ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಕನಸಿನ ಮನೆ ಸಾಕಾರಕ್ಕೆ ಕ್ರೆಡಾಯ್ ಸಹಕಾರ

|
Google Oneindia Kannada News

ಬೆಂಗಳೂರು, ಆಗಸ್ಟ್ 31, 2016: ಬೆಂಗಳೂರು ನಗರದ ನಾಗರಿಕರಿಗೆ ಕನಸಿನ ಸೂರು ಕಟ್ಟಿಕೊಳ್ಳುವ ಸುವರ್ಣಾವಕಾಶ ಮತ್ತೊಮ್ಮೆ ಒದಗಿ ಬಂದಿದೆ. ಕ್ರೆಡಾಯ್ ಬೆಂಗಳೂರು ಘಟಕ (ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ) ಸೆಪ್ಟೆಂಬರ್ 3 ಮತ್ತು 4 ರಂದು 5 ನೇ ರಿಯಾಲಿಟಿ ಎಕ್ಸ್ ಪೋ ಅನ್ನು ಆಯೋಜಿಸಿದೆ.

ಮಾರತ್ ಹಳ್ಳಿಯ ಹೊಟೇಲ್ ಪಾರ್ಕ್ ಪ್ಲಾಜಾದಲ್ಲಿ ಈ ಎಕ್ಸ್ ಪೋ ನಡೆಯಲಿದೆ.ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಕನಸಿನ ಸೂರು ಹೊಂದುವ ವಿಧಾನಗಳ ಬಗ್ಗೆ ಸೂಕ್ತ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಹೊಸ ಮನೆ ಕನಸನ್ನು ಸಾಕಾರ ಮಾಡಿಕೊಳ್ಳಬಹುದು.[ಕೆಂಪಾಪುರ ಹೆಬ್ಬಾಳ: ಉತ್ತರ ಬೆಂಗಳೂರಿನ ಹಾಟ್‌ ಸ್ಪಾಟ್!]

CREDAI Realty Expo on 3 and 4th Sept, 2016, Bengaluru

42 ಬಿಲ್ಡರ್ ಗಳು, 3 ಹಣಕಾಸು ಸಂಸ್ಥೆಗಳು ಈ ಎಕ್ಸ್ ಪೋ ದಲ್ಲಿ ಪಾಲ್ಗೊಳ್ಳಲಿದ್ದು, ಪ್ರತಿಯೊಂದು ಮಳಿಗೆಯಲ್ಲೂ ಸಾರ್ವಜನಿಕರಿಗೆ ವೈಯಕ್ತಿಕವಾಗಿ ಮಾಹಿತಿಗಳನ್ನು ನೀಡಲಿದ್ದಾರೆ. ಈ ಮೂಲಕ ಗ್ರಾಹಕರಿಗೆ ಹೆಚ್ಚಿನ ಅವಕಾಶಗಳು ದೊರೆತು ಅವರಿಗೆ ಸೂಕ್ತವಾದ ಮನೆಯನ್ನು ಖರೀದಿ ಮಾಡುವ ನಿರ್ಧಾರಕ್ಕೆ ಬರಬಹುದು.[ಮನೆ ಕೊಳ್ಳುವ ಕನಸು ನನಸು ಮಾಡಲಿದೆ ಡಿಎಸ್ ಮ್ಯಾಕ್ಸ್]

ಕ್ರೆಡಾಯ್ ಬೆಂಗಳೂರು ಘಟಕದ ಕಾರ್ಯದರ್ಶಿ ಸುರೇಶ್ ಹರಿ ಮಾತನಾಡಿ, ವಸತಿ ಸಮುಚ್ಚಯಗಳ ಮಾಲೀಕರು, ಹಣಕಾಸು ಸಂಸ್ಥೆಗಳ ಸೌಲಭ್ಯಗಳು ಸೇರಿದಂತೆ ಹಲವಾರು ವಿಚಾರದಲ್ಲಿ ವಿಶ್ವಾಸ ಅರ್ಹವಾದ ಮಾಹಿತಿಗಳು ಲಭ್ಯವಾಗಲಿವೆ. ಹಿಂದಿನ ಕಾರ್ಯಕ್ರಮಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇದಕ್ಕೂ ಬೆಂಬಲ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಕ್ಷಿಪ್ತ ಮಾಹಿತಿ
ಕ್ರೆಡಾಯ್ ರಿಯಾಲ್ಟಿ ಎಕ್ಸ್ ಪೋ
ಸ್ಥಳ: ಮಾರತ್ ಹಳ್ಳಿಯ ಹೊಟೇಲ್ ಪಾರ್ಕ್ ಪ್ಲಾಜಾ
ದಿನಾಂಕ: ಸೆಪ್ಟೆಂಬರ್ 3 ಮತ್ತು 4
ಸಮಯ: ಬೆಳಗ್ಗೆ 10.30 ರಿಂದ ರಾತ್ರಿ 8 ರವರೆಗೆ, ಉಚಿತ ಪ್ರವೇಶ

English summary
The Bangalore Chapter of CREDAI (Confederation of Real Estate Developers Association of India) will be hosting the 5th edition of its Realty Expo at Hotel Park Plaza, Marathahalli on 3rd and 4th September, 2016. The Expo will have a comprehensive set of participants including 42 builders and 3 financial institutions, each of whom will be personally interacting with interacting with prospective consumers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X