಚ್ಚಿನ ತೆರಿಗೆ ಮಹಾರಾಷ್ಟ್ರದ ಮುಂಬೈನಲ್ಲಿ

ಹೆಚ್ಚಿನ ತೆರಿಗೆ ಮಹಾರಾಷ್ಟ್ರದ ಮುಂಬೈನಲ್ಲಿ

ಸದ್ಯಕ್ಕೆ ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ ಅತಿ ಹೆಚ್ಚಿನ ಸುಂಕ ಹಾಕುತ್ತಿರುವುದು ಮಹಾರಾಷ್ಟ್ರದ ಮುಂಬೈನಲ್ಲಿ 22.27 ರುಪಾಯಿ. ಇನ್ನು ಅತ್ಯಂತ ಕಡಿಮೆ ಸುಂಕ ಗುಜರಾತ್ ನಲ್ಲಿ 12.66 ರುಪಾಯಿ. ಇನ್ನು ಡೀಸೆಲ್ ಗೆ ಹೆಚ್ಚಿನ ತೆರಿಗೆ 14.64 ರುಪಾಯಿ ವಿಧಿಸುವುದು ಆಂಧ್ರದಲ್ಲಾದರೆ, ಅತ್ಯಂತ ಕಡಿಮೆ ಪಂಜಾಬ್ ನಲ್ಲಿ 8.58 ರುಪಾಯಿ. ಪೆಟ್ರೋಲಿಯಂನಿಂದ ರಾಜ್ಯಗಳಿಗೆ ದೊರಕುವುದು 1,89,587 ಕೋಟಿ ತೆರಿಗೆ, ಕೇಂದ್ರಕ್ಕೆ ದೊರಕುವುದು 2,73,502 ಕೋಟಿ ರುಪಾಯಿ ತೆರಿಗೆ.

English summary
Diesel prices have soared in the country, in Delhi and touching 3 year highs in Kolkata and Chennai as crude oil surges on good demand and production cuts led by OPEC and Russia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X