ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಭಾಂಶ ಪಾವತಿ ವಿಳಂಬ; ಕಂಪನಿ ಮೇಲಿನ ಕ್ರಿಮಿನಲ್ ಕೇಸ್ ರದ್ದಿಗೆ ಹೈಕೋರ್ಟ್ ನಕಾರ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು ಮೇ 27: ನಿಗದಿತ ಅವಧಿಯಲ್ಲಿ ಕಂಪನಿಯ ಲಾಭಾಂಶ ನೀಡದೆ ವಿಳಂಬ ಮಾಡಿದ್ದಕ್ಕಾಗಿ ಹೂಡಿದ್ದ ಕ್ರಿಮಿನಲ್ ಕೇಸ್ ಅನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

ಅಲ್ಲದೆ, ಕಂಪನಿ ಕಾಯ್ದೆಯ ನಿಬಂಧನೆಗಳ ಪ್ರಕಾರ ನಿರ್ದಿಷ್ಟ ಅವಧಿಯೊಳಗೆ ಘೋಷಿತ ಲಾಭಾಂಶವನ್ನು ಪಾವತಿಸದ ಖಾಸಗಿ ಟೆಲಿಕಾಂ ಕಂಪನಿ ಮತ್ತು ಅದರ ನಿರ್ದೇಶಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿರುವುದನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.

ವೈರ್‌ಲೆಸ್ ದೂರಸಂಪರ್ಕ ಉತ್ಪನ್ನಗಳ ತಯಾರಿಕೆ ವ್ಯವಹಾರದಲ್ಲಿ ತೊಡಗಿರುವ ಬೆಂಗಳೂರಿನ ಕಾವೇರಿ ಟೆಲಿಕಾಂ ಪ್ರಾಡಕ್ಟ್ಸ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇತರ ನಿರ್ದೇಶಕರು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

Delay in Dividend Payment: HC Refuse to Quash Case Against a Private Company

"ಕಂಪನಿಯು ತನ್ನ ಎಲ್ಲಾ ಷೇರುದಾರರಿಗೆ ದಂಡದ ಬಡ್ಡಿಯೊಂದಿಗೆ ಲಾಭಾಂಶವನ್ನು ಸ್ವಲ್ಪ ವಿಳಂಬ ಮಾಡಿ ಪಾವತಿಸಿದೆ ಎಂದು ಹೇಳಿದ್ದರೂ, ನಂತರದ ಲಾಭಾಂಶ ಪಾವತಿಸುವುದರಿಂದ ಕಂಪನಿಯನ್ನು ದಂಡದ ನಿಬಂಧನೆಯಿಂದ ಮುಕ್ತಗೊಳಿಸಲಾಗುವುದಿಲ್ಲ. ಇಲ್ಲದಿದ್ದರೆ, ಶಾಸನ ಪುಸ್ತಕದಲ್ಲಿ ದಂಡದ ನಿಬಂಧನೆ ನಮೂದಿಸುವುದರಲ್ಲಿ ಯಾವುದೇ ಅರ್ಥವಿಲ್ಲ'' ಎಂದು ನ್ಯಾಯಾಲಯ ಹೇಳಿದೆ.

ಕಂಪನಿಯು ಈಗಾಗಲೇ ಎಲ್ಲಾ ಭಾಗಿಸಿದ ಹಣವನ್ನು ವಿಳಂಬವಾದರೂ ಸಹ ಪಾವತಿಸಿರುವುದರಿಂದ ಪ್ರಾಸಿಕ್ಯೂಷನ್ ಅನ್ನು ಮುಂದುವರಿಸಲಾಗುವುದಿಲ್ಲ ಎಂದು ಹೇಳಿಕೊಂಡಿದೆ. ಆದರೆ ದೂರು ಸಲ್ಲಿಸಿದ ನಂತರವೂ ಕೆಲವು ಪಾವತಿಗಳನ್ನು ಮಾಡಲಾಗಿದೆ ಮತ್ತು ಲಾಭಾಂಶ ಪಾವತಿಯಲ್ಲಿ ಮೂರು ವರ್ಷಗಳ ವಿಳಂಬವಾಗಿರುವುದರಿಂದ ಕಂಪನಿಗೆ ಕಾನೂನು ಕ್ರಮದಿಂದ ಮುಕ್ತಿ ನೀಡಲಾಗುವುದಿಲ್ಲ'' ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ:

2012ರ ಸೆಪ್ಟೆಂಬರ್ 29ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಾವೇರಿ ಟೆಲಿಕಾಂ ಪ್ರಾಡಕ್ಟ್ಸ್ ಲಿಮಿಟೆಡ್ ಕಂಪನಿಯು ಒಟ್ಟು ₹3.01 ಕೋಟಿ ಲಾಭಾಂಶವನ್ನು ಘೋಷಿಸಿದೆ ಎಂದು ಸೆಬಿ ಆರೋಪಿಸಿತ್ತು. ಆದರೂ ಕಂಪನಿಯು ಐದು ದಿನಗಳಲ್ಲಿ ಈ ಮೊತ್ತವನ್ನು ಪ್ರತ್ಯೇಕ ಬ್ಯಾಂಕ್ ಖಾತೆಗೆ ಜಮೆ ಮಾಡಲು ವಿಫಲವಾಗಿದೆ ಮತ್ತು ಕಂಪನಿಗಳ ಕಾಯಿದೆಯ ನಿಬಂಧನೆಗಳ ಪ್ರಕಾರ 30 ದಿನಗಳಲ್ಲಿ ತನ್ನ ಷೇರುದಾರರಿಗೆ ಲಾಭಾಂಶವನ್ನು ವರ್ಗಾಯಿಸಲು ವಿಫಲವಾಗಿದೆ.

ಕಂಪನಿಯು ಶಾಸನಬದ್ಧ ನಿಬಂಧನೆಗಳ ಉಲ್ಲಂಘನೆಯನ್ನು ಒಪ್ಪಿಕೊಂಡಿದ್ದರೂ ದೂರು ಸಲ್ಲಿಸುವಲ್ಲಿ ವಿಳಂಬ ಮತ್ತು ನಂತರ ಕಂಪನಿಗಳ ಕಾಯಿದೆಯ ನಿಬಂಧನೆಗಳಲ್ಲಿ ಬದಲಾವಣೆಗಳನ್ನು ಉಲ್ಲೇಖಿಸಿ ಪರಿಹಾರವನ್ನು ಕೋರಿತ್ತು.

ಅರ್ಜಿದಾರರ ಕಂಪನಿ, 2016ರಲ್ಲಿ ವಿಚಾರಣಾ ನ್ಯಾಯಾಲಯದ ಮುಂದೆ ತಮ್ಮ ವಿರುದ್ಧ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೂಡಿರುವ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಶ್ನಿಸಿದ್ದರು. ವಿಚಾರಣಾ ನ್ಯಾಯಾಲಯ ಕ್ರಿಮಿನಲ್ ಕೇಸ್ ರದ್ದು ಮಾಡಲು ನಿರಾಕರಿಸಿತ್ತು, ಇದೀಗ ಆ ಆದೇಶವನ್ನು ಹೈಕೋರ್ಟ್ ಕೂಡ ಊರ್ಜಿತಗೊಳಿಸಿದೆ.

English summary
Delay in Dividend payment: HC refuse to quash case against a private company, ask to face trail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X