ಟಾಟಾ ಸಂಸ್ಥೆಯಿಂದ ಹೊರ ಬಂದ ಮಿಸ್ತ್ರಿ, ಕಾನೂನು ಹೋರಾಟಕ್ಕೆ ಸಜ್ಜು!

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 20: ಟಾಟಾ ಸಮೂಹದ ಆರು ಸಂಸ್ಥೆಗಳ ನಿರ್ದೇಶಕ ಮಂಡಳಿಗಳಿಂದ ಸೈರಸ್‌ ಮಿಸ್ತ್ರಿ (48) ಅವರು ಹೊರ ಬಂದಿದ್ದಾರೆ. ಆರು ಸಂಸ್ಥೆಗಳ ಪೈಕಿ ನಾಲ್ಕು ಸಂಸ್ಥೆಗಳಲ್ಲಿ ಮಿಸ್ತ್ರಿ ವಿರುದ್ಧ ಮತಗಳು ಬಂದಿತ್ತು. ಹೀಗಾಗಿ ಟಾಟಾ ಸಮೂಹದ ಪದಚ್ಯುತ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಅವರು ಸೋಮವಾರ ಟಾಟಾ ಸನ್ಸ್ ನಿಂದ ಹೊರ ಬಂದಿದ್ದಾರೆ.

ಟಾಟಾ ಮೋಟಾರ್ಸ್‌ ಮತ್ತು ಇಂಡಿಯನ್‌ ಹೋಟೆಲ್ಸ್‌ ಸೇರಿದಂತೆ ಟಾಟಾ ಸಮೂಹ ಸಂಸ್ಥೆಯಿಂದ ಹೊರ ಬಂದಿರುವ ಮಿಸ್ತ್ರಿ ಅವರು ಕಾನೂನು ಹೋರಾಟ ನಡೆಸುವ ಸಾಧ್ಯತೆಯಿದೆ. ಮಿಸ್ತ್ರಿ ಅವರನ್ನು ಅಧ್ಯಕ್ಷ ಹುದ್ದೆಯಿಂದ ಅ.24ರಂದು ಹೊರಹಾಕಲಾಗಿತ್ತು.ಅತಿ ದೊಡ್ಡ ಉದ್ದಿಮೆ ಸಮೂಹವನ್ನು ಕೋರ್ಟ್‌ಗೆ ಎಳೆಯುವೆ ಎಂದು ಮಿಸ್ತ್ರಿ ಹೇಳಿದ್ದಾರೆ.

ಟಾಟಾ ಸಮೂಹದ ಆರು ಸಂಸ್ಥೆಗಳ ನಿರ್ದೇಶಕ ಮಂಡಳಿಗಳಿಂದ ಸೈರಸ್‌ ಮಿಸ್ತ್ರಿ (48) ಅವರು ಹೊರ ಬಂದಿದ್ದಾರೆ. ಆರು ಸಂಸ್ಥೆಗಳ ಪೈಕಿ ನಾಲ್ಕು ಸಂಸ್ಥೆಗಳಲ್ಲಿ ಮಿಸ್ತ್ರಿ ವಿರುದ್ಧ ಮತಗಳು ಬಂದಿತ್ತು. ಹೀಗಾಗಿ ಟಾಟಾ ಸಮೂಹದ ಪದಚ್ಯುತ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಅವರು ಸೋಮವಾರ ಟಾಟಾ ಸನ್ಸ್ ನಿಂದ ಹೊರ ಬಂದಿದ್ದಾರೆ.

1968ರ ಜುಲೈ 4ರಂದು ಜನಿಸಿರುವ ಸೈರಸ್, 1991ರಲ್ಲಿ ಶಪೂರ್ಜಿ ಪಲ್ಲೊಂಜಿ ಸಂಸ್ಥೆಗೆ ನಿರ್ದೇಶಕರಾಗಿ ಸೇರಿಕೊಂಡು ಸಂಸ್ಥೆಯ ವಹಿವಾಟನ್ನು ಗಮನಾರ್ಹವಾಗಿ ವಿಸ್ತರಿಸಿದರು. 2006ರಲ್ಲಿಯೇ ಇವರು ಟಾಟಾ ಸನ್ಸ್‌ನ ಆಡಳಿತ ಮಂಡಳಿಗೆ ನೇಮಕಗೊಂಡಿದ್ದರು. ಸದ್ಯಕ್ಕೆ ಅವರು ಟಾಟಾ ಸನ್ಸ್ ಮತ್ತು ಟಾಟಾ ಎಲ್‌ಎಕ್ಸಿ (ಭಾರತ) ನಿರ್ದೇಶಕರಾಗಿದ್ದರು. ಹೀಗಾಗಿ ಟಾಟಾ ಸನ್ಸ್ ಸಂಸ್ಥೆಯ ಒಳ ವಿವರಗಳು ಮಿಸ್ತ್ರಿಗೆ ಚೆನ್ನಾಗಿ ಗೊತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cyrus Mistry, the ousted chairman of Tata Sons, has resigned from all Tata Group companies at the start of a week when four of the firms were to vote on removing him as director in extraordinary general meetings or EGMs.
Please Wait while comments are loading...